ಬ್ರೇಕಿಂಗ್ ನ್ಯೂಸ್
14-03-23 01:38 pm Mangalore Correspondent ಕರಾವಳಿ
ಮಂಗಳೂರು, ಮಾ.14 : ಭರತ್ ಶೆಟ್ಟಿ ನನಗೆ ಬುದ್ಧಿ ಹೇಳಲು ಬಂದಿದ್ದಾರೆ. ಒಂದೆಡೆ ಬಾವಲಿ ಅಂತಾರೆ, ವೃತ್ತಿಯಲ್ಲಿ ಡಾಕ್ಟರ್ ಆಗಿ ಮನುಷ್ಯರನ್ನು ಬಾವಲಿಗೆ ಹೋಲಿಸ್ತೀರಿ. ಬಾವಲಿ ರೂಪದಲ್ಲಾದರೂ ನಾನಿದ್ದೇನೆ. ಪ್ರಸಾದ ತುಳಿದು ಕಾಲಡಿ ಹಾಕ್ತಾರೆ ಅಂದಿದ್ದಾರೆ. ಅಮಾಯಕ ಜನರನ್ನು ಮೋಸ ಮಾಡಲು ಹೋಗಬೇಡಿ. ನಿಮ್ಮಲ್ಲಿಗೆ ಮುಸ್ಲಿಮರು ಬಂದರೆ ವಿಷ ನೀಡುವ ಮನಸ್ಥಿತಿಯವರು ನೀವು. ನಾನು ದೇವರ ಪ್ರಸಾದವನ್ನು ಕಾಲಡಿಗೆ ಹಾಕಿದ್ದೇನೆಂದು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಿ. ನಾನು ಆ ರೀತಿ ಮಾಡಿಲ್ಲ ಎಂದು ಪ್ರಮಾಣ ಮಾಡುತ್ತೇನೆ ಎಂದು ಮಾಜಿ ಶಾಸಕ ಮೊಯ್ದೀನ್ ಬಾವ ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಬಾಲ್ಯದಿಂದಲೂ ನನಗೆ ಸಂಸ್ಕಾರ ಕಲಿಸಿದ್ದಾರೆ ತಂದೆ ತಾಯಿ. ಇತರ ಧರ್ಮದ ಬಗ್ಗೆ ಗೌರವ ಕಲಿಸಿಕೊಟ್ಟಿದ್ದಾರೆ. ಭರತ್ ಶೆಟ್ಟಿ ಅವರನ್ನು ದೇಗುಲಕ್ಕೆ ನಾನೆಷ್ಟೋ ಬಾರಿ ಕರೆದಿದ್ದೇನೆ, ನೀವು ಬರಲಿಲ್ಲ. ನನ್ನ ಅವಧಿಯಲ್ಲಿ ದೇಗುಲಕ್ಕೆ ಇಟ್ಟಿದ್ದ 58 ಕೋಟಿ ಹಣದಲ್ಲಿ 40 ಕೋಟಿಯನ್ನು ವಾರ್ಡ್ ಗಳಿಗೆ ಹಂಚಿದ್ದೀರಿ. ನಿಮಗೆ ಹಿಂದುತ್ವ ಹೇಳಲು ಅರ್ಹತೆ ಇಲ್ಲ. ನಿಮ್ಮ ಪ್ರಚಾರಕ್ಕೆ ಹಿಂದುತ್ವ ಬಳಸುತ್ತಿದ್ದೀರಿ. ದೇವಸ್ಥಾನಕ್ಕೆ ಇಟ್ಟಿದ್ದ ಹಣವನ್ನು ಕಮಿಷನ್ ಆಸೆಗಾಗಿ ರಸ್ತೆಗಳಿಗೆ ಹಂಚಿದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎರಡು ವರ್ಷಗಳ ಹಿಂದೆ ಕಪಿಲಾ ಗೋಶಾಲೆಯನ್ನು ಒಡೆದು ದನಗಳು ಮೇಯುತ್ತಿದ್ದ ಜಾಗವನ್ನು ಕೋಸ್ಟ್ ಗಾರ್ಡ್ ಗೆ ಹಸ್ತಾಂತರ ಮಾಡಿದ್ದೀರಿ. ಶೆಡ್ ಒಡೆಯುವಾಗ ಅಲ್ಲಿದ್ದ ದನ, ಕರುಗಳು ಮಳೆಯಲ್ಲಿ ನೆನೆಯುತ್ತಿದ್ದವು. ಈಗ ಅವುಗಳಿಗೆ ಕುಡಿಯಲು ನೀರಿಲ್ಲದ ಸ್ಥಿತಿಯಾಗಿದೆ. ಈಗ ನಾನು ಬಾವಿ ತೋಡಿಸಿ ಕೊಡ್ತಿದೇನೆ. ಇವರಿಗೆ ಗೋವುಗಳ ಬಗ್ಗೆ ಕಾಳಜಿ ಇರುತ್ತಿದ್ದರೆ ಹೀಗೆ ಮಾಡುತ್ತಿದ್ರಾ ಎಂದು ಕೇಳಿದ ಬಾವ, ದೇವರ ಪ್ರಸಾದ ಬಗ್ಗೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಿ. ಯಾವುದೇ ದರ್ಗಾಕ್ಕೆ ಬೇಕಾದರೂ ನಾನು ಬರ್ತೇನೆ. ನಾನಿದ್ದಾಗ ಎಷ್ಟು ಅನುದಾನ ದೇವಾಲಯಗಳಿಗೆ, ನಾರಾಯಣ ಗುರು ಮಂದಿರಗಳಿಗೆ ಕೊಟ್ಟಿದ್ದೇನೆ, ನೀವೆಷ್ಟು ಕೊಟ್ಟಿದ್ದೀರಿ ನೋಡೋಣ. ನಾನು ದಾಖಲೆ ಇಡಲು ಸಿದ್ಧನಿದ್ದೇನೆ ಎಂದು ಹೇಳಿದರು.
ನಿಮ್ಮ ಹೊಟ್ಟೆ ತುಂಬಿಸಲು ಮುಸ್ಲಿಮರು ಬೇಕು. ನಿಮ್ಮ ಗುತ್ತಿಗೆಯನ್ನು ಮುಸ್ಲಿಂ ಗುತ್ತಿಗೆದಾರರಿಗೆ ಕೊಡ್ತೀರಿ, ಅದರ ಬಗ್ಗೆ ದಾಖಲೆ ಬೇಕಾದರೆ ನಾನು ತರ್ತೇನೆ, ಕಮಿಷನ್ ಕೊಡಲು ಇವರಿಗೆ ಮುಸ್ಲಿಮರು ಬೇಕು. ಭಾಷಣದಲ್ಲಿ ಮುಸ್ಲಿಮರನ್ನು ತೆಗಳುತ್ತಾರೆ, ಪ್ರಚೋದನೆ ಮಾಡಿ ಓಟು ಪಡೆಯುವ ಕೆಲಸ ಮಾಡ್ತೀರಿ. ನಾನು ಯಾರಿಗಾದರೂ ಚೆಕ್ ಕೊಟ್ಟು ವಾಪಸ್ ಬಂದಿದ್ರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದರು ಬಾವ. ಆಜಾನ್ ಕೂಗಿದರೆ ಮಕ್ಕಳಿಗೆ ತೊಂದರೆ ಆಗುತ್ತೆ ಎನ್ನುವ ಈಶ್ವರಪ್ಪ ಮಾತಿಗೆ ತಿರುಗೇಟು ಕೊಟ್ಟ ಬಾವ, ನೀವು ಸಮಾವೇಶ ಮಾಡುವಾಗ ಶಾಲೆ ಮಕ್ಕಳಿಗೆ ತೊಂದರೆ ಆಗುವುದಿಲ್ಲವಾ, ಧ್ವನಿ ವರ್ಧಕ ಯಾರು ಬಳಸಿದರೂ ಅದರಿಂದ ಸಮಸ್ಯೆ ಬರುವುದಿಲ್ಲವೇ ಎಂದು ಪ್ರಶ್ನಿಸಿದರು.
ಕೊರೊನಾ ಸಮಯದಲ್ಲಿ ಹಿಂದುಗಳ ಹೆಣ ಸುಡಲು ಬಿಟ್ಟಿಲ್ಲ ನೀವು
ಶಾಸಕ ಭರತ್ ಶೆಟ್ಟಿ ತಮ್ಮ ಬಾವಲಿ ಹೇಳಿಕೆಯನ್ನು ವಾಪಸ್ ಪಡೆಯಬೇಕು. ಕೊರೋನಾ ಸಮಯದಲ್ಲಿ ಹಿಂದೂಗಳ ಹೆಣ ಸುಡಲು ಬಿಡಲಿಲ್ಲ ನೀವು. ಕಷ್ಟದಲ್ಲಿದ್ದವರಿಗೆ ಸ್ಪಂದನೆ ನೀಡಿಲ್ಲ ನೀವು. ಬಾವಾ ಈ ಕ್ಷೇತ್ರದಲ್ಲಿ ಮೂರೂವರೆ ಕೋಟಿ ಕಿಟ್ ವಿತರಿಸಿದ್ದಾರೆ. ನೀವೇನು ಮಾಡಿದ್ದೀರಿ ಹೇಳಿ. ಚುನಾವಣೆ ಕಾಲದಲ್ಲಾದರೂ ನಿಮ್ಮ ಸಾಧನೆ ಜನರಿಗೆ ತಿಳಿಯಬೇಕು. ಸುರತ್ಕಲ್ ಮಾರುಕಟ್ಟೆ ಆಗಬಾರದು, ರಸ್ತೆ ಆಗಬಾರದು ಅಂತ ಪ್ರತಿಭಟನೆ ನಡೆಸಿದ್ದ ಭರತ್ ಶೆಟ್ಟಯವರೇ, ಯಾಕೆ ನಿಮ್ಮ ಅವಧಿಯಲ್ಲಿ ಕೆಲಸ ಮಾಡೋಕೆ ಆಗಿಲ್ಲ. ರಸ್ತೆ ಹೊಂಡ ಬಿದ್ದು ಜನ ಸಾಯುವ ಸ್ಥಿತಿ ಬಂದಿದೆಯಲ್ಲಾ.. ಯಾಕೆ ನಿಮಗೆ ಕುಳಾಯಿ ಜೆಟ್ಟಿಯನ್ನೂ ಇನ್ನೂ ಮಾಡಲು ಆಗಿಲ್ಲ. ನಲ್ವತ್ತು ಶೇಕಡಾ ಕಮಿಷನ್ ಒತ್ತಡದಿಂದಲೇ ಸುರತ್ಕಲ್ ಮಾರುಕಟ್ಟೆ ಕಾಮಗಾರಿ ನಿಂತದ್ದು ಅಲ್ಲವೇ ಎಂದು ಬಾವ ಪ್ರಶ್ನೆ ಮಾಡಿದರು.
Mangalore Former congrese MLA Maideen Bava Slams MLA Bharath Shetty over controversial statement. Shetty being a doctor has compared human beings to bats he slammed. Bharath Shetty had alleged that Bava is attending Kola to gain hindu votes.
11-01-25 10:53 pm
HK News Desk
ಕೊಪ್ಪದ ಮೇಗೂರು ಅರಣ್ಯದಲ್ಲಿ ಶರಣಾಗಿದ್ದ ನಕ್ಸಲರ ಶಸ...
11-01-25 10:27 pm
BBMP Raid, Lokayukta; ಬಿಬಿಎಂಪಿ 50 ಕಡೆಗಳಲ್ಲಿ ಲ...
11-01-25 09:14 pm
CT Ravi,Threat, Lakshmi Hebbalkar; ಬೆಳಗಾವಿ ಅಭ...
11-01-25 02:11 pm
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
12-01-25 05:07 pm
HK News Desk
Hollywood hills, Los Angeles fires: ಲಾಸ್ ಏಂಜ...
09-01-25 12:11 pm
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
12-01-25 12:33 pm
Mangalore Correspondent
CM Siddaramaiah, Kambala Mangalore, Naringana...
11-01-25 10:34 pm
Mangalore Lit Fest 2025, Hardeep Singh Puri;...
11-01-25 07:19 pm
DYFI, CM Siddaramaiah, IPS Anupam Agrawal; ಪೊ...
11-01-25 04:57 pm
Lava Kusha Jodukare Kambala, Mangalore; ತೃತೀಯ...
11-01-25 02:25 pm
11-01-25 10:21 pm
Mangalore Correspondent
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm