ಕೋರ್ಟ್ ಮುಂಭಾಗದಲ್ಲಿ ಪಲ್ಟಿ ಹೊಡೆದ ಕಾರು ; ರಿವರ್ಸ್ ತೆಗೆಯುವ ಯತ್ನದಲ್ಲಿ ಅವಾಂತರ 

21-03-23 03:52 pm       Mangalore Correspondent   ಕರಾವಳಿ

ಕಾರನ್ನು ರಿವರ್ಸ್ ತೆಗೆಯುವ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ಕಾರು ಹಿಂದಕ್ಕೆ ಚಲಿಸಿ ಪಲ್ಟಿಯಾಗಿ ಬಿದ್ದ ಘಟನೆ ನಗರದ ಕೊಡಿಯಾಲಬೈಲಿನ ಜಿಲ್ಲಾ ನ್ಯಾಯಾಲಯದ ಮುಂಭಾಗದ ರಸ್ತೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. 

ಮಂಗಳೂರು, ಮಾ.21: ಕಾರನ್ನು ರಿವರ್ಸ್ ತೆಗೆಯುವ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ಕಾರು ಹಿಂದಕ್ಕೆ ಚಲಿಸಿ ಪಲ್ಟಿಯಾಗಿ ಬಿದ್ದ ಘಟನೆ ನಗರದ ಕೊಡಿಯಾಲಬೈಲಿನ ಜಿಲ್ಲಾ ನ್ಯಾಯಾಲಯದ ಮುಂಭಾಗದ ರಸ್ತೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. 

ಕೋರ್ಟ್ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರನ್ನು ರಿವರ್ಸ್ ತೆಗೆಯಲು ಚಾಲಕ ಮುಂದಾಗಿದ್ದರು. ಈ ವೇಳೆ, ಚಪ್ಪಲ್ ಎಕ್ಸಿಲೇಟರ್ ಪೆಡಲ್ ಮಧ್ಯೆ ಸಿಕ್ಕಿಕೊಂಡು ಕಾರಿನ ವೇಗ ಹೆಚ್ಚಾಗಿದ್ದರಿಂದ ಹಿಂದಕ್ಕೆ ಚಲಿಸಿ, ನಿಯಂತ್ರಣ ತಪ್ಪಿ ಹಿಂಭಾಗದ ಗುಂಡಿಗೆ ಪಲ್ಟಿಯಾಗಿ ಬಿದ್ದಿದೆ. ಹಿಂಭಾಗದಲ್ಲಿ ಇಳಿಜಾರಿನಂತೆ ಗುಂಡಿ ಇದ್ದು ಕೋರ್ಟ್ ಕಡೆಯಿಂದ ಬಂಟ್ಸ್ ಹಾಸ್ಟೆಲ್ ನತ್ತ ಬರುವ ರಸ್ತೆಯಿದೆ. ಕಾರು ಹಿಂದಕ್ಕೆ ಪಲ್ಟಿಯಾಗಿದ್ದರಿಂದ ಕೆಳಗಿನ ರಸ್ತೆ ಬದಿಗೆ ಬಿದ್ದಿದೆ. 

ಅಲ್ಲಿ ನಿಂತಿದ್ದ ಆಟೋ ಹಾಗೂ ಮತ್ತೊಂದು ಕಾರಿಗೆ ಬಡಿದು ಹಾನಿಯಾಗಿದೆ. ಕಾರಿನಲ್ಲಿದ್ದ ಚಾಲಕನಿಗೆ ಅಲ್ಪ ಸ್ವಲ್ಪ ಗಾಯಗಳಾಗಿದ್ದರೆ, ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರು ಆಗಮಿಸಿ ಕಾರು ತೆರವು ಮಾಡಲು ಕ್ರೇನ್ ತರಿಸಿದ್ದಾರೆ. ಪಲ್ಟಿಯಾಗಿ ಬಿದ್ದ ಕಾರನ್ನು ಕ್ರೇನ್ ಯಂತ್ರದಲ್ಲಿ ಮೇಲಕ್ಕೆತ್ತಲಾಗಿದೆ.

Mangalore Court road accident, car falls off ledge while reverse, driver injured. Auto and Swift car damaged. With the help of the crane the car was later lifted. Traffic was jammed for a while.