ವಿಶ್ವನಾಥ್ ಆನಂದ್ ಜೊತೆ ಚೆಸ್ ಆಡಲಿದ್ದಾರೆ ಅಮೀರ್ ಖಾನ್

09-06-21 04:25 pm       Filmbeat : Bharath Kumar K   ಸಿನಿಮಾ

ಜೂನ್ 13 ರಂದು ಆ ಕಾಂಪಿಟೇಶನ್ ನಡೆಯಲಿದ್ದು, ಐದು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಭಾರತ ಚೆಸ್ ಮಾಸ್ಟರ್ ವಿಶ್ವನಾಥ್ ಆನಂದ್ ಎದುರು ಸೆಲೆಬ್ರಿಟಿಗಳು ಚೆಸ್ ಆಡಲಿದ್ದಾರೆ.

ಕೋವಿಡ್ ಎರಡನೇ ಅಲೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸೆಲೆಬ್ರಿಟಿಗಳು ಹಲವು ರೀತಿಯಲ್ಲಿ ಸಹಾಯ ಹಸ್ತ ಚಾಚಿದ್ದಾರೆ. ದಿನಸಿ ಕಿಟ್, ಆಕ್ಸಿಜನ್, ವೆಂಟಿಲೇಟರ್, ಆಂಬುಲೆನ್ಸ್ ಹೀಗೆ ಅನೇಕ ರೀತಿಯಲ್ಲಿ ನೆರವು ನೀಡಿದ್ದಾರೆ.

ಇದೀಗ, ಚೆಸ್ ಆಟಕ್ಕೆ ಸಂಬಂಧಿಸಿದ ಸಮುದಾಯಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಚೆಸ್‌.ಕಾಮ್ ಸಂಸ್ಥೆ 'ಚೆಕ್‌ಮೆಟ್ ಕೋವಿಡ್' ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು, ಇದರಲ್ಲಿ ಖ್ಯಾತ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ ಎಂಬ ವಿಚಾರ ತಿಳಿದಿದೆ.

ಜೂನ್ 13 ರಂದು ಆ ಕಾಂಪಿಟೇಶನ್ ನಡೆಯಲಿದ್ದು, ಐದು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಭಾರತ ಚೆಸ್ ಮಾಸ್ಟರ್ ವಿಶ್ವನಾಥ್ ಆನಂದ್ ಎದುರು ಸೆಲೆಬ್ರಿಟಿಗಳು ಚೆಸ್ ಆಡಲಿದ್ದಾರೆ.ಚೆಸ್‌.ಕಾಮ್ ವಿಶ್ವನಾಥ್ ಆನಂದ್ ಎದುರು ಆಡಲಿರುವ ಮೊದಲ ಸೆಲೆಬ್ರಿಟಿ ಹೆಸರು ಬಹಿರಂಗಗೊಂಡಿದೆ. ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಚೆಸ್ ಮಾಸ್ಟರ್ ವಿ ಆನಂದ್ ಜೊತೆ ಪ್ರದರ್ಶಕ ಪಂದ್ಯವನ್ನಾಡಲಿದ್ದಾರೆ ಎಂದು ಪ್ರಕಟಿಸಿದೆ. ಅಂದ್ಹಾಗೆ, ಈ ಹಿಂದೆಯೇ ವಿಶ್ವನಾಥ್ ಆನಂದ್ ಜೊತೆ ಅಮೀರ್ ಖಾನ್ ಚೆಸ್ ಆಡಿದ್ದಾರೆ. ಚೆಸ್ ಆಟದಲ್ಲಿ ಅಮೀರ್ ಖಾನ್ ಹೆಚ್ಚು ಆಸಕ್ತಿ ಹೊಂದಿದ್ದು, ಚಿತ್ರೀಕರಣದ ಬಿಡುವಿನ ಸಮಯದಲ್ಲೂ ಅಮೀರ್ ಚೆಸ್ ಆಡ್ತಾರೆ ಎಂದು ಸಹಕಲಾವಿದರು ಹೇಳಿಕೊಂಡಿದ್ದಾರೆ. 

ಅಮೀರ್ ಖಾನ್ ಮತ್ತು ವಿಶ್ವನಾಥ್ ಅನಂದ್ ಪಂದ್ಯವನ್ನು ಹಿಂದಿ ಚಿತ್ರರಂಗದ ಮತ್ತೊಬ್ಬ ಖ್ಯಾತ ನಟ ಹೃತಿಕ್ ರೋಷನ್ ಪ್ರಚಾರ ಮಾಡುವುದರ ಮೂಲಕ ಚೆಸ್‌.ಕಾಮ್ ಪ್ರಯತ್ನಕ್ಕೆ ಬೆಂಬಲ ಸೂಚಿಸಿದ್ದಾರೆ.

ಜೂನ್ 13 ರಂದು ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ಸೆಲೆಬ್ರಿಟಿ ಎಡಿಷನ್ ನಡೆಯಲಿದ್ದು, ಆ ಪಂದ್ಯಗಳ ನೇರ ಪ್ರಸಾರ ಚೆಸ್‌.ಕಾಮ್ ಯೂಟ್ಯೂಬ್ ಚಾನಲ್‌ನಲ್ಲಿ ಪ್ರಸಾರವಾಗಲಿದೆ.

(Kannada Copy of Filmbeat Kannada)