ಕರಾವಳಿ, ಚಿಕ್ಕಮಗಳೂರು, ಹಾಸನದಲ್ಲಿ ಮಾ.23ರಿಂದಲೇ ರಂಜಾನ್ ; ಕೇರಳ ಸಂಪ್ರದಾಯ ಆಚರಣೆ 

22-03-23 10:31 pm       Mangalore Correspondent   ಕರಾವಳಿ

ಕರಾವಳಿಯಲ್ಲಿ ಮಾ.23ರ ಗುರುವಾರದಿಂದಲೇ ಮುಸ್ಲಿಮರ ರಂಜಾನ್ ಮಾಸ ಆರಂಭಗೊಳ್ಳಲಿದೆ. ಕೇರಳದ ಕಲ್ಲಿಕೋಟೆಯ ಕಾಪಾಡಿ ಎಂಬಲ್ಲಿ ಚಂದ್ರದರ್ಶನ ಆಗಿರುವ ಹಿನ್ನೆಲೆ ಮುಸ್ಲಿಂ ಧರ್ಮಗುರುಗಳು ರಂಜಾನ್ ಆಚರಣೆಗೆ ಕರೆ ನೀಡಿದ್ದಾರೆ. ‌

ಮಂಗಳೂರು, ಮಾ.22 : ಕರಾವಳಿಯಲ್ಲಿ ಮಾ.23ರ ಗುರುವಾರದಿಂದಲೇ ಮುಸ್ಲಿಮರ ರಂಜಾನ್ ಮಾಸ ಆರಂಭಗೊಳ್ಳಲಿದೆ. ಕೇರಳದ ಕಲ್ಲಿಕೋಟೆಯ ಕಾಪಾಡಿ ಎಂಬಲ್ಲಿ ಚಂದ್ರದರ್ಶನ ಆಗಿರುವ ಹಿನ್ನೆಲೆ ಮುಸ್ಲಿಂ ಧರ್ಮಗುರುಗಳು ರಂಜಾನ್ ಆಚರಣೆಗೆ ಕರೆ ನೀಡಿದ್ದಾರೆ. ‌

ಉಡುಪಿ, ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳ ಮುಸ್ಲಿಂ ಧರ್ಮಗುರುಗಳು ಈ ಬಗ್ಗೆ ಜಂಟಿ ಹೇಳಿಕೆ ನೀಡಿದ್ದು ಮಾ.23ರಿಂದಲೇ ರಂಜಾನ್ ಮಾಸಾಚರಣೆ ಕೈಗೊಳ್ಳಲು ಸೂಚನೆ ನೀಡಿದ್ದಾರೆ. 

ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ ಹಾಜ್ ತ್ವಾಕಾ ಮುಸ್ಲಿಯಾರ್ ಅಹ್ಮದ್, ಉಡುಪಿ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಉಳ್ಳಾಲ ಖಾಝಿ ಸೈಯದ್ ಫಝಳ್ ಕೋಯಮ್ಮ ತಂಙಳ್, ಭಟ್ಕಳ ಚಂದ್ರದರ್ಶನ ಸಮಿತಿಯ ಪ್ರಮುಖರು ಜಂಟಿ ಹೇಳಿಕೆಯಲ್ಲಿ ಈ ಮಾಹಿತಿ ನೀಡಿದ್ದಾರೆ. 

ಪ್ರತಿ ವರ್ಷ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಖಾಝಿಗಳು ಕೇರಳದ ಸಂಪ್ರದಾಯ ಪ್ರಕಾರ ಒಂದು ದಿನ ಮೊದಲೇ ರಂಜಾನ್ ಆಚರಣೆ ಆರಂಭಿಸಿ, ಒಂದು ದಿನ ಮೊದಲೇ ಕೊನೆಗೊಳಿಸುತ್ತಾರೆ. ಕರ್ನಾಟಕ ಇತರ ಕಡೆಗಳಿಗೆ ಹೋಲಿಸಿದರೆ ಕರಾವಳಿಯಲ್ಲಿ ಮಾತ್ರ ಕೇರಳ ಮಾದರಿ ಅನುಸರಿಸಲಾಗುತ್ತದೆ. ಈ ಬಾರಿ ಇದಕ್ಕೆ ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡ ಜಿಲ್ಲೆಗಳೂ ಸೇರ್ಪಡೆಯಾಗಿವೆ.

March 23rd Ramadan to began in Mangalore.