ಕಸಾಯಿಖಾನೆಗೆ ತಂದಿದ್ದ ಎಮ್ಮೆ ದಾಂಧಲೆ ; ತಿವಿತಕ್ಕೆ ಒಬ್ಬ ಯುವಕ ಸಾವು, ಹಲವರಿಗೆ ಗಾಯ

11-03-23 03:16 pm       Mangalore Correspondent   ಕರಾವಳಿ

ಕಸಾಯಿಖಾನೆಗೆ ಎಳೆದು ತಂದಿದ್ದ ಎಮ್ಮೆಯೊಂದು ಯುವಕನನ್ನೇ ತಿವಿದು ಕೊಂದ ಘಟನೆ ಕಾಸರಗೋಡಿನಲ್ಲಿ ನಡೆದಿದೆ. 

ಮಂಗಳೂರು, ಮಾ.11 : ಕಸಾಯಿಖಾನೆಗೆ ಎಳೆದು ತಂದಿದ್ದ ಎಮ್ಮೆಯೊಂದು ಯುವಕನನ್ನೇ ತಿವಿದು ಕೊಂದ ಘಟನೆ ಕಾಸರಗೋಡಿನಲ್ಲಿ ನಡೆದಿದೆ. 

ಚಿತ್ರದುರ್ಗ ಮೂಲದ ಸಾದಿಕ್‌ (22) ಮೃತ ಯುವಕ. ಆತನೇ ತನ್ನ ವಾಹನದಲ್ಲಿ  ಎಮ್ಮೆಯನ್ನು ಮೊಗ್ರಾಲ್ ಪುತ್ತೂರಿನ ಕಸಾಯಿಖಾನೆಗೆ ತಂದಿದ್ದು ಅಲ್ಲಿ ತಲುಪುತ್ತಿದ್ದಂತೆಯೇ ಎಮ್ಮೆ ಸಿಟ್ಟಿನಿಂದ ತಿವಿಯಲು ಮುಂದಾಗಿದೆ. ಈ ವೇಳೆ, ಅದನ್ನು ಹಿಡಿಯಲು ಮುಂದೆ ಬಂದ ಸಾದಿಕ್‌ನನ್ನು ಕೊಂಬಿನಿಂದ ತಿವಿದು ಹಾಕಿದೆ.

ಕೈಕಾಲು ಕಟ್ಟಿ ತಂದಿದ್ದ ಎಮ್ಮೆಯನ್ನು ವಾಹನದಿಂದ ಇಳಿಸುವಾಗ ಕೊರಳಲ್ಲಿದ್ದ ಹಗ್ಗ ತುಂಡಾಗಿದೆ. ಹಗ್ಗ ಬಿಚ್ಚಿಕೊಳ್ಳುತ್ತಲೇ ಎಮ್ಮೆ ಆಕ್ರೋಶದೊಂದಿಗೆ ನುಗ್ಗಿದ್ದು ದಾಂಧಲೆ ನಡೆಸಿದೆ. ಎಮ್ಮೆಯನ್ನು ಹಿಡಿಯುವ ಪ್ರಯತ್ನದಲ್ಲಿ ಸಾದಿಕ್‌ಗೆ ಹೊಟ್ಟೆಗೆ ತಿವಿದಿದೆ. ತೀವ್ರ ಗಾಯಗೊಂಡ ಸಾದಿಕ್‌ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾನೆ. 

ಎಮ್ಮೆಯನ್ನು ಹಿಡಿಯಲು ನೂರಾರು ಜನ ಪ್ರಯತ್ನಿಸಿದ್ದು 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಬಳಿಕ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಆಗಮಿಸಿ ಎಮ್ಮೆಯನ್ನು ಅಡ್ಡಹಾಕಿ ಹಿಡಿದಿದ್ದಾರೆ. ‌

A 22-year-old man died after a buffalo attacked him at Mogral Puttur, Kasargod. The deceased is identified as Sadiq from Chitradurga.