ಮುಲ್ಕಿಯಲ್ಲಿ ಭೀಕರ ಅಪಘಾತ ; ತೀರ್ಥಹಳ್ಳಿ ಮೂಲದ ದಂಪತಿ ಸ್ಥಳದಲ್ಲೇ ಸಾವು

07-03-23 03:37 pm       Mangalore Correspondent   ಕರಾವಳಿ

ಮಂಗಳೂರು- ಉಡುಪಿ ರಾಷ್ಟ್ರೀಯ ಹೆದ್ದಾರಿಯ ಮುಲ್ಕಿಯ ಬಪ್ಪನಾಡು ದೇವಸ್ಥಾನ ಮುಂಭಾಗದಲ್ಲಿ ಭೀಕರ ಅಪಘಾತ ನಡೆದಿದ್ದು, ಟ್ಯಾಂಕರ್ ಡಿಕ್ಕಿಯಾಗಿ ಸ್ಕೂಟರಿನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವು ಕಂಡಿದ್ದಾರೆ.

ಮಂಗಳೂರು, ಮಾ.7: ಮಂಗಳೂರು- ಉಡುಪಿ ರಾಷ್ಟ್ರೀಯ ಹೆದ್ದಾರಿಯ ಮುಲ್ಕಿಯ ಬಪ್ಪನಾಡು ದೇವಸ್ಥಾನ ಮುಂಭಾಗದಲ್ಲಿ ಭೀಕರ ಅಪಘಾತ ನಡೆದಿದ್ದು, ಟ್ಯಾಂಕರ್ ಡಿಕ್ಕಿಯಾಗಿ ಸ್ಕೂಟರಿನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವು ಕಂಡಿದ್ದಾರೆ.

ಮೃತರನ್ನು ತೀರ್ಥಹಳ್ಳಿ ಮೂಲದ ಅಕ್ಬರ್ ಪಾಷಾ(61) ಹಾಗೂ ಖತೀಜಾ (46) ಎಂದು ಗುರುತಿಸಲಾಗಿದೆ. ಇವರು ತೀರ್ಥಹಳ್ಳಿಯಿಂದ ಮಂಗಳೂರಿಗೆಂದು ಸ್ಕೂಟರಿನಲ್ಲಿ ಹೊರಟಿದ್ದರು. ಬೆಳಗ್ಗೆ ಹೊರಟಿದ್ದವರು ಮಧ್ಯಾಹ್ನ 12 ಗಂಟೆ ಸುಮಾರಿಗೆ ಮುಲ್ಕಿ ತಲುಪಿದ್ದರು. ಬಪ್ಪನಾಡು ದೇವಸ್ಥಾನ ಮುಂಭಾಗದ ಬ್ಯಾರಿಕೇಡ್ ಹಾಕಿರುವಲ್ಲಿ ಸ್ಕೂಟರ್ ಸಾಗುತ್ತಿದ್ದಾಗ ಎಲ್ ಪಿಜಿ ಟ್ಯಾಂಕರ್ ಹಿಂಭಾಗದಿಂದ ಡಿಕ್ಕಿಯಾಗಿದೆ.

ಡಿಕ್ಕಿಯ ರಭಸಕ್ಕೆ ದಂಪತಿ ಸ್ಕೂಟರಿನಿಂದ ರಸ್ತೆಗೆ ಎಸೆಯಲ್ಪಟ್ಟಿದ್ದು ಟ್ಯಾಂಕರ್ ಲಾರಿ ಇವರ ಮೇಲಿನಿಂದಲೇ ಹರಿದು ಹೋಗಿದೆ. ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ನೀಡಿದ್ದು, ಟ್ಯಾಂಕರ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

Mangalore Mulki accident, LPG tanker rams scooter, couple from Thirthahalli killed on spot. The deceased have been identified as Pasha and Katiz.