ದನದ ಸೆಗಣಿ ಎಂದು ಕರೆದುಕೊಳ್ಳಲು ನಾಚಿಕೆಪಡಲ್ಲ ; ನಟ ಸುರೇಶ್ ಗೋಪಿ

20-08-21 06:07 pm       Headline Karnataka News Network   ಸಿನಿಮಾ

ನನಗೆ ದನದ ಸೆಗಣಿ ಎಂದು ಕರೆದುಕೊಳ್ಳಲು ಯಾವುದೇ ನಾಚಿಕೆಯಿಲ್ಲ. ಆ ಪದವನ್ನು ಕೇಳಿ ನಾನು ತುಂಬ ಹೆಮ್ಮೆ ಪಡುತ್ತೇನೆ ಎಂದು ಮಲಯಾಳಂ ಚಿತ್ರಗಳ ಖ್ಯಾತ ನಟ ಸುರೇಶ್ ಗೋಪಿ ಹೇಳಿದ್ದಾರೆ.

ಎರ್ನಾಕುಲಂ, ಆಗಸ್ಟ್ 20: ನನಗೆ ದನದ ಸೆಗಣಿ ಎಂದು ಕರೆದುಕೊಳ್ಳಲು ಯಾವುದೇ ನಾಚಿಕೆಯಿಲ್ಲ. ಆ ಪದವನ್ನು ಕೇಳಿ ನಾನು ತುಂಬ ಹೆಮ್ಮೆ ಪಡುತ್ತೇನೆ ಎಂದು ಮಲಯಾಳಂ ಚಿತ್ರಗಳ ಖ್ಯಾತ ನಟ ಸುರೇಶ್ ಗೋಪಿ ಹೇಳಿದ್ದಾರೆ.

ವಿಶ್ವ ಹಿಂದು ಪರಿಷತ್ ರಾಜ್ಯಾದ್ಯಂತ ಕೈಗೊಂಡಿರುವ ಗೋ ಸಂರಕ್ಷಣಾ ರಥಯಾತ್ರೆಯನ್ನು ಉದ್ಘಾಟಿಸಿದ ಸುರೇಶ್ ಗೋಪಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟೀಕಿಸಲಾಗಿತ್ತು. ಸುರೇಶ್ ಗೋಪಿ ಒಬ್ಬ ಸೆಗಣಿ ಇದ್ದಂತೆ ಎಂದು ಟೀಕಿಸಿ ಬರೆದಿದ್ದು ವೈರಲ್ ಆಗಿತ್ತು. ಎರ್ನಾಕುಲಂ ಜಿಲ್ಲೆಯ ಪಾವಕ್ಕುಲಂ ದೇವಸ್ಥಾನದಲ್ಲಿ ರಥಯಾತ್ರೆಗೆ ಚಾಲನೆ ನೀಡಲಾಗಿತ್ತು.

ಈ ರೀತಿಯ ಟೀಕೆ ಕೇಳಿಬಂದಿರುವ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿರುವ ಸುರೇಶ್ ಗೋಪಿ, ಯಾರು ಕೂಡ ನನ್ನನ್ನು ಸೆಗಣಿ ಎಂದು ಕರೆಯುವುದನ್ನು ನಿಲ್ಲಿಸಬೇಡಿ. ಅದನ್ನು ಖಂಡಿತವಾಗಿಯೂ ಮುಂದುವರಿಸಬೇಕು. ಆದರೆ, ಒಂದು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಕೇರಳದ ಸುಧಾರಣಾವಾದಿ ನಾರಾಯಣ ಗುರು ಅವರನ್ನು ಹುಟ್ಟಿದ ಸಂದರ್ಭದಲ್ಲಿ ಮೊದಲು ಸೆಗಣಿಯಿಂದಲೇ ಮುಟ್ಟಿಸಲಾಗಿತ್ತು ಎಂಬುದನ್ನು ಮರೆಯಬಾರದು ಎಂದಿದ್ದಾರೆ.

ಗೋಸಂರಕ್ಷಣಾ ರಥಯಾತ್ರೆಯು ವರ್ಷ ಪೂರ್ತಿ ಕೇರಳ ರಾಜ್ಯಾದ್ಯಂತ ಸಂಚರಿಸಲಿದ್ದು, ಗೋವುಗಳ ಸಂತತಿ ಹೆಚ್ಚುವಂತೆ ಮತ್ತು ಗೋವುಗಳ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಿದೆ. ಮುಂದಿನ ವರ್ಷ ಎರ್ನಾಕುಲಂ ಜಿಲ್ಲೆಯ ಪಾವಕ್ಕುಲಂ ದೇವಸ್ಥಾನದಲ್ಲಿ ರಥಯಾತ್ರೆ ಕೊನೆಯಾಗಲಿದೆ.

ಗೋವುಗಳ ರಕ್ಷಣೆಯಿಂದ ಕೃಷಿ ಸಂಸ್ಕೃತಿಗೆ ಒತ್ತು ಸಿಗಲಿದೆ. ಅಲ್ಲದೆ, ಪೂರ್ವಜರು ಪಾಲಿಸಿಕೊಂಡು ಬಂದಿದ್ದ ಶುದ್ಧ ಆಹಾರ ಸಂಸ್ಕೃತಿಗೂ ಒತ್ತು ಸಿಗಲಿದೆ ಎಂದು ಸುರೇಶ್ ಗೋಪಿ ಹೇಳಿದ್ದಾರೆ. ಚಿತ್ರ ನಿರ್ದೇಶಕ ಹಾಗೂ ವಿಶ್ವ ಹಿಂದು ಪರಿಷತ್ ರಾಜ್ಯಾಧ್ಯಕ್ಷ ವಿಜಿ ಥಂಪಿ ಕೂಡ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ಸುರೇಶ್ ಗೋಪಿ ಅವರನ್ನು ಅಭಿಮಾನಿಯೊಬ್ಬ ಕೇಳಿದ್ದ. ನಿಮ್ಮ ವಿರುದ್ಧ ಕ್ಯಾಂಪೇನ್ ನಡೆಸುತ್ತಿರುವ ಬ್ಲಾಗರ್ ಗಳಾದ ಇ ಬುಲ್ ಜೆ ಬ್ರದರ್ಸ್ ವಿರುದ್ಧ ಕ್ರಮಕ್ಕೆ ಆಗ್ರಹ ಮಾಡುತ್ತೀರಾ ಎಂಬ ಪ್ರಶ್ನೆ ಮಾಡಿದ್ದ. ಬುಲ್ ಜೆ ಬ್ರದರ್ಸ್, ಸಾರಿಗೆ ಇಲಾಖೆಯಲ್ಲಿ ನೌಕರರು ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದ ಸುರೇಶ್ ಗೋಪಿ, ನಾನ್ಯಾಕೆ ಆ ಬಗ್ಗೆ ದೂರು ನೀಡಲಿ. ಅದು ಸಿಎಂ ಪಿಣರಾಯಿ ವಿಜಯನ್ ಮತ್ತು ಸಾರಿಗೆ ಇಲಾಖೆಯ ಮಂತ್ರಿಗೆ ಬಿಟ್ಟದ್ದು. ನಾನು ಆ ವಿಚಾರದಲ್ಲಿ ಮೂಗು ತೂರಿಸಲು ಇಷ್ಟಪಡಲ್ಲ. ಯಾಕಂದ್ರೆ, ನಾನು ಬರೀ ಸೆಗಣಿ ಅಷ್ಚೇ ಎಂದು ಕಮೆಂಟ್ ಮಾಡಿದ್ದು ಭಾರೀ ವೈರಲ್ ಆಗಿದೆ. 

The actor arrived at Pavakulam Mahadeva Temple at Kaloor to inaugurate the cow protection campaign (Gau Raksha Yatra) organised by the Vishva Hindu Parishad