ಬ್ರೇಕಿಂಗ್ ನ್ಯೂಸ್
09-06-22 10:26 pm Mangalore Correspondent ಕರಾವಳಿ
ಮಂಗಳೂರು, ಜೂನ್ 9 : ಮಳಲಿ ಮಸೀದಿ ವಕ್ಫ್ ಕಾಯ್ದೆಯಡಿ ಬರುವುದರಿಂದ ಪ್ರತಿವಾದಿಗಳು ಇಲ್ಲಿ ಅರ್ಜಿ ಸಲ್ಲಿಸುವುದಕ್ಕೇ ಸಾಧ್ಯವಿಲ್ಲ. ಪ್ರಶ್ನೆ ಮಾಡುವುದಕ್ಕೂ ಆಗಲ್ಲ ಎಂಬ ಮಸೀದಿ ಕಮಿಟಿ ಪರ ವಕೀಲರ ವಾದಕ್ಕೆ ವಿಶ್ವ ಹಿಂದು ಪರಿಷತ್ ಪರ ವಕೀಲರು ತೀವ್ರ ತಗಾದೆ ಎತ್ತಿದ್ದು, ಪ್ರತಿವಾದ ಮಂಡಿಸಿದ್ದಾರೆ.
ಏಳೆಂಟು ಅರ್ಜಿಗಳು ಸಲ್ಲಿಕೆ ಆಗಿರುವುದರಿಂದ ಯಾವ ಅರ್ಜಿಯನ್ನು ಮೊದಲು ಪರಿಗಣಿಸಬೇಕು ಅನ್ನುವ ಗೊಂದಲ ಎದ್ದಿರುವುದರಿಂದ ಜೂನ್ 9ರಂದು ನಿರ್ಧಾರ ಹೇಳುವುದಾಗಿ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ತಿಳಿಸಿದ್ದರು. ಹಾಗಾಗಿ ಗುರುವಾರ ಈ ಬಗ್ಗೆ ನಿರ್ಧಾರ ಹೊರಬೀಳುವ ನಿರೀಕ್ಷೆಯನ್ನು ವಕೀಲರು ಹೊಂದಿದ್ದರು. ಆದರೆ, ವಕ್ಫ್ ಕಾಯ್ದೆ ವಿಚಾರದಲ್ಲಿ ಪ್ರಶ್ನಿಸಿ ವಿಎಚ್ ಪಿ ಪರ ವಕೀಲ ಚಿದಾನಂದ ಕೆದಿಲಾಯ ಪ್ರಬಲ ವಾದ ಮಂಡಿಸಿದ್ದಾರೆ.

ನಮ್ಮ ಅರ್ಜಿದಾರರು ಸಲ್ಲಿಸಿರುವ ಅರ್ಜಿಯು ವಕ್ಫ್ ಟ್ರಿಬ್ಯುನಲ್ ಏನಿದೆಯೋ, ಅದರ ವ್ಯಾಪ್ತಿಗೆ ಬರೋದಿಲ್ಲ. ಯಾಕಂದ್ರೆ, ನಾವು ಎಲ್ಲಿಯೂ ಅದು ವಕ್ಫ್ ಆಸ್ತಿಯೋ, ಅಲ್ಲವೋ ಎಂಬ ಬಗ್ಗೆ ಪ್ರಶ್ನೆಯನ್ನೇ ಮಾಡಿಲ್ಲ. ಅಲ್ಲಿನ ಹೊರಗಿನ ಚಿತ್ರಣ ನೋಡಿ, ಅಲ್ಲೊಂದು ಐತಿಹಾಸಿಕ ಸ್ಮಾರಕ ಅಥವಾ ದೇವಸ್ಥಾನ ಇದೆಯೆಂದು ಹೇಳಿದ್ದಾರೆ. ಇತಿಹಾಸದ ನೆಲೆಗಟ್ಟಿನಲ್ಲಿ ಸ್ಮಾರಕದ ರಕ್ಷಣೆ ಆಗಬೇಕೆಂದು ಅರ್ಜಿಯಲ್ಲಿ ಕೇಳಿಕೊಂಡಿದ್ದಾರೆ.

ಆ ಕಟ್ಟಡವು ಸದ್ಯಕ್ಕೆ ಐತಿಹಾಸಿಕ ಸ್ಮಾರಕವೋ, ಕೇವಲ ಮಸೀದಿಯೋ ಅನ್ನುವುದನ್ನ ವಕ್ಫ್ ಟ್ರಿಬ್ಯುನಲ್ ನಿರ್ಧರಿಸುವುದಕ್ಕೂ ಆಗಲ್ಲ. ಅದನ್ನ ಸಿವಿಲ್ ಕೋರ್ಟ್ ನಿರ್ಧರಿಸಬೇಕು. ಅದಕ್ಕಾಗಿ ಆ ಜಾಗದ ಸರ್ವೇ ನಡೆಸುವುದಕ್ಕೆ ಆದೇಶ ಮಾಡಬೇಕು. ಸರ್ವೆ ನಡೆಸಿದರೆ, ಅಲ್ಲಿನ ಸ್ಮಾರಕ ಏನಿರಬಹುದು ಅನ್ನೋದು ತಿಳಿದುಬರುತ್ತದೆ. ಈ ಕಾರಣದಿಂದಾಗಿ ಇಲ್ಲಿ ವಕ್ಫ್ ಟ್ರಿಬ್ಯೂನಲ್ ವಿಚಾರ ಬರೋದಿಲ್ಲ ಎಂದು ಚಿದಾನಂದ ಕೆದಿಲಾಯ ವಾದಿಸಿದರು.
ಅಲ್ಲದೆ, 1991ರ ಆರಾಧನಾ ಸ್ಥಳಗಳ ಕುರಿತ ಕಾಯ್ದೆಯಡಿ ಅರ್ಜಿಯನ್ನೂ ವಜಾ ಮಾಡೋದಕ್ಕೂ ಆಗಲ್ಲ. ಯಾಕಂದ್ರೆ, ಆರಾಧನಾ ಸ್ಥಳಗಳ ಕಾಯಿದೆಯಲ್ಲೂ ಐತಿಹಾಸಿಕ ಸ್ಮಾರಕಗಳ ರಕ್ಷಣೆ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ. ಯಾವುದೇ ಐತಿಹಾಸಿಕ ಸ್ಮಾರಕಗಳನ್ನು ರಕ್ಷಣೆ ಮಾಡಬೇಕು ಎಂಬ ಬಗ್ಗೆ ಉಲ್ಲೇಖ ಇದೆ. ಹೀಗಿರುವಾಗ ನಮ್ಮ ಅರ್ಜಿದಾರರ ವಾದದಂತೆ ಅಲ್ಲಿರುವ ಸ್ಮಾರಕ ಏನೆಂದು ಗೊತ್ತಾಗಬೇಕು. ಅಗತ್ಯವಿದ್ದರೆ ಸ್ಮಾರಕ ರೂಪದಲ್ಲಿ ಅದರ ರಕ್ಷಣೆ ಆಗಬೇಕು. ಸರ್ವೇ ಮೂಲಕ ಸ್ಮಾರಕದ ಬಗ್ಗೆ ಗೊತ್ತಾದರೆ ಅದನ್ನ ಸಂರಕ್ಷಣೆ ಮಾಡಲು ಸಾಧ್ಯ. ಈಗ ಇರುವ ತಡೆಯಾಜ್ಞೆಯನ್ನು ತಾವು ತೆರವು ಮಾಡಿದಲ್ಲಿ ಅಲ್ಲಿ ಮಸೀದಿಯೇ ನಿರ್ಮಾಣ ಆಗುತ್ತದೆ. ಇದರಿಂದ ಐತಿಹಾಸಿಕ ಸ್ಮಾರಕವೊಂದನ್ನು ಸಂರಕ್ಷಿಸುವ ಅವಕಾಶವೇ ತಪ್ಪಿ ಹೋಗುತ್ತದೆ ಎಂದು ವಕೀಲ ಕೆದಿಲಾಯ ಸುದೀರ್ಘ ವಾದ ಮಂಡಿಸಿದರು.
ಕೊನೆಗೆ, ಸುದೀರ್ಘ ವಾದ ಕೇಳಿದ ನ್ಯಾಯಾಧೀಶರು ಯಾವ ಅರ್ಜಿ ಮೊದಲು ಪರಿಗಣಿಸಬೇಕೆಂಬ ಬಗ್ಗೆ ನಿರ್ಧಾರ -ಹೇಳಲು ಹಿಂಜರಿಕೆ ತೋರಿದ್ದು, ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿದರು. ಕಳೆದ ಒಂದು ವಾರದಿಂದ ಇದೇ ರೀತಿ ವಿಚಾರಣೆ ಮುಂದುವರಿದಿದ್ದು, ಎರಡೂ ಕಡೆಯ ವಕೀಲರ ಜಟಾಪಟಿಯಿಂದಾಗಿ ಕೋರ್ಟ್ ನಿರ್ಧಾರ ಉಳಿಸಿಕೊಂಡು ಮತ್ತಷ್ಟು ಜಟಿಲ ಸನ್ನಿವೇಶಕ್ಕೆ ಸಾಕ್ಷಿಯಾಗುತ್ತಿದೆ.
Malali Mosque temple row VHP lawyer fights for survey, court hearing postponed to 10th June.
17-11-25 07:25 pm
Bangalore Correspondent
ಖರ್ಗೆ ಕೋಟೆಯಲ್ಲಿ ಆರೆಸ್ಸೆಸ್ ಸಂಚಲನ ; ಒಂದೂವರೆ ಕಿಮ...
16-11-25 09:15 pm
ಸಚಿವ ಪ್ರಿಯಾಂಕ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಕೊ...
13-11-25 08:33 pm
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
17-11-25 10:58 pm
HK News Desk
Delhi Blast Probe Widens: ದೆಹಲಿ ಸ್ಫೋಟ ; ಹರ್ಯಾ...
17-11-25 07:33 pm
ಉಮ್ರಾ ಯಾತ್ರೆ ತೆರಳಿದ್ದ ಹೈದ್ರಾಬಾದ್ ಮೂಲದ 45 ಯಾತ್...
17-11-25 06:13 pm
ರಾಜ್ಯದಲ್ಲಿ ಸಂಪುಟ ಸರ್ಜರಿಗೆ ಗ್ರೀನ್ ಸಿಗ್ನಲ್ ; ಸಿ...
15-11-25 11:12 pm
ದೆಹಲಿ ಕಾರು ಸ್ಫೋಟ ಪ್ರಕರಣ ; ಪಶ್ಚಿಮ ಬಂಗಾಳದಲ್ಲಿ ಮ...
15-11-25 07:09 pm
18-11-25 10:18 pm
Mangaluru Staff
UT Khader, Ullal, Mangalore Dc, Ashwini: ತನ್ನ...
18-11-25 07:03 pm
Mangalore case, Police, Inspector Balakrishna...
18-11-25 11:27 am
ಸೌಜನ್ಯಾ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ...
17-11-25 06:16 pm
ದೇರಳಕಟ್ಟೆ ಕಾಲೇಜಿನ ಕೇರಳ ವಿದ್ಯಾರ್ಥಿ ನಾಪತ್ತೆ ; ಗ...
16-11-25 10:48 pm
18-11-25 09:09 pm
Mangaluru Staff
ರಾಜ್ಯದಲ್ಲೇ ಅತಿದೊಡ್ಡ ಡಿಜಿಟಲ್ ಅರೆಸ್ಟ್ ವಂಚನೆ ; ಸ...
18-11-25 11:18 am
ದುಬಾರಿ ಪಾರ್ಸೆಲ್ ಇದೆ, ಕಸ್ಟಮ್ಸ್ ಸುಂಕ ಕಟ್ಟಲು ಹೇಳ...
17-11-25 12:54 pm
ಬೆಳಗಾವಿಯಲ್ಲಿ ಕುಳಿತು ಅಮೆರಿಕನ್ನರಿಗೆ ಗಾಳ ; ಆನ್ಲೈ...
14-11-25 05:32 pm
Ullal News, Animal Attack, Crime, Kumpala: ಕಣ...
14-11-25 11:16 am