ವಿವಾಹ ನಂತರ ಒತ್ತಾಯದ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ; ಛತ್ತೀಸಗಢ ಕೋರ್ಟ್ ಆದೇಶಕ್ಕೆ ನಟಿಯರ ತೀವ್ರ ಆಕ್ರೋಶ

28-08-21 04:03 pm       Filmbeat Kannada : Shruthi GK   ಸಿನಿಮಾ

ಕಾನೂನುಬದ್ಧವಾಗಿ ಮದುವೆಯಾದ ಮೇಲೆ ಪತ್ನಿಯೊಂದಿಗೆ ಸಮ್ಮತಿ ರಹಿತ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ ಎಂದು ಛತ್ತೀಸಗಢ ಹೈಕೋರ್ಟ್ ಹೇಳಿಕೆಯನ್ನು ಅನೇಕರು ವಿರೋಧಿಸುತ್ತಿದ್ದಾರೆ.

ಕಾನೂನುಬದ್ಧವಾಗಿ ಮದುವೆಯಾದ ಮೇಲೆ ಪತ್ನಿಯೊಂದಿಗೆ ಸಮ್ಮತಿ ರಹಿತ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ ಎಂದು ಛತ್ತೀಸಗಢ ಹೈಕೋರ್ಟ್ ಹೇಳಿಕೆಯನ್ನು ಅನೇಕರು ವಿರೋಧಿಸುತ್ತಿದ್ದಾರೆ. ಎಲ್ಲದೇ ಕೋರ್ಟ್ ಆದೇಶವನ್ನು ಅನೇಕ ನಟಿಮಣಿಯರು ಸಹ ತೀವ್ರವಾಗಿ ಖಂಡಿಸುತ್ತಿದ್ದಾರೆ.

ಬಲವಂತದಿಂದ ಅಥವಾ ಪತ್ನಿಯ ಸಮ್ಮತಿ ಇಲ್ಲದಿದ್ದರೂ ನಡೆಸುವ ಲೈಂಗಿಕ ಕ್ರಿಯೆ ಅದು ಅತ್ಯಾಚಾರ ಅಂತ ಪರಿಗಣಿಸಿಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶ ನೀಡುವ ಮೂಲಕ 37 ವರ್ಷದ ವ್ಯಕ್ತಿಯೊಬ್ಬರ ಮೇಲೆ ದಾಖಲಾಗಿದ್ದ ವೈವಾಹಿಕ ಅತ್ಯಾಚಾರ ಪ್ರಕರಣವನ್ನು ಚತ್ತೀಸಗಢ ಹೈಕೋರ್ಟ್ ವಜಾಗೊಳಿಸಿದೆ.



ವ್ಯಕ್ತಿಯೊಬ್ಬ ಸ್ವಂತ ಪತ್ನಿಯ ಜೊತೆ ಲೈಂಗಿಕ ಕ್ರಿಯೆ ನಡೆಸಿದರೆ, ಪತ್ನಿ 18 ವರ್ಷಕ್ಕಂತ ಮೇಲ್ಪಟ್ಟಿದ್ದರೆ ಅದು ಅತ್ಯಾಚಾರವಾಗುವುದಿಲ್ಲ. ಈ ಪ್ರಕರಣದಲ್ಲಿ ಆರೋಪಿಯು ದೂರುದಾರರನ್ನು ಕಾನೂನಾತ್ಮಕವಾಗಿ ವಿವಾಹವಾಗಿದ್ದಾರೆ. ಹಾಗಾಗಿ ಆರೋಪಿಯು ದೂರುದಾರರ ಜೊತೆ ಯಾವುದೇ ರೀತಿಯ ಲೈಂಗಿಕ ಚಟುವಟಿಕೆ ನಡೆಸುವುದನ್ನು ಅತ್ಯಾಚಾರ ಪ್ರಕರಣ ಎನ್ನಲು ಸಾಧ್ಯವಿಲ್ಲ. ಅದು ಬಲತ್ಕಾರ ಅಥವಾ ಆಕೆಯ ಇಚ್ಚೆಗೆ ವಿರುದ್ಧವಾಗಿದ್ದರ ಅತ್ಯಾಚಾರವೆನಿಸುವುದಿಲ್ಲ" ಎಂದು ನ್ಯಾ. ಎನ್.ಕೆ ಚಂದ್ರವಂಶಿ ಹೇಳಿದ್ದಾರೆ 

ಚತ್ತೀಗಢ ಹೈಕೋರ್ಟ್ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಬಾಲಿವುಡ್ ಸೆಲೆಬ್ರಿಟಿಗಳು ಸಹ ಪ್ರತಿಕ್ರಿಯೆ ನೀಡಿದ್ದಾರೆ. ನಟಿ ತಾಪ್ಸಿ ಪನ್ನು, ಕೃತಿ ಸನೂನ್, ಪರಿಣೀತಿ ಚೋಪ್ರಾ ಸೇರಿದಂತೆ ಅನೇಕರು ಖಂಡಿಸಿದ್ದಾರೆ. ನಟಿ ತಾಪ್ಸಿ ಪನ್ನು ಟ್ವೀಟ್ ಮಾಡಿ, "ಇದೊಂದು ಕೇಳುವುದು ಬಾಕಿ ಇತ್ತು" ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ನಟಿ ಕೃತಿ ಸನೂನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಎನ್ ಡಿ ಟಿ ವಿಯಲ್ಲಿ ಬಿತ್ತರವಾಗುತ್ತಿರುವ ವಿಡಿಯೋ ಶೇರ್ ಮಾಡಿ, "ಶಾಕಿಂಗ್" ಎಂದು ಹೇಳಿದ್ದಾರೆ. ಇನ್ನು ನಟಿ ಪರಿಣೀತಿ ಚೋಪ್ರಾ ಪ್ರತಿಕ್ರಿಯೆ ನೀಡಿ, ಓಹ್ ಮತ್ತು ಪುರುಷರು ಇದನ್ನು ನಿರ್ಧರಿಸುತ್ತಾರೆ ಮತ್ತು ಕಾನೂನು ಮಾಡುತ್ತಾರೆ. ಶಾಕಿಂಗ್" ಎಂದು ಹೇಳಿದ್ದಾರೆ.

ಇನ್ನು ಗಾಯಕಿ ಸೋನಾ ಮೊಹಾಪಾತ್ರ ಪ್ರತಿಕ್ರಿಯೆ ನೀಡಿ, "ಈ ಭಾರತವನ್ನು ನೋಡುವಾಗ ನನಗೆ ಅನಿಸುವ ಅನಾರೋಗ್ಯದ ಬಗ್ಗೆ ನಾನು ಇಲ್ಲಿ ಬರೆಯಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.

ಸಂತ್ರಸ್ತೆಯು 2017ರಲ್ಲಿ ರಾಯಪುರ ಮೂಲದ ವ್ಯಕ್ತಿಯನ್ನು ವಿವಾಹವಾಗಿದ್ದರು. ಮದುವೆಯಾದ ಕೆಲವು ದಿನಗಳ ನಂತರ ಪತಿ ಮತ್ತು ಆಕೆಯ ಇಬ್ಬರು ಅತ್ತೆಯರು ವರದಕ್ಷಿಣಿ ಕಿರುಕುಳ ನೀಡಲು ಆರಂಭಿಸಿದರು. ನಂತರ ಮಹಿಳೆ ಮೂವರ ವಿರುದ್ಧ ದೂರು ನೀಡಿದ್ದರು. ದೂರಿನಲ್ಲಿ ಪತಿಯ ವಿರುದ್ಧ ತನ್ನೊಂದಿಗೆ ಬಲವಂತದ ದೈಹಿಕ ಸಂಬಂಧ ಹೊಂದಿದ್ದಾರೆ ಎಂದು ದೂರಿದ್ದರು.