ಗಂಡು ಮಗುವಿಗೆ ಜನ್ಮ ನೀಡಿದ ನಟಿ ಗೀತಾ ಬಸ್ರಾ

10-07-21 04:04 pm       Filmbeat : Bharath Kumar K   ಸಿನಿಮಾ

ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರ ಹರ್ಭಜನ್ ಸಿಂಗ್ ಮತ್ತು ನಟಿ ಗೀತಾ ಬಸ್ರಾ ದಂಪತಿ ಎರಡನೇ ಮಗುವನ್ನು ಸ್ವಾಗತಿಸಿದ್ದಾರೆ.

ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರ ಹರ್ಭಜನ್ ಸಿಂಗ್ ಮತ್ತು ನಟಿ ಗೀತಾ ಬಸ್ರಾ ದಂಪತಿ ಎರಡನೇ ಮಗುವನ್ನು ಸ್ವಾಗತಿಸಿದ್ದಾರೆ. ಶನಿವಾರ ಮಧ್ಯಾಹ್ನ ಗೀತಾ ಬಸ್ರಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಹರ್ಭಜನ್ ಸಿಂಗ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, 'ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ' ಎಂದು ತಿಳಿಸಿದ್ದಾರೆ.

ಎರಡನೇ ಬಾರಿ ತಂದೆಯಾದ ಸಂತಸವನ್ನು ಹಂಚಿಕೊಂಡಿರುವ ಹರ್ಭಜನ್, ''ಅದ್ಭುತ ಉಡುಗೊರೆ, ಇದು ಬಹಳ ವಿಶೇಷವಾದ ಕ್ಷಣ. ನಮ್ಮ ಜೀವನ ಸಂಪೂರ್ಣವಾಗಿದೆ, ನಾವು ಸಂತೋಷ ಸಾಗರದಲ್ಲಿ ಮುಳುಗಿದ್ದೇವೆ. ನಮ್ಮ ಕ್ಷೇಮ ಹಾಗು ಸಂತಸಕ್ಕಾಗಿ ಶುಭಕೋರಿದ ಎಲ್ಲಾ ಹಿತೈಷಿಗಳಿಗೆ ಧನ್ಯವಾದಗಳು'' ಎಂದು ಪೋಸ್ಟ್ ಮಾಡಿದ್ದಾರೆ.

ಹರ್ಭಜನ್ ಸಿಂಗ್ ಹಾಗೂ ನಟಿ ಗೀತಾ ಬಸ್ರಾ ಅವರ ವಿವಾಹ ಅಕ್ಟೋಬರ್ 29, 2015 ರಲ್ಲಿ ಪಂಜಾಬ್‌ನ ಜಲಂಧರ್ನಲ್ಲಿ ನಡೆದಿತ್ತು. ಅದಾಗಲೇ ಹರ್ಭಜನ್ ಸಿಂಗ್-ಗೀತಾ ದಂಪತಿಗೆ ಹೆಣ್ಣು ಮಗುವಿದೆ. 2016ರಲ್ಲಿ ಮೊದಲ ಮಗು ಜನಿಸಿತ್ತು.ಅಂದ್ಹಾಗೆ, ಗೀತಾ ಬಸ್ರಾ ಅವರ ಕುಟುಂಬ ಯುಕೆಯಲ್ಲಿ ನೆಲೆಸಿದೆ. 2006 ರಲ್ಲಿ ಇಮ್ರಾನ್ ಹಶ್ಮಿ ಅಭಿನಯದ "ದಿಲ್ ದಿಯಾ ಹೈ" ಚಿತ್ರದ ಮೂಲಕ ಗೀತಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಈಗ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ.

ಜಾನ್ ಪೌಲ್ ರಾಜ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಫ್ರೆಂಡ್‌ಷಿಪ್ ಸಿನಿಮಾದಲ್ಲಿ ಹರ್ಭಜನ್ ಸಿಂಗ್ ನಟಿಸುತ್ತಿದ್ದಾರೆ. ಹರ್ಭಜನ್ ಜೊತೆ ಅರ್ಜುನ್ ಸರ್ಜಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕೂ ಮುಂಚೆ ಹಿಂದಿಯ ಆಲ್ಬಮ್ ಸಾಂಗ್ ಕೆಲವು ಸಿನಿಮಾದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದರು.

(Kannada Copy of Filmbeat Kannada)