ಸಂಜಾನಾ, ರಾಗಿಣಿ ಡ್ರಗ್ಸ್ ಸೇವಿಸಿದ್ದು ಎಫ್‌ಎಸ್‌ಎಲ್‌ ವರದಿಯಿಂದ ಖಾತ್ರಿ

24-08-21 11:01 am       Filmbeat: Manjunatha C   ಸಿನಿಮಾ

ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ನಟಿ ಸಂನಜಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಅವರುಗಳ ಎಫ್‌ಎಸ್‌ಎಲ್ ವರದಿ ಬಂದಿದ್ದು ಡ್ರಗ್ಸ್ ಸೇವಿಸಿದ್ದು ಖಾತ್ರಿಯಾಗಿದೆ.

ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ನಟಿ ಸಂನಜಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಅವರುಗಳ ಎಫ್‌ಎಸ್‌ಎಲ್ ವರದಿ ಇದೀಗ ಬಂದಿದ್ದು ಈ ನಟಿಯರು ಡ್ರಗ್ಸ್ ಸೇವಿಸಿದ್ದು ಖಾತ್ರಿಯಾಗಿದೆ.

ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಸಂಜನಾ, ರಾಗಿಣಿ, ವೀರೇನ್ ಇನ್ನೂ ಹಲವರ ತಲೆ ಕೂದಲು ಮಾದರಿಯನ್ನು ಪಡೆದಿದ್ದ ಪೊಲೀಸರು ಅದನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ರವಾನಿಸಿದ್ದು ಅದರ ವರದಿ ಇದೀಗ ಬಂದಿದ್ದು ಸಂಜನಾ ಗಲ್ರಾನಿ, ರಾಗಿಣಿ ದ್ವೀವೇದಿ, ವೀರೆನ್ ಡ್ರಗ್ಸ್ ಸೇವಿಸಿದ್ದು ಖಾತ್ರಿಯಾಗಿದೆ.

ನಟಿ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ವೀರೆನ್ ಖನ್ನಾ, ಆದಿತ್ಯ ಆಳ್ವಾ ಸೇರಿ ಇನ್ನೂ ಹಲವು ಮಂದಿಯನ್ನು ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದರು. ಆರೋಪಿತರು ಡ್ರಗ್ಸ್ ಸೇವಿಸಿದ್ದಾರೆಯೇ ಇಲ್ಲವೆ ಎಂದು ಅರಿಯಲು ಅವರತಲೆ ಕೂದಲು, ಮೂತ್ರದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು.

ಈ ಹಿಂದೆಯೂ ಒಮ್ಮೆ ತಲೆ ಕೂದಲು ಮಾದರಿಯನ್ನು ಎಫ್‌ಎಸ್‌ಎಲ್‌ ಪ್ರಯೋಗಾಲಯಕ್ಕೆ ಹೈದರಾಬಾದ್‌ಗೆ ಕಳುಹಿಸಲಾಗಿತ್ತು ಆದರೆ ಸಂಗ್ರಹಿಸಿರುವ ಮಾದರಿ ಸೂಕ್ತವಾಗಿಲ್ಲವೆಂದು ವರದಿ ಬಂದಿತ್ತು. ನಟಿ ರಾಗಿಣಿ ಮೂತ್ರ ವಿಸರ್ಜನೆದ ಮಾದರಿಗೆ ನೀರು ಬೆರೆಸಿದ್ದಾರೆ. ಬೇರೆಯವರ ತಲೆಕೂದಲು ಮಾದರಿ ನೀಡಿದ್ದಾರೆ ಎಂಬ ಆರೋಪಗಳು ಆಗ ಕೇಳಿ ಬಂದಿದ್ದವು. ನಂತರ ಮತ್ತೊಮ್ಮೆ ತಲೆ ಕೂದಲು ಮಾದರಿ ಸಂಗ್ರಹಿಸಿ ಎಫ್‌ಎಸ್‌ಎ

ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿ ಇಬ್ಬರೂ ಡ್ರಗ್ಸ್ ಸೇವಿಸಿರುವುದು ವರದಿಯಿಂದ ಖಾತ್ರಿಯಾಗಿದ್ದು, ಇದರ ಆಧಾರದ ಮೇಲೆ ಸಿಸಿಬಿ ಪೊಲೀಸರು ನಟಿಯರ ಜಾಮೀನು ರದ್ದು ಮಾಡುವಂತೆ ನ್ಯಾಯಾಲಯವನ್ನು ಕೋರುವ ಸಾಧ್ಯತೆ ಇದೆ. ಜೊತೆಗೆ ನಟಿಯರಿಬ್ಬರಿಗೂ ಡ್ರಗ್ಸ್ ಪ್ರಕರಣ ಇನ್ನಷ್ಟು ಕಠಿಣವಾಗುವ ಸಾಧ್ಯತೆ ಇದೆ. ಡ್ರಗ್ಸ್ ಸೇವನೆ ಮತ್ತು ಮಾರಾಟಕ್ಕೆ ಸಹಾಯದ ಆರೋಪವನ್ನು ನಟಿಯರ ಮೇಲೆ ಸಿಸಿಬಿ ಪೊಲೀಸರು ಹೊರಿಸಿದ್ದಾರೆ.

2020ರ ಸೆಪ್ಟೆಂಬರ್ 4ರಂದು ನಗರದ ಸಿಸಿಬಿ ಪೊಲೀಸರು ನಟಿ ರಾಗಿಣಿ ದ್ವೀವೇದಿಯನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದರು. ಇದಾದ ನಾಲ್ಕು ದಿನಗಳ ಬಳಿಕ ಸೆಪ್ಟೆಂಬರ್ 8ರಂದು ಸಂಜನಾ ಗಲ್ರಾನಿಯನ್ನು ಬಂಧಿಸಲಾಯಿತು. ಆ ನಂತರ ರಾಹುಲ್, ವೀರೇನ್ ಖನ್ನಾ, ಆದಿತ್ಯ ಆಳ್ವಾ, ರಾಗಿಣಿ ಆಪ್ತ ರವಿಕುಮಾರ್, ಶಿವಪ್ರಕಾಶ್ ಇನ್ನೂ ಹಲವಾರು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಸಂಜನಾ ಹಾಗೂ ರಾಗಿಣಿ ಇಬ್ಬರೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧಿಗಳಾಗಿ ಎರಡು ತಿಂಗಳಿಗೂ ಹೆಚ್ಚು ದಿನ ಕಾಲ ಕಳೆಯಬೇಕಾಯಿತು. ರಾಗಿಣಿ 140 ದಿನಗಳ ಕಾಲ ಜೈಲಿನಲ್ಲಿದ್ದರೆ ಸಂಜನಾ ಗಲ್ರಾನಿ 85 ದಿನ ಜೈಲಿನಲ್ಲಿದ್ದರು.

ಇಬ್ಬರೂ ಜಾಮೀನಿನ ಮೇಲೆ ಹೊರಗಿದ್ದು ಪ್ರಕರಣದ ವಿಚಾರಣೆಗಳಿಗೆ ಹಾಜರಾಗುತ್ತಿದ್ದಾರೆ. ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 20 ಕ್ಕೂ ಹೆಚ್ಚು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ಶಿವಪ್ರಕಾಶ್, ವೀರೇನ್ ಖನ್ನಾ, ಆದಿತ್ಯ ಆಳ್ವಾ, ವೈಭವ್ ಜೈನ್, ವಿನಯ್ ಕುಮಾರ್, ರಾಹುಲ್ ಟೊನ್ಸೆ, ಲೂಮ್ ಪೆಪ್ಪರ್, ಪ್ರಶಾಂತ್ ರಾಜ್, ಅಭಿಸ್ವಾಮಿ, ಮೊಹಮ್ಮದ್ ಮೆಸ್ಸಿ, ಎ ವಿನೋದ್ ಹಾಗೂ ಕೆಲವು ವಿದೇಶಿ ಪ್ರಜೆಗಳನ್ನು ಸಹ ಸಿಸಿಬಿ ಪೊಲೀಸರು ಬಂಧಿಸಿದ್ದರು.

(Kannada Copy of Filmbeat Kannada)