ಪಂಪ್ವೆಲ್ ಬಳಿಯ ಪೊದೆಯಲ್ಲಿ ದೇವರ ಕಂಚಿನ ವಿಗ್ರಹಗಳು ಪತ್ತೆ ಎಸೆದು ಹೋಗಿರುವ ಶಂಕೆ

19-03-23 12:41 pm       HK News Desk   ಕರಾವಳಿ

ನಗರದ ಪಂಪ್‌ವೆಲ್‌ ಬಳಿಯ ಕುದ್ಕೋರಿ ಗುಡ್ಡೆ ರಸ್ತೆ ಬದಿ ಕುರುಚಲು ಗಿಡಗಳ ಪೊದೆಯ ಮಧ್ಯೆ ಪ್ಲಾಸ್ಟಿಕ್‌ ಚೀಲದಲ್ಲಿ ದೇವರ ವಿಗ್ರಹಗಳನ್ನು ಅಡಗಿಸಿಟ್ಟಿರುವುದು ಪತ್ತೆಯಾಗಿದೆ.

ಮಂಗಳೂರು, ಮಾ.19: ನಗರದ ಪಂಪ್‌ವೆಲ್‌ ಬಳಿಯ ಕುದ್ಕೋರಿ ಗುಡ್ಡೆ ರಸ್ತೆ ಬದಿ ಕುರುಚಲು ಗಿಡಗಳ ಪೊದೆಯ ಮಧ್ಯೆ ಪ್ಲಾಸ್ಟಿಕ್‌ ಚೀಲದಲ್ಲಿ ದೇವರ ವಿಗ್ರಹಗಳನ್ನು ಅಡಗಿಸಿಟ್ಟಿರುವುದು ಪತ್ತೆಯಾಗಿದೆ.

ಪೀಠ ಸಹಿತ ಶಾರದಾ ದೇವಿಯ 2.5 ಇಂಚು ಎತ್ತರದ ಮತ್ತು ಗಣಪತಿಯ ಸುಮಾರು 1 ಇಂಚು ಎತ್ತರದ, ಲಕ್ಷ್ಮೀ ದೇವಿಯ ಸುಮಾರು 2 ಇಂಚು ಎತ್ತರದ, ಇನ್ನೊಂದು ಶಾರದಾ ದೇವಿಯ ಸುಮಾರು 1 ಇಂಚು ಎತ್ತರದ ಕಂಚಿನ ವಿಗ್ರಹ ಪತ್ತೆಯಾಗಿದೆ.

ಹಿತ್ತಾಳೆಯ ನಂದಿಯ ವಿಗ್ರಹ 1 ಇಂಚು ಎತ್ತರದ್ದು, ಕಂಚಿನ ದತ್ತಾತ್ರೇಯ ದೇವರ 6 ಇಂಚು ಎತ್ತರ ಹಾಗೂ ಹಿತ್ತಾಳೆಯ ನಾಗದೇವರ 2 ಇಂಚು ಉದ್ದದ ವಿಗ್ರಹಗಳು ಪತ್ತೆಯಾಗಿವೆ. ಯಾರೋ ಮನೆಯಲ್ಲಿಟ್ಟು ಪೂಜಿಸುತ್ತಿದ್ದ ವಿಗ್ರಹಗಳ ರೀತಿ ಕಂಡುಬಂದಿವೆ.‌ ಯಾಕಾಗಿ ಪೊದೆಯಲ್ಲಿ ವಿಗ್ರಹಗಳನ್ನು ಎಸೆದು ಹೋಗಿದ್ದಾರೆ, ಯಾರು ಎಸೆದಿದ್ದಾರೆ ಎಂದು ತಿಳಿದುಬಂದಿಲ್ಲ. ಆಸುಪಾಸಿನಲ್ಲಿ ದೇವಸ್ಥಾನದ ವಿಗ್ರಹ ಕಳವಾಗಿರುವ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವಾರಸುದಾರರು ಇದ್ದಲ್ಲಿ ಮಂಗಳೂರು ಪೂರ್ವ ಪೊಲೀಸ್‌ ಠಾಣೆ ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

Mangalore Hindu cooper idols found at Pumpwell. Urwa police have asked Public to contact if it belongs to someone.