ಭಯೋತ್ಪಾದನೆ ವಿರುದ್ಧ ಮಂಗಳೂರಿನ ಏಳು ಕಡೆ ಕೇಸರಿ ಜನಜಾಗೃತಿ, ಮಾನವ ಸರಪಳಿ 

28-11-22 05:58 pm       Mangalore Correspondent   ಕರಾವಳಿ

ಕರಾವಳಿಯ ಭದ್ರತೆಗೆ ಸವಾಲೊಡ್ಡಿರುವ ಭಯೋತ್ಪಾದನಾ ಚಟುವಟಿಕೆ ವಿರುದ್ಧ ವಿಶ್ವ ಹಿಂದೂ ಪರಿಷತ್, ಬಜರಂಗದಳ- ದುರ್ಗಾವಾಹಿನಿ ವತಿಯಿಂದ ಮಂಗಳೂರಿನ 7 ಪ್ರದೇಶಗಳಲ್ಲಿ ಜನಜಾಗೃತಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಉಳ್ಳಾಲದ ತೊಕ್ಕೊಟ್ಟಲ್ಲೂ ಬಜರಂಗದಳದ ಕಾರ್ಯಕರ್ತರು ಮಾನವ ಸರಪಳಿ ರಚಿಸಿ ಭಿತ್ತಿ ಪತ್ರಗಳನ್ನ ಪ್ರದರ್ಶಿಸಿ ಜನಜಾಗೃತಿ ನಡೆಸಿದರು. 

ಉಳ್ಳಾಲ, ನ.28 : ಕರಾವಳಿಯ ಭದ್ರತೆಗೆ ಸವಾಲೊಡ್ಡಿರುವ ಭಯೋತ್ಪಾದನಾ ಚಟುವಟಿಕೆ ವಿರುದ್ಧ ವಿಶ್ವ ಹಿಂದೂ ಪರಿಷತ್, ಬಜರಂಗದಳ- ದುರ್ಗಾವಾಹಿನಿ ವತಿಯಿಂದ ಮಂಗಳೂರಿನ 7 ಪ್ರದೇಶಗಳಲ್ಲಿ ಜನಜಾಗೃತಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಉಳ್ಳಾಲದ ತೊಕ್ಕೊಟ್ಟಲ್ಲೂ ಬಜರಂಗದಳದ ಕಾರ್ಯಕರ್ತರು ಮಾನವ ಸರಪಳಿ ರಚಿಸಿ ಭಿತ್ತಿ ಪತ್ರಗಳನ್ನ ಪ್ರದರ್ಶಿಸಿ ಜನಜಾಗೃತಿ ನಡೆಸಿದರು. 

ವಿಶ್ವ ಹಿಂದೂ ಪರಿಷತ್ ಉಳ್ಳಾಲ ನಗರ ಪ್ರಖಂಡದ ಪ್ರಚಾರ, ಪ್ರಸಾರ ಪ್ರಮುಖರಾದ ಆಶಿಕ್ ಗೋಪಾಲಕೃಷ್ಣ ಮಾತನಾಡಿ ದೇಶದ ಹಿತಕ್ಕಾಗಿ ಜಾರಿಗೊಳಿಸಿದ್ದ NRC ಕಾಯ್ದೆಯನ್ನ ವಿರೋಧಿಸಿ ಬೀದಿಗಿಳಿದು ಪ್ರತಿಭಟನೆ ಮಾಡಿದವರು ಲವ್ ಜಿಹಾದ್ ಹೆಸರಲ್ಲಿ ಹಿಂದೂ ಹೆಣ್ಮಗಳು ತುಂಡು, ತಂಡಾಗಿ ಹತ್ಯೆಯಾದಾಗ ಪ್ರತಿಭಟಿಸಲ್ಲ. ಭಯೋತ್ಪಾದಕ ಚಟುವಟಿಕೆಗಳ ವಿರುದ್ಧವೂ ಅವರು ಪ್ರತಿಭಟನೆ ನಡೆಸೋಲ್ಲ. ಕರಾವಳಿಯಲ್ಲಿ ಉಗ್ರ ಚಟುವಟಿಕೆಗಳು ನಡೆಯದಂತೆ ಹಿಂದೂ ಸಮಾಜ ಸಧೃಢಗೊಳ್ಳಬೇಕೆಂದು ಕರೆ ನೀಡಿದರು. 

ವಿಶ್ವ ಹಿಂದು ಪರಿಷತ್, ಬಜರಂಗದಳ ಪ್ರಮುಖರಾದ ನಾರಾಯಣ ಕುಂಪಲ, ಗೋಪಾಲ ಕುತ್ತಾರು, ಪವಿತ್ರ ಕೆರೆಬೈಲು, ಅರ್ಜುನ್ ಮಾಡೂರು, ಬಿಜೆಪಿ ಮುಖಂಡರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಚಂದ್ರಹಾಸ್ ಪಂಡಿತ್ ಹೌಸ್ ಮೊದಲಾದವರು ಉಪಸ್ಥಿತರಿದ್ದರು. 

ಮಂಗಳೂರಿನ ಏಳು ಕಡೆ ಧರಣಿ 

ಮಂಗಳೂರು ನಗರದ ಅಂಬೇಡ್ಕರ್ ವೃತ್ತ , ಉರ್ವಾ ಸ್ಟೋರ್, ಕಾವೂರು, ಮೂಡುಬಿದ್ರೆ, ತೊಕ್ಕೊಟ್ಟು, ಗುರುಪುರ -ಕೈಕಂಬ ಮತ್ತು ಸುರತ್ಕಲ್ ಪ್ರದೇಶದಲ್ಲಿ ಬಜರಂಗದಳ ಕಾರ್ಯಕರ್ತರು ಮಾನವ ಸರಪಳಿ, ಪ್ರತಿಭಟನಾ ಪ್ರದರ್ಶನ ನಡೆಸಿದ್ದಾರೆ.

VHP and Bajarang dal members protest over terror activities in Mangalore all over city.