ಬ್ರೇಕಿಂಗ್ ನ್ಯೂಸ್
31-05-22 07:51 pm Mangalore Correspondent ಕರಾವಳಿ
ಮಂಗಳೂರು, ಮೇ 31: ಮಳಲಿ ಜುಮ್ಮಾ ಮಸೀದಿ ಬಗ್ಗೆ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟಿನಲ್ಲಿ ಇಂದು ಮಸೀದಿ ಕಮಿಟಿ ಮತ್ತು ವಿಶ್ವ ಹಿಂದು ಪರಿಷತ್ ಪರ ವಕೀಲರ ಮಧ್ಯೆ ತೀವ್ರ ವಾಗ್ವಾದ ನಡೆದಿದೆ. ವಿಶ್ವ ಹಿಂದು ಪರಿಷತ್ ಪರ ವಕೀಲರು ಉತ್ತರ ಪ್ರದೇಶದ ಗ್ಯಾನವಾಪಿ ರೀತಿಯಲ್ಲೇ ಸ್ಥಳ ಸರ್ವೇ ಮತ್ತು ತನಿಖೆಗೆ ಅಧಿಕಾರಿಗಳ ತಂಡದ ಆಯೋಗ ನೇಮಕ ಮಾಡುವಂತೆ ನ್ಯಾಯಾಲಯದಲ್ಲಿ ಕೇಳಿಕೊಂಡಿದ್ದು, ಮಸೀದಿ ಕಮಿಟಿ ಪರ ವಕೀಲರು ಪ್ರಬಲ ಆಕ್ಷೇಪ ಸಲ್ಲಿಸಿದ್ದಾರೆ.
ಗ್ಯಾನವಾಪಿಯ ಪ್ರಕರಣಕ್ಕೂ ಮಳಲಿ ಮಸೀದಿಗೂ ಹೋಲಿಕೆ ಮಾಡುವುದಕ್ಕೆ ಸಾಧ್ಯವಿಲ್ಲ. ಗ್ಯಾನವಾಪಿ ಪ್ರಕರಣದಲ್ಲಿ ಸಾರ್ವಜನಿಕ ಹಿತಾಸಕ್ತಿ ಇತ್ತು. ಪಬ್ಲಿಕ್ ರೆಪ್ರೆಸೆಂಟ್ ಆಗಿ ಹಲವಾರು ಅರ್ಜಿಗಳು ಕೋರ್ಟಿಗೆ ಸಲ್ಲಿಕೆಯಾಗಿದ್ದವು. ಆದರೆ ಮಳಲಿ ಮಸೀದಿ ಪ್ರಕರಣದಲ್ಲಿ ಇಬ್ಬರು ಖಾಸಗಿ ವ್ಯಕ್ತಿಗಳು ಅರ್ಜಿ ಸಲ್ಲಿಕೆ ಮಾಡಿದ್ದು ಕೇವಲ ಮಸೀದಿ ನವೀಕರಣ ಕಾಮಗಾರಿಗೆ ತಡೆ ಕೇಳಿದ್ದಾರೆ. ಇದನ್ನು ಇಡೀ ಹಿಂದು ಸಮಾಜದ ಕೇಳಿಕೆ ಎಂದು ಪರಿಗಣಿಸಲು ಸಾಧ್ಯವಾಗದು ಎಂದು ಮಸೀದಿ ಕಮಿಟಿ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಎಂ.ಪಿ.ಶೆಣೈ ವಾದಿಸಿದ್ದಾರೆ.
ಅಲ್ಲದೆ, ಅರ್ಜಿದಾರರು ತಮ್ಮ ಕುಟುಂಬಸ್ಥರು 500 ವರ್ಷಗಳ ಹಿಂದೆ ಆ ಜಾಗದಲ್ಲಿ ಆರಾಧನೆ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ. ಯಾವ ದೇವರನ್ನು ಆರಾಧಿಸುತ್ತಿದ್ದರು ಅನ್ನೋದು ಅವರಿಗೆ ತಿಳಿದಿಲ್ಲ. ಹಾಗಿರುವಾಗ, ಆ ಜಾಗದ ಬಗ್ಗೆ 31 ವರ್ಷದ ವ್ಯಕ್ತಿಯೊಬ್ಬ ಈಗ ಹಕ್ಕು ಕೇಳುವುದು ಸರಿ ಎನಿಸುವುದಿಲ್ಲ. ಅಯೋಧ್ಯೆಯ ರಾಮ ಜನ್ಮಭೂಮಿ ಪ್ರಕರಣದಲ್ಲಿ, ಅದು ಶ್ರೀರಾಮನ ಜನ್ಮಭೂಮಿ ಎಂಬ ಅಹವಾಲು ಇತ್ತು. ಅದೇ ಜಾಗವನ್ನು ನಮಗೆ ಬಿಟ್ಟು ಕೊಡಬೇಕೆಂದು ಸಾರ್ವಜನಿಕ ನೆಲೆಯಲ್ಲಿ ವಾದ ನಡೆದಿತ್ತು. ಸ್ವಾತಂತ್ರ್ಯ ಪೂರ್ವದಿಂದಲೂ ಅದೊಂದು ವ್ಯಾಜ್ಯವಾಗಿತ್ತು. ಅದಕ್ಕೂ ಇದಕ್ಕೂ ಸಂಬಂಧವೇ ಇಲ್ಲ. 1991ರಲ್ಲಿ ಜಾರಿಯಾದ ಕಾಯ್ದೆ ಪ್ರಕಾರ, ಸ್ವಾತಂತ್ರ್ಯ ಕಾಲದಲ್ಲಿ ಯಾವೆಲ್ಲಾ ಆರಾಧನಾ ಸ್ಥಳಗಳಿದ್ದುವೋ ಅವೆಲ್ಲವನ್ನೂ ಯಥಾಸ್ಥಿತಿ ಇರಿಸಬೇಕೆಂದು ಹೇಳಲಾಗಿದೆ. ಆ ಕಾಯ್ದೆ ಪ್ರಕಾರ, ಸ್ವಾತಂತ್ರ್ಯ ಪೂರ್ವದ ಹಿನ್ನೆಲೆ ಇಟ್ಟುಕೊಂಡು ಮಳಲಿ ಮಸೀದಿ ಬಗ್ಗೆ ಹಕ್ಕು ಕೇಳುವುದು ತಪ್ಪಾಗುತ್ತದೆ ಎಂದು ವಕೀಲರು ವಾದ ಮಂಡಿಸಿದ್ದಾರೆ.
ಕೊನೆಗೆ, ಮಸೀದಿ ಕಮಿಟಿಯ ಪರವಾಗಿ ಜಾಗದ ದಾಖಲೆಗಳನ್ನು ಕೋರ್ಟಿಗೆ ವಕೀಲರು ಸಲ್ಲಿಸಿದರು. ಈ ವೇಳೆ, ವಿಎಚ್ ಪಿ ಪರವಾಗಿ ಹಾಜರಿದ್ದ ವಕೀಲ ಚಿದಾನಂದ ಕೆದಿಲಾಯ, ದಾಖಲೆಗಳ ಲಕೋಟೆ ಹರಿದಿದ್ದು, ಈ ಮೊದಲೇ ತೆರೆಯಲಾಗಿದೆ. ಜಾಗದ ಬಗ್ಗೆ ತಡೆಯಾಜ್ಞೆ ಇರುವಾಗ ಕೋರ್ಟಿನಲ್ಲಿ ತೆರೆಯಬೇಕೇ ಹೊರತು ಅದಕ್ಕೂ ಮುನ್ನ ತೆರೆಯುವಂತಿಲ್ಲ ಎಂದು ಆಕ್ಷೇಪಿಸಿದರು. ಆದರೆ, ಎಂ.ಪಿ.ಶೆಣೈ ಇಲ್ಲಿ ಲಕೋಟೆ ತೆರೆಯುವ ವಿಚಾರ ಬರುವುದಿಲ್ಲ. ಅಷ್ಟಕ್ಕೂ ನಾವು ತೆರೆದು ನೋಡಿಲ್ಲ. ಅದರಲ್ಲಿ ಏನಿದೆಯೋ ಅದನ್ನು ಕೋರ್ಟ್ ತೆರೆದು ನೋಡಲಿ ಎಂದು ಹೇಳಿದರು.
ಕೊನೆಗೆ, ಭೂ ದಾಖಲೆಗಳ ಬಗ್ಗೆ ಪರಿಶೀಲನೆ ಮಾಡೋದಾಗಿ ನ್ಯಾಯಾಧೀಶರು ಹೇಳಿದರು. ದಾಖಲೆ ಸರಿ ಇದ್ದರೆ, ನೀವು ಮುಂದೂಡುವ ಅವಶ್ಯಕತೆ ಇಲ್ಲ. ಕೂಡಲೇ ತಡೆಯಾಜ್ಞೆ ತೆರವು ಮಾಡಿ. ಅಲ್ಲಿ ಕಾಮಗಾರಿ ಮುಂದುವರಿಸುವುದಕ್ಕೆ ಅವಕಾಶ ಕೊಡಿ ಎಂದು ಮಸೀದಿ ಕಮಿಟಿ ವಕೀಲರು ಕೇಳಿದರು. ಇದಕ್ಕೆ ವಿರೋಧಿ ವಕೀಲರು ನಮ್ಮ ವಕಾಲತ್ತು ಇದೆ ಎಂದಿದ್ದು, ಕೋರ್ಟ್ ವಿಚಾರಣೆಯನ್ನು ನಾಳೆಗೆ (ಜೂನ್ 1) ಮಂದೂಡಿತು.
ಗ್ಯಾನವಾಪಿ ಪ್ರಕರಣ ಆಧರಿಸಿ, ಸರ್ವೆ ನಡೆಸಬೇಕೆಂಬ ವಿಶ್ವ ಹಿಂದು ಪರಿಷತ್ ವಕೀಲರ ವಾದಕ್ಕೆ ಪುರಸ್ಕಾರ ಸಿಗದಿದ್ದರೆ, ನಾಳೆಯೇ ತಡೆಯಾಜ್ಞೆ ತೆರವು ಆಗುವ ಸಾಧ್ಯತೆಯಿದೆ. ಕೆಲವು ವಕೀಲರ ಮಾಹಿತಿ ಪ್ರಕಾರ, ಹಿಂದು ಪರ ವಕೀಲರು ಅರ್ಜಿ ಸಲ್ಲಿಸಿದ್ದರಲ್ಲಿಯೇ ತಪ್ಪು ಇದೆಯಂತೆ. ಇಬ್ಬರು ಖಾಸಗಿ ವ್ಯಕ್ತಿಗಳ ನೆಲೆಯಲ್ಲಿ ಮಸೀದಿ ಕಾಮಗಾರಿಗೆ ತಡೆಯಾಜ್ಞೆ ಮಾತ್ರ ಕೇಳಲಾಗಿದೆ ಎನ್ನಲಾಗುತ್ತಿದೆ. ಮಳಲಿ ಜುಮ್ಮಾ ಮಸೀದಿಯ ನವೀಕರಣ ಕಾಮಗಾರಿ ನಡೆಯುತ್ತಿದ್ದಾಗ, ಒಳಭಾಗದಲ್ಲಿ ದೇವಸ್ಥಾನದ ಮಾದರಿ ಚಿತ್ರಣ ಕಂಡುಬಂದಿದೆಯೆಂದು ಸ್ಥಳೀಯ ಇಬ್ಬರು ಕೋರ್ಟಿನಿಂದ ಕಾಮಗಾರಿಗೆ ತಡೆ ತಂದಿದ್ದರು. ಆನಂತರ, ಮಳಲಿ ಮಸೀದಿ ಪ್ರಕರಣ ಗ್ಯಾನವಾಪಿ ಮಾದರಿಯಲ್ಲೇ ರಾಷ್ಟ್ರೀಯ ಮಾಧ್ಯಮಗಳಲ್ಲಿ ಸದ್ದು ಮಾಡಿತ್ತು.
Malali Mosque Temple row, Mangalore court hearing first day points of arguments. The Hindu side has moved a civil court in Mangaluru and sought appointment of a court Commissioner to survey the Juma Masjid in Malali located on the outskirts of Mangaluru, while the Assayed Abdullahil Madani Mosque management submitted an appeal before the court to quash the Vishwa Hindu Parishad (VHP) demand.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
10-09-25 02:10 pm
Mangalore Correspondent
ಬಂಟ್ವಾಳ : ತನ್ನ ಮೇಲೆ ಹಲ್ಲೆ, ಕೊಲೆಯತ್ನವೆಂದು ಸುಳ್...
10-09-25 11:02 am
"ಅಮೃತ ಸೋಮೇಶ್ವರ ರಸ್ತೆ" ನಾಮಕರಣಕ್ಕೆ ಸೋಮೇಶ್ವರ ಪುರ...
09-09-25 10:47 pm
Mangalore Accident, Kulur, NHAI: ಕುಳೂರು ರಸ್ತೆ...
09-09-25 08:01 pm
YouTuber Munaf, SIT, Dharmasthala Case: ಎಸ್ಐಟ...
09-09-25 05:59 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm