ಅಶ್ಲೀಲ ವಿಡಿಯೋ ನಿರ್ಮಾಣ ಕೇಸ್: ರಾಜ್ ಕುಂದ್ರಾಗೆ 14 ದಿನ ಜೈಲು

27-07-21 01:41 pm       Filmbeat : Bharath Kumar K   ಸಿನಿಮಾ

ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಉದ್ಯಮಿ ರಾಜ್‌ ಕುಂದ್ರಾಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಮುಂಬೈ ಕೋರ್ಟ್ ಆದೇಶಿಸಿದೆ.

ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಉದ್ಯಮಿ ರಾಜ್‌ ಕುಂದ್ರಾಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಮುಂಬೈ ಕೋರ್ಟ್ ಮಂಗಳವಾರ (ಜುಲೈ 27) ಆದೇಶಿಸಿದೆ.

ಈ ಹಿಂದೆ ಜುಲೈ 27ರವರೆಗೂ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಇಂದು ಅವಧಿ ಮುಗಿದ ಹಿನ್ನೆಲೆ ಮತ್ತೆ ನ್ಯಾಯಾಧೀಶರ ಮುಂದೆ ರಾಜ್ ಕುಂದ್ರಾರನ್ನು ಹಾಜರು ಪಡಿಸಲಾಗಿತ್ತು. ಈ ವೇಳೆ ನ್ಯಾಯಾಧೀಶರು ರಾಜ್ ಕುಂದ್ರಾ ಸೇರಿ ಒಟ್ಟು ಹತ್ತರ ಜನರನ್ನು 14 ದಿನ ಜೈಲಿಗೆ ಕಳುಹಿಸಲು ಸೂಚಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಅಶ್ಲೀಲ ವಿಡಿಯೋ ನಿರ್ಮಾಣ ಕೇಸ್‌ನಲ್ಲಿ ಜುಲೈ 19 ರಂದು ರಾಜ್ ಕುಂದ್ರಾರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.ಫೆಬ್ರವರಿಯಲ್ಲಿ ಪ್ರಕರಣ ದಾಖಲು

ಅಶ್ಲೀಲ ಚಿತ್ರಗಳ ನಿರ್ಮಾಣ ಮತ್ತು ಅವುಗಳನ್ನು ಕೆಲವು ಅಪ್ಲಿಕೇಶನ್‌ಗಳ ಮೂಲಕ ಪ್ರಕಟಿಸುವ ಬಗ್ಗೆ ಫೆಬ್ರವರಿ 2021 ರಲ್ಲಿ ಮುಂಬೈ ಅಪರಾಧ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ. ಪ್ರಾಥಮಿಕ ತನಿಖೆ ವೇಳೆ ರಾಜ್ ಕುಂದ್ರಾ ವಿರುದ್ಧ ಪ್ರಬಲ ಸಾಕ್ಷ್ಯಗಳು ಲಭ್ಯವಾಗಿದ್ದು, ಈ ಕೇಸ್‌ನಲ್ಲಿ ಪ್ರಮುಖ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದರು.

ರಾಜ್ ಕುಂದ್ರಾ ಬಂಧನಕ್ಕೂ ಮುಂಚೆ ಈ ಪ್ರಕರಣದಲ್ಲಿ ನಟಿ ಪೂನಂ ಪಾಂಡೆ ಮತ್ತು ಶೆರ್ಲಿನ್ ಚೋಪ್ರಾರನ್ನು ವಿಚಾರಣೆಗೆ ಒಳಪಡಿಸಿ, ಹೇಳಿಕೆ ಪಡೆಯಲಾಗಿದೆ ಎಂಬ ವಿಚಾರ ವರದಿಯಾಗಿದೆ.

(Kannada Copy of Filmbeat Kannada)