ಸಂಚಾರಿ ವಿಜಯ್ ಅಂಗಾಂಗ ದಾನದಿಂದ ಏಳು ಜನಕ್ಕೆ ಹೊಸ ಜೀವನ

15-06-21 10:32 am       Filmbeat : Bharath Kumar K   ಸಿನಿಮಾ

ಅಂಗಾಂಗ ದಾನದ ಮೂಲಕ 7 ಜನರ ಬದುಕಿಗೆ ಬೆಳಕಾದ ಸಂಚಾರಿ ವಿಜಯ್ ಸಾವಲ್ಲೂ ಸಾರ್ಥಕತೆ ಮೆರೆದಿರೋ ಅಪ್ರತಿಮ ಕಲಾವಿದ

ಸಾವಿನಲ್ಲೂ ಸಾರ್ಥಕತೆ ಮೆರೆದ ನಟ ಸಂಚಾರಿ ವಿಜಯ್ ದೇಹದ ಅಂಗಾಂಗಗಳನ್ನು ದಾನ ಮಾಡಿರುವುದು ತಿಳಿರುವುದು ವಿಚಾರ. ಈಗಾಗಲೇ ಅಪೋಲೋ ಆಸ್ಪತ್ರೆಯಲ್ಲಿ ಅಂಗಾಂಗಳ ದಾನ ಪ್ರಕ್ರಿಯೆ ಪೂರ್ಣಗೊಂಡಿದೆ.

ವೈದ್ಯರು ನೀಡಿರುವ ಮಾಹಿತಿ ಪ್ರಕಾರ ವಿಜಯ್ ದೇಹದಿಂದ ಎರಡು ಕಿಡ್ನಿ, ಎರಡು ಕಣ್ಣು, ಲಿವರ್, ಹಾಗೂ ಹೃದಯ ವ್ಯಾಲ್ಸ್ ಪಡೆಯಲಾಗಿದೆ ಎಂದು ಜೀವ ಸಾರ್ಥಕತೆ ತಂಡದ ನೌಷಾದ್ ಪಾಷ ಹೇಳಿದ್ದಾರೆ. ವಿಜಯ್ ಅವರಿಂದು ಒಟ್ಟು ಏಳು ಜನರಿಗೆ ಹೊಸ ಜೀವನ ಸಿಗಲಿದೆ ಎಂದು ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ.

ಇಬ್ಬರಿಗೆ ತಲಾ ಒಂದೊಂದು ಕಣ್ಣು, ಇಬ್ಬರಿಗೆ ತಲಾ ಒಂದೊಂದು ಕಿಡ್ನಿ, ಲಿವರ್ ಒಬ್ಬರಿಗೆ ಹಾಗೂ ಹೃದಯ ವ್ಯಾಲ್ಸ್ ಇಬ್ಬರಿಗೆ ಹಾಕಬಹುದು ಎಂದು ಜೀವ ಸಾರ್ಥಕತೆ ತಂಡ ನೌಷಾದ್ ಪಾಷ ಮಾಧ್ಯಮಗಳಿಗೆ ತಿಳಿಸಿದರು.ರಾತ್ರಿ 9 ಗಂಟೆಗೆಯಿಂದ ದೇಹದ ಅಂಗಾಗ ದಾನದ ಪ್ರಕ್ರಿಯೆ ನಡೆದಿದ್ದು, ಮುಂಜಾನೆ 3.34ಕ್ಕೆ ಪೂರ್ಣಗೊಂಡಿದೆ. ಈ ಮೊದಲೇ ಅಂಗಾಂಗ ಕಸಿಗೂ ತಯಾರಿ ನಡೆಸಿದ್ದು, ವಿಜಯ್ ದೇಹದಿಂದ ತೆಗೆಯಲಾದ ಅಂಗಾಂಗಳನ್ನು ಇತರೆ ರೋಗಿಗಳಿಗೆ ಹಾಕುವ ಪ್ರಕ್ರಿಯೆ ಸಹ ನಡೆದಿದೆ ಎಂದು ತಿಳಿದು ಬಂದಿದೆ.

ಅಪೋಲೋ ಆಸ್ಪತ್ರೆಯಲ್ಲಿಯೇ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಬೆಳಗ್ಗೆ 8 ರಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಮಧ್ಯಾಹ್ನ 12 ಗಂಟೆ ಬಳಿಕ ಚಿಕ್ಕಮಗಳೂರು ಜಿಲ್ಲೆಯ ಪಂಚನಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲು ಕುಟುಂಬ ತೀರ್ಮಾನಿಸಿದೆ.

(Kannada Copy of Filmbeat Kannada)