ಡ್ರಗ್ಸ್ ಪ್ರಕರಣ: ಸೆಪ್ಟಂಬರ್ 1ರವರೆಗೂ ಅರ್ಮಾನ್ ಕೊಹ್ಲಿ ಎನ್ ಸಿ ಬಿ ವಶಕ್ಕೆ

31-08-21 10:55 am       Filmbeat: Shruthi GK   ಸಿನಿಮಾ

ಡ್ರಗ್ಸ್ ಪ್ರಕರಣ ಸಂಬಂಧ ಬಂಧಿಸಲ್ಪಟ್ಟಿರುವ ಬಾಲಿವುಡ್ ನಟ ಅರ್ಮಾನ್ ಕೊಹ್ಲಿಯನ್ನು ಸೆಪ್ಟಂಬರ್ 1ರವರೆಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಕಸ್ಟಡಿಗೆ ಕಳುಹಿಸಲಾಗಿದೆ.

ಡ್ರಗ್ಸ್ ಪ್ರಕರಣ ಸಂಬಂಧ ಬಂಧಿಸಲ್ಪಟ್ಟಿರುವ ಬಾಲಿವುಡ್ ನಟ ಅರ್ಮಾನ್ ಕೊಹ್ಲಿಯನ್ನು ಸೆಪ್ಟಂಬರ್ 1ರವರೆಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಕಸ್ಟಡಿಗೆ ಕಳುಹಿಸಲಾಗಿದೆ. ಡ್ರಗ್ಸ ಪ್ರಕರಣ ಸಂಬಂಧ ನಟ ಅರ್ಮಾನ್ ಕೊಹ್ಲಿಯನ್ನು ಆಗಸ್ಟ್ 28ರಂದ ದಕ್ಷಿಣ ಮುಂಬೈ ಪೊಲೀಸರು ಬಂಧಿಸಿದ್ದರು.

ಎ ಎನ್ ಐ ಪ್ರಕಾರ, "ನಟ ಅರ್ಮಾನ್ ಕೊಹ್ಲಿ ಮಾದಕದ್ರವ್ಯ ನಿಯಂತ್ರಣ ಬ್ಯೋರೊ ಬಂಧಿಸಿದ ಬಳಿಕ ಸೆಪ್ಟಂಬರ್ 1ರ ವರೆಗೆ ಕಳುಹಿಸಲಾಗಿದೆ. ಮುಂಬೈನ ಅವರ ನಿವಾಸದಿಂದ ಮಾದಕದ್ರವ್ಯವನ್ನು ವಶಪಡಿಸಿಕೊಂಡ ನಂತರ ಅವರನ್ನು ಬಂಧಿಸಲಾಯಿತು" ಎಂದು ಹೇಳಿದ್ದಾರೆ.

ಸದಾ ವಿವಾದಗಳಿಂದ ಸುದ್ದಿಯಾಗುವ ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ಈಗ ಡ್ರಗ್ಸ್ ವಿಚಾರವಾಗಿ ಪೊಲೀಸರ ಅತಿಥಿಯಾಗಿದ್ದಾರೆ. ಡ್ರಗ್ಸ್ ಸಂಬಂಧಿತ ಆರೋಪದಲ್ಲಿ ನಟ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಅರ್ಮಾನ್ ಕೊಹ್ಲಿ ಅವರ ಮುಂಬೈ ನಿವಾಸದ ಮೇಲೆ ಶನಿವಾರ (ಆಗಸ್ಟ್ 28) ಎನ್‌ಸಿಬಿ (Narcotics Control Bureau) ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಅರ್ಮಾನ್ ಮನೆಯಲ್ಲಿ ಮಾದಕ ದ್ರವ್ಯ ಸಿಕ್ಕಿದೆ ಎಂದು ವರದಿಯಾಗಿತ್ತು.

ಮನೆಯಲ್ಲಿ ಡ್ರಗ್ಸ್ ಪತ್ತೆಯಾದ ಹಿನ್ನೆಲೆ ನಟ ಅರ್ಮಾನ್ ಅವರನ್ನು ವಶಕ್ಕೆ ಪಡೆದ ಎನ್‌ಸಿಬಿ ವಲಯ ಮುಖ್ಯಸ್ಥ ಸಮೀರ್ ವಾಂಖೆಡೆ ದಕ್ಷಿಣ ಮುಂಬೈನ ಎನ್‌ಸಿಬಿ ಕಚೇರಿಗೆ ಕರೆತಂದಿದ್ದರು. ಇತ್ತೀಚಿಗಷ್ಟೆ ಟಿವಿ ಮತ್ತು ಸಿನಿಮಾ ಸೆಲೆಬ್ರಿಟಿಗಳಿಗೆ ಡ್ರಗ್ಸ್ ಸರಬರಾಜು ಮಾಡ್ತಿದ್ದ ಡ್ರಗ್ ಪೆಡ್ಲರ್ ನನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದರೆ. ವಿಚಾರಣೆ ವೇಳೆ ಈತನಿಗೆ ಅರ್ಮಾನ್ ಕೊಹ್ಲಿ ಜೊತೆ ಸಂಬಂಧವಿದ್ದಿದ್ದು ತಿಳಿದು ಬಂದಿದೆ.

ಈ ಹಿಂದೆ 2018ರಲ್ಲಿ ಅರ್ಮಾನ್ ಕೊಹ್ಲಿ ಸುಮಾರು 41 ಬಾಟಲಿಗಳ ಸ್ಕಾಚ್ ವಿಸ್ಕಿ ಹೊಂದಿದ್ದಕ್ಕಾಗಿ ಅಬಕಾರಿ ಇಲಾಖೆ ಬಂಧಿಸಿತ್ತು. 12 ಆಲ್ಕೋಹಾಲ್ ಬಾಟಲಿಗಳನ್ನು ಮನೆಯಲ್ಲಿ ಇಡಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಅರ್ಮಾನ್ 41 ಬಾಟಲಿಗಳನ್ನು ಹೊಂದಿದ್ದರು. ಅವುಗಳಲ್ಲಿ ಹೆಚ್ಚಿನವು ವಿದೇಶಿ ಬ್ರಾಂಡ್‌ಗಳಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಅದಕ್ಕೂ ಮೊದಲು ತನ್ನ ಗೆಳತಿ ನೀರು ರಾಂಧವಾ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ ಪ್ರಕರಣದಲ್ಲಿ ಅರ್ಮಾನ್ ಬಂಧನವಾಗಿತ್ತು. ಕೇಸ್ ಸಹ ದಾಖಲಾಗಿತ್ತು. ಒಂದು ವಾರಗಳ ಕಾಲ ತಲೆಮರಿಸಿಕೊಂಡಿದ್ದ ಅರ್ಮಾನ್ ಕೊನೆಗೆ ಲೋನವಾಲದಲ್ಲಿ ಸಿಕ್ಕಿಬಿದ್ದಿದ್ದರು. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆದರೆ, ಗೆಳತಿ ನೀರು ರಾಂಧವಾ ಈ ಕೇಸ್‌ ಹಿಂಪಡೆದರು.

ಕಳೆದ ಏಪ್ರಿಲ್‌ನಲ್ಲಿ ಡ್ರಗ್ಸ್ ಪ್ರಕರಣ ಸಂಬಂಧ ಬಂಧಿಸಲ್ಪಟ್ಟಿದ್ದ ನಟ ಅಜಾಜ್ ಖಾನ್ ವಿಚಾರಣೆ ವೇಳೆ ಗೌರವ್ ಹೆಸರು ಬಹಿರಂಗ ಪಡಿಸಿದ್ದರು. ಬಳಿಕ ಪೊಲೀಸರು ಗೌರವ್ ಗಾಗಿ ಬಲೆ ಬೀಸಿದ್ದರು. ಗೌರವ್ ಮನೆಯ ಮೇಲೆ ದಾಳಿ ನಡೆಸಿದ್ದ ಪೊಲೀಸರಿಗೆ ಅಪಾರ ಪ್ರಮಾಣದ ಮಾದಕದ್ರವ್ಯ ಪತ್ತೆಯಾಗಿತ್ತು. ಆದರೆ ಪೊಲೀಸರ ಕಂಡ ತಕ್ಷಣ ನಟ ಗೌರವ್ ಮತ್ತು ಆವರ ಸ್ನೇಹಿತರು ಓಡಿ ಹೋಗಿದ್ದರು. ಅಂದಿನಿಂದ ಮುಂಬೈ ಪೊಲೀಸರು ಗೌರವ್ ಗಾಗಿ ಹುಡುಕಾಟ ನಡೆಸುತ್ತಿದ್ದರು. ಇದೀಗ ಗೌರವ್ ಪೊಲೀಸರ ಕೈಗೆ ಸಿಕ್ಕಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಇನ್ನು ಬೆಂಗಳೂರು ಪೊಲೀಸರು ಇಂದು (ಆಗಸ್ಟ 30) ಅನೇಕ ಸೆಲೆಬ್ರಿಟಿಗಳ ಮನೆ ಮೇಲೆ ದಾಳಿ ನಡಿಸಿದ್ದು ಮಾಡೆಲ್ ಸೋನಿಯಾ, ಉದ್ಯಮಿ ಭರತ್, ಡಿಜೆ ವಚನ್ ಚಿನ್ನಪ್ಪ ಅವರನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಇವರ ನಿವಾಸದ ಮೇಲೆ ದಾಳಿ ನಡೆಸಿದ್ದ ಪೊಲೀಸರಿಗೆ ಮಾದಕದ್ರವ್ಯ ಪತ್ತೆಯಾಗಿದೆ. ಬಳಿಕ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.