ಬ್ರೇಕಿಂಗ್ ನ್ಯೂಸ್
10-08-21 03:45 pm Filmbeat: Bharath Kumar K ಸಿನಿಮಾ
'ಲವ್ ಯೂ ರಚ್ಚು' ಚಿತ್ರೀಕರಣ ವೇಳೆ ನಡೆದ ದುರಂತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಚಿತ್ರದ ನಿರ್ದೇಶಕ ಶಂಕರ್, ಕ್ರೇನ್ ಆಪರೇಟರ್ ಮಹದೇವ್ ಹಾಗೂ ಫೈಟ್ ಮಾಸ್ಟರ್ ವಿನೋದ್ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಎಂದು ರಾಮನಗರ ಅಪರ ಹಿರಿಯ ಸಿವಿಲ್ ನ್ಯಾಯಾಧೀಶೇ ಅನುಪಮ ಲಕ್ಷ್ಮೀ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಕೇಸ್ ಸಂಬಂಧ ಮುಂದಿನ ವಿಚಾರಣೆಯನ್ನು ಆಗಸ್ಟ್ 24 ರಂದು ನಡೆಸಲಾಗುವುದು ನ್ಯಾಯಾಲಯ ತಿಳಿಸಿದೆ.
ಸೋಮವಾರ (ಆಗಸ್ಟ್ 9) ಬಿಡದಿಯ ಜೋಗನಪಾಳ್ಯ ಗ್ರಾಮದಲ್ಲಿ ಖಾಸಗಿ ವ್ಯಕ್ತಿಯ ಜಮೀನಿನಲ್ಲಿ 'ಲವ್ ಯೂ ರಚ್ಚು' ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಹೈ ಟೆನ್ಷನ್ ಕರೆಂಟ್ ವೈರ್ ತಗುಲಿ ಸಾಹಸ ಕಲಾವಿದ ವಿವೇಕ್ ಸಾವನ್ನಪ್ಪಿದ್ದರು. ರಂಜಿತ್ ಎನ್ನುವ ಸಹಾಯಕ ಕಲಾವಿದನಿಗೆ ಗಂಭೀರ ಗಾಯವಾಗಿದೆ.
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಬಿಡದಿ ಪೊಲೀಸರು ಸ್ಥಳಕ್ಕೆ ಧಾವಿಸಿ, ನಿರ್ದೇಶಕ ಶಂಕರ್, ಫೈಟ್ ಮಾಸ್ಟರ್ ವಿನೋದ್, ಕ್ರೇನ್ ಆಪರೇಟರ್ ಮಹಾದೇವ್ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಸೋಮವಾರ ತಡರಾತ್ರಿಯೇ ಬಂಧಿತರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಆದರೆ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ನ್ಯಾಯಾಲಯಕ್ಕೆ ಕರೆ ತರುವಂತೆ ಜಡ್ಜ್ ಸೂಚನೆ ಕೊಟ್ಟಿದ್ದರು.
ಇನ್ನು ಈ ಕೇಸ್ ಸಂಬಂಧ ಶೂಟಿಂಗ್ ಮಾಡಲು ಅವಕಾಶ ಮಾಡಿಕೊಟ್ಟಿದ್ದ ಜಮೀನು ಮಾಲೀಕ ಪುಟ್ಟರಾಮು ಹಾಗೂ ಸಿನಿಮಾದ ನಿರ್ಮಾಪಕ ಗುರುದೇಶಪಾಂಡೆ ನಾಪತ್ತೆಯಾಗಿದ್ದಾರೆ. ಇವರಿಬ್ಬರಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ. 'ಲವ್ ಯೂ ರಚ್ಚು' ಚಿತ್ರದ ನಾಯಕ ನಟ ಸಾಹಸ ಕಲಾವಿದ ವಿವೇಕ್ ಮೃತಪಟ್ಟ ವಿಚಾರ ತಿಳಿದು ಆಸ್ಪತ್ರೆ ಬಳಿ ಭೇಟಿ ನೀಡಿದ್ದರು. ಆದರೆ, ಆಸ್ಪತ್ರೆಯಲ್ಲಿ ಪಾರ್ಥಿವ ಶರೀರ ನೋಡಲು ಅವಕಾಶ ಕೊಟ್ಟಿಲ್ಲ. ಈ ಬಗ್ಗೆ ಸುದ್ದಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅಜಯ್ ರಾವ್, ವಿವೇಕ್ ಕುಟುಂಬಕ್ಕೆ ನ್ಯಾಯ ಸಿಗುವ ರೀತಿಯಲ್ಲಿ ತೀರ್ಮಾನ ಮಾಡಬೇಕಿದೆ ಎಂದಿದ್ದಾರೆ. ''ವಿವೇಕ್ ಚಿಕ್ಕಪ್ಪನ ಜೊತೆ ಮಾತನಾಡಿದೆ, ನಿಮ್ಮ ಜೊತೆಯಲ್ಲಿ ನಾನಿದ್ದೇನೆ ಎಂದು ಹೇಳಿದ್ದೇನೆ. ನಿರ್ಮಾಪಕ ಗುರುದೇಶಪಾಂಡೆ ಅವರನ್ನು ಸಂಪರ್ಕಿಸಲು ಯತ್ನಿಸಿದೆ. ಅವರ ಸಂಪರ್ಕ ಸಾಧ್ಯವಾಗಿಲ್ಲ. ಈ ವಿಚಾರದಲ್ಲಿ ಅವರು ಮುಂದೆ ಬಂದು ಜವಾಬ್ದಾರಿ ತೆಗೆದುಕೊಂಡು ಸಾಂತ್ವನ ಹೇಳಬೇಕಿತ್ತು'' ಎಂದು ಅಜಯ್ ರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಜಯ್ ರಾವ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದ ರಂಜಿತ್
ಹೈಟೆನ್ಷನ್ ವೈರ್ ತಗುಲಿ ಗಾಯಗೊಂಡ ಸಹಾಯಕ ರಂಜಿತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಘಟನೆ ಬಗ್ಗೆ ಮಾತನಾಡಿರುವ ರಂಜಿತ್, ''ನಾನು ಏಳು ವರ್ಷದಿಂದ ಮಾಸ್ಟರ್ ಬಳಿ ಕೆಲಸ ಮಾಡ್ತಿದ್ದೇನೆ. ಅವರು ಈ ರೀತಿ ನಿರ್ಲಕ್ಷ್ಯ ಮಾಡುವ ವ್ಯಕ್ತಿಯಿಲ್ಲ. ಶೂಟಿಂಗ್‌ನಲ್ಲಿ ಎಲ್ಲ ಸ್ಟಂಟ್ ಚೆನ್ನಾಗಿ ಆಗ್ತಿತ್ತು. ಟೇಕ್ ಮಾಡೋದಕ್ಕೆ ರಿಹಾರ್ಸಲ್ ಮಾಡ್ತಿದ್ವಿ. ಪಕ್ಕದಲ್ಲೇ ಮಾಸ್ಟರ್ ಹೀರೋ ಅವರದ್ದು ಶೂಟ್ ಮಾಡ್ತಿದ್ರು. ಮೊದಲೇ ಆ ತೋಟದೊಳಗೆ ಕ್ರೇನ್ ಬರಲ್ಲ ಅಂತ ಹೇಳಿದ. ಆಮೇಲೆ ಹೇಗೋ ಒಳಗೆ ಬಂದ. ಮೊದಲು ಒಂದು ಸಲ ಮರ ಟಚ್ ಮಾಡಿದ. ಆಗಲೇ ನಾವು ಎಚ್ಚರಿಸಿದ್ವಿ. ಆದರೆ ಇನ್ನೊಂದು ಅಚಾನಕ್ ಆಗಿ ಹೈಟೆನ್ಷನ್ ವೈರ್ ಟಚ್ ಮಾಡಿದಾಗ ಹೀಗೆ ಆಯಿತು. ಇಲ್ಲಿ ಮಾಸ್ಟರ್‌ನ ಆರೋಪಿ ಮಾಡುವುದು ಸರಿಯಿಲ್ಲ'' ಎಂದು ಹೇಳಿದ್ದಾರೆ. ''ಇನ್ನು ಘಟನೆ ನಡೆದಾಗ ನಟ ಅಜಯ್ ರಾವ್ ದೂರದಲ್ಲಿದ್ದರು. ಸ್ವಲ್ಪ ಸಮಯದ ನಂತರ ಈ ವಿಷಯ ತಿಳಿಯಿತು ಎಂದು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ. ಅವರು ಹೇಳಿದಂತೆ ದೂರದಲ್ಲಿ ಎಲ್ಲೋ ಇರಲಿಲ್ಲ. ನಾವು ವೈರ್ ಟಚ್ ಆಗಿ ಕೆಳಗೆ ಬಿದ್ದೆವು. ಕೂಡಲೇ ನಮ್ಮ ಫೈಟರ್ಸ್ ಓಡಿ ಬಂದು ಏನಾಯ್ತು ಎಂದು ನೋಡಿದರು. ಆಗ ನಮ್ಮ ಕಣ್ಣೆದುರಲ್ಲೇ ಅಜಯ್ ರಾವ್ ಟೆಂಟ್‌ನಲ್ಲಿ ಕುಳಿತಿದ್ದರು. ನಮ್ಮ ಹತ್ತಿರ ಸಹ ಅವರು ಬರಲಿಲ್ಲ'' ಎಂದು ರಂಜಿತ್ ಅಸಮಾಧಾನ ವ್ಯಕ್ತಪಡಿಸಿದ್ದರು.
(Kannada Copy of Filmbeat Kannada)
11-02-25 11:12 pm
Bangalore Correspondent
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
NAACbribery case: ನ್ಯಾಕ್ ಮಾನ್ಯತೆಗಾಗಿ ಭ್ರಷ್ಟಾಚ...
11-02-25 02:21 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
11-02-25 07:44 pm
Mangalore Correspondent
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
12-02-25 12:27 pm
HK News Desk
ಮ್ಯಾಟ್ರಿಮನಿ ಸೈಟ್ ನಲ್ಲಿ ಗಾಳ ; ಸರ್ಕಾರಿ ನೌಕರನೆಂದ...
11-02-25 06:41 pm
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm