ಆರಗ ಜ್ಞಾನೇಂದ್ರಗೆ ಸೋಲಿನ ಹೆದರಿಕೆ ಹುಟ್ಕೊಂಡಿದೆ, ಗುಳಿಗೆ ಗುಳಿಗೆ ಎಂದು ಏನೇನೋ ಒದರುತ್ತಿದ್ದಾರೆ ; ಕೆಎಸ್ಸಾರ್ಟಿಸಿ ಬಲಿ ಕೊಡ್ತಿದ್ದಾರೆ..!  

17-03-23 11:00 pm       Mangalore Correspondent   ಕರಾವಳಿ

ತುಳು ಭಾಷೆಯಲ್ಲಿ ಮೂಡಿಬಂದ ಶಿವದೂತೆ ಗುಳಿಗೆ ಎಂಬ ಅಮೋಘ ನಾಟಕದ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅಪಮಾನಕಾರಿ ಹೇಳಿಕೆ ನೀಡಿದ್ದಾರೆ. ಗುಳಿಗೆ, ಗುಳಿಗೆ ಎಂದು ಏನೇನೋ ಮಾತಾಡಿದ್ದು ನಾಟಕವನ್ನು ಕಾಂಗ್ರೆಸ್ ಪ್ರಚಾರಕ್ಕೆ ಬಳಸಿಕೊಂಡಿದೆ ಎಂದೆಲ್ಲ ಹೇಳಿದ್ದಾರೆ.

ಮಂಗಳೂರು, ಮಾ.17 : ತುಳು ಭಾಷೆಯಲ್ಲಿ ಮೂಡಿಬಂದ ಶಿವದೂತೆ ಗುಳಿಗೆ ಎಂಬ ಅಮೋಘ ನಾಟಕದ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅಪಮಾನಕಾರಿ ಹೇಳಿಕೆ ನೀಡಿದ್ದಾರೆ. ಗುಳಿಗೆ, ಗುಳಿಗೆ ಎಂದು ಏನೇನೋ ಮಾತಾಡಿದ್ದು ನಾಟಕವನ್ನು ಕಾಂಗ್ರೆಸ್ ಪ್ರಚಾರಕ್ಕೆ ಬಳಸಿಕೊಂಡಿದೆ ಎಂದೆಲ್ಲ ಹೇಳಿದ್ದಾರೆ. ನಾಟಕ ನೋಡಲು ಜನ ಸೇರಿದ್ದಾರೆ ಅಂತ ತುಳುವರು ನಂಬುವ ದೈವದ ಬಗ್ಗೆ ಅವಹೇಳನಕಾರಿ ಮಾತನಾಡೋದಾ.. ಜ್ಞಾನೇಂದ್ರ ಅವರಿಗೆ ಚುನಾವಣೆಯಲ್ಲಿ ಸೋಲುತ್ತೇನೆಂಬ ಹೆದರಿಕೆ ಹುಟ್ಕೊಂಡಿದೆ. ಹಾಗಾಗಿ ಏನೇನೋ ತಡಬಡಾಯಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಟೀಕಿಸಿದ್ದಾರೆ. 

ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಈಗಾಗಲೇ ರೈತರಿಗೆ ಅಡಿಕೆ ಬೆಳೀಬೇಡಿ ಅಂತ ಹೇಳಿ ಸಿಕ್ಕಿಬಿದ್ದಿದ್ದಾರೆ. ಇದರಿಂದ ರೈತರು ತಿರುಗಿ ಬಿದ್ದಿದ್ದು ಇವರು ಮಾತ್ರ ಅಡಿಕೆ ಬೆಳೆಯೋದಾ ಎಂದು ಸಿಟ್ಟಾಗಿದ್ದಾರೆ. ಇವರು ಪಿಎಸ್ಐ ಭ್ರಷ್ಟಾಚಾರದ ಬಗ್ಗೆ ಸದನದಲ್ಲಿ ನಿಂತು ಏನೂ ಆಗಿಯೇ ಇಲ್ಲ ಎಂದಿದ್ದರು. ಆದರೆ 15 ದಿನದಲ್ಲಿ ಪೊಲೀಸ್ ಅಧಿಕಾರಿಯೇ ಅರೆಸ್ಟ್ ಆಗಿದ್ದರು. ಹಿಂದೊಮ್ಮೆ ಅಧಿಕಾರಿಗಳಿಗೆ ಲಂಚ ಕೊಟ್ಟು ಆರೋಪಿಯನ್ನು ಜೈಲಿನಿಂದ  ಬಿಡಿಸಿಕೊಂಡು ಬಂದಿದ್ದೆ ಎಂದು ಹೇಳಿದ್ದರು. ಗುಳಿಗನ ಬಗ್ಗೆ ಅವಹೇಳನ ನುಡಿದ ಆರಗ ಜ್ಞಾನೇಂದ್ರ ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. 

Coward home minister': Karnataka home minister Araga Jnanendra faces heat  from ABVP members | Deccan Herald

KPCC says BJP leader CT Ravi's wealth rose many fold

ಮೊನ್ನೆ ಸಿಟಿ ರವಿಯವರು ಶಿವ, ರಾಮ, ಕೃಷ್ಣ ಎಲ್ಲ ದೇವರುಗಳೂ ಬಿಜೆಪಿಯವರೇ ಎಂದು ಹೇಳಿದ್ದರು. ದೇವರನ್ನೂ ಇವರ ರಾಜಕೀಯ ಲಾಭಕ್ಕೆ ಬಳಸಿಕೊಳ್ತಿದಾರೆ. ಹಿಂದೊಮ್ಮೆ ಹೆಬ್ರಿಯಲ್ಲಿ ಡಿಕೆಶಿಗೆ ಅಭಿಮಾನಿಗಳು ಖಡ್ಸಲೆ ಕೊಟ್ಟಾಗ, ಇದು ದೈವಕ್ಕೆ ಅವಮಾನ ಎಂದು ಬಿಜೆಪಿಯ ದಯಾನಂದ ಕತ್ತಲ್ಸಾರ್ ಹೇಳಿದ್ದರು. ಆಮೇಲೆ ಇವರೇ ದೈವದ ಮುಖವಾಡವನ್ನು ಪಡೆದಿದ್ದರು. ಇದು ದೈವಕ್ಕೆ ಅಪಚಾರ ಆಗೋದಿಲ್ಲವೇ.. ಇವರು ಮಾಂಸ ತಿಂದು ದೇವಸ್ಥಾನ ಹೋಗಬಹುದು, ಪೂಜೆ ಮಾಡಬಹುದು. ಮೊನ್ನೆ ಸಿಟಿ ರವಿ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದರ ವಿಡಿಯೋ ಬಂದಿತ್ತು. ಸಿದ್ದರಾಮಯ್ಯ ಹೋಗಬಾರದು ಎಂದು ವಿವಾದ ಮಾಡುತ್ತಾರೆ. ಇವರೆಲ್ಲ ಹೇಳುವುದು ಒಂದು, ಮಾಡೋದು ಇನ್ನೊಂದು ಎಂಬಂತಾಗಿದೆ. 

Bengaluru court stays release of book about Congress leader and former CM  Siddaramaiah

ನಾವು ಅಕ್ಕಿ ಐದು ಕೇಜಿ ಇದ್ದುದನ್ನು ಏಳು ಕೇಜಿ ಮಾಡಿದ್ದೆವು, ಆದರೆ ಬಿಜೆಪಿಯವರು ಅಕ್ಕಿ ಜೊತೆಗೆ ಇಂದಿರಾ ಕ್ಯಾಂಟೀನ್ ಕೂಡ ಬಂದ್ ಮಾಡಿದ್ದಾರೆ, ಬೆಂಗಳೂರಿನಲ್ಲಿ 198 ಕ್ಯಾಂಟೀನ್ ಬಂದ್ ಮಾಡುತ್ತಿದ್ದಾರೆ, ಹೊಟೇಲ್ ನಲ್ಲಿ ಬೆಲೆಯೇರಿಕೆ ಆಗಿರುವಾಗ ಜನಸಾಮಾನ್ಯರಿಗೆ, ಕಾರ್ಮಿಕರಿಗೆ ಕಡಿಮೆ ಬೆಲೆಯಲ್ಲಿ ಊಟ, ತಿಂಡಿ ಸಿಗ್ತಾ ಇತ್ತು. ಇವರು ಅದಕ್ಕೂ ಕಲ್ಲು ಹಾಕಿದ್ದಾರೆ. ಇವರ ಸರ್ಕಾರಕ್ಕೆ ಹೆಚ್ಚು ಸಮಯ ಬಾಳಿಕೆ ಇಲ್ಲ. ಕೆಲವೇ ದಿನಗಳಷ್ಟೇ ಇರಲಿದೆ. 

Rahul Gandhi in cross hairs: Rule using which he can face Lok Sabha  suspension | Latest News India - Hindustan Times

ಕಾಂಗ್ರೆಸ್ ಗ್ಯಾರಂಟಿ ಕೊಡುಗೆ ಎಲ್ಲರಿಗೂ ಗೊತ್ತಿದೆ. ನಾಡಿದ್ದು ಬೆಳಗಾವಿಯಲ್ಲಿ ಯುವ ಸಂಗಮ ಸಮಾವೇಶ ಮಾಡುತ್ತಿದ್ದೇವೆ. ಅದರಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಯುವಕರಿಗೆ ಗ್ಯಾರಂಟಿ ಕೊಡಲಿದ್ದಾರೆ. ಕಾಂಗ್ರೆಸ್ ಭರವಸೆಯನ್ನು ಜನ ನಂಬುತ್ತಾರೆ, ಯಾಕಂದ್ರೆ, ಕಳೆದ ಬಾರಿ ಸಿದ್ದರಾಮಯ್ಯ ಸರ್ಕಾರ ತಾವು ಕೊಟ್ಟ ಭರವಸೆಗಳನ್ನು ಈಡೇರಿಸಿತ್ತು. ಇವತ್ತು ಹಿಂದಿನ ಸರ್ಕಾರಗಳ ಆಡಳಿತದ ತುಲನೆಯಾಗುತ್ತಿದೆ, ಯಾವುದು ಒಳ್ಳೆದು ಅಂತ ಹೇಳಿ ಬಿಜೆಪಿ ಸರ್ಕಾರಕ್ಕೆ ಪಾಠ ಕಲಿಸಲು ಮುಂದಾಗಿದ್ದಾರೆ. 

ಮಸೀದಿಯಲ್ಲಿ ದೇವಸ್ಥಾನದ ಕುರುಹು ಹುಡುಕುತ್ತಿದ್ದಾರೆ, ಅದನ್ನು ಮುಂದಿಟ್ಟು ಜಾತಿ ಧರ್ಮದ ಭೇದ ಮಾಡುತ್ತಾರೆ, ನಂಜನಗೂಡಿನಲ್ಲಿ ರಾತ್ರೋರಾತ್ರಿ ದೇವಸ್ಥಾನ ಒಡೆದು ಹಾಕಿದ್ದರು, ಪುತ್ತೂರಿನಲ್ಲಿ ಹತ್ತು ವರ್ಷಗಳ ಹಿಂದೆ ದೇವಸ್ಥಾನದ ವಿಗ್ರಹ ಕಳವಾಗಿತ್ತು, ವಿಹಿಂಪದ ಐದು ಜನ ಕಾರ್ಯಕರ್ತರು ಬಂಧನ ಆಗಿದ್ದನ್ನು ಪತ್ರಿಕೆಯಲ್ಲಿ ನೋಡಿದ್ದೇವೆ. ಇವರ ಸಂಸ್ಕಾರ, ದೈವಭಕ್ತಿ ನಿರ್ದಿಷ್ಟ ಕೆಲಸಕ್ಕೆ ಮಾತ್ರ. ಮನಸ್ಸಿನಲ್ಲಿ ಭಕ್ತಿ ಇಲ್ಲ. ಮೊನ್ನೆ ಖಾದರ್ ಅಧಿವೇಶನದಲ್ಲಿ ತುಳು ಬಗ್ಗೆ ಮಾತು ಎತ್ತಿದಾಗ ಕಾನೂನು ಸಚಿವ ಮಾಧುಸ್ವಾಮಿ ಗೇಲಿ ಮಾಡಿದ್ದರು. ಇಲ್ಲಿನ ಶಾಸಕರು ಯಾರಾದ್ರೂ ತುಳು ಪರವಾಗಿ ಮಾತನಾಡಿದ್ದರೇ ಎಂದು ಹರೀಶ್ ಕುಮಾರ್ ಪ್ರಶ್ನಿಸಿದರು. 

ಕೆಎಸ್ಸಾರ್ಟಿಸಿ ರೂಟನ್ನು ಖಾಸಗಿಯವರಿಗೆ ಮಾಡಿಕೊಡಲು 50 ಕೋಟಿ ಡೀಲ್ ಮಾಡ್ತಿದ್ದಾರೆಂದು ವದಂತಿ ಇದೆ. ಇದೇ ಮಾ.24 ರ ಒಳಗೆ ಮಾಡಬೇಕು ಮಸೂದೆ ತರಬೇಕು ಎಂದಿದ್ದಾರೆ. ಕೆಎಸ್ಸಾರ್ಟಿಸಿ ನಷ್ಟದಿಂದ ಮುಚ್ಚುವ ಹಂತಕ್ಕೆ ತಂದಿಟ್ಟಿದ್ದಾರೆ. ಇದೊಂದು ಕರಾಳ ಮಸೂದೆಯಾಗಿದ್ದು ಯಾರದ್ದೋ ಲಾಭಕ್ಕಾಗಿ ರಾಮುಲು ಕೆಎಸ್ಸಾರ್ಟಿಸಿ ಬಲಿ ಕೊಡಬಾರದು ಎಂದು ಹೇಳಿದರು. 

ಬಿಜೆಪಿ- ಎಸ್ಡಿಪಿಐ ಮೈತ್ರಿ ಮಾಡ್ತಿದೆಯಷ್ಟೇ.. 

ಬಿಜೆಪಿ- ಎಸ್ಡಿಪಿಐ ಜೊತೆ ಒಪ್ಪಂದ ಮಾಡಿದೆಯೇ ಹೊರತು ನಾವು ಯಾವುದೇ ಒಳ ಮೈತ್ರಿ ಮಾಡಿಲ್ಲ. ಎಸ್ಡಿಪಿಐ ಮತ್ತು ಬಿಜೆಪಿ ಕೋಮುವಾದಿ ಪಕ್ಷಗಳು. ಎರಡೂ ಸಮಾನ ಮನಸ್ಕರು. ಯಾರು ಯಾರನ್ನು ದುಡ್ಡು ಕೊಟ್ಟು ಓಟಿಗೆ ನಿಲ್ಲಿಸುತ್ತಾರೆ ಎಂಬುದು ಗೊತ್ತಿದೆ. ಎಸ್ಡಿಪಿಐ ಬೇಕಾದರೆ 224 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಲಿ. ನಾವೇನು ಬೇಡ ಎನ್ನುವುದಿಲ್ಲ ಎಂದು ಎಸ್ಡಿಪಿಐ ಮುಖಂಡರು ಕಳೆದ ಬಾರಿ ಕಾಂಗ್ರೆಸ್ ನಾಯಕರೇ ತಮ್ಮ ಬೆಂಬಲ ಕೇಳಿದ್ದರು ಎಂಬ ಹೇಳಿಕೆಗೆ ಹರೀಶ್ ಕುಮಾರ್ ತಿರುಗೇಟು ನೀಡಿದರು. ಸುದ್ದಿಗೋಷ್ಟಿಯಲ್ಲಿ ಸಂತೋಷ್ ಕುಮಾರ್ ಶೆಟ್ಟಿ, ಮಹಾಬಲ ಮಾರ್ಲ, ಪ್ರಕಾಶ್ ಸಾಲ್ಯಾನ್ ಮತ್ತಿತರರಿದ್ದರು.

District Congress Committee President Harish Kumar criticized the ruling BJP government in the state and stated that people will reject the present government after the assembly polls and send them on a pilgrimage. Addressing the media here on Friday, March 17,Kumar claimed that the BJP's development policies are only to obtain political mileage, unlike the Congress government, which fulfilled all promises made to the people when in power. He accused the BJP of failing to fulfill the 40% assurance promise to the people.