ರಾಹುಲ್ ಗಾಂಧಿ ಅನರ್ಹ ; ಭಾರತದ ಆತ್ಮಕ್ಕೆ ಕೊಡಲಿಯೇಟು, ದೇಶದ ಬಗ್ಗೆ ಸತ್ಯ ಹೇಳಿದ್ದಕ್ಕೆ ಕೊಟ್ಟ ಶಿಕ್ಷೆ - ಯುಟಿ ಖಾದರ್ ಟೀಕೆ

24-03-23 08:19 pm       Mangalore Correspondent   ಕರಾವಳಿ

ರಾಹುಲ್ ಗಾಂಧಿ ಸತ್ಯ ಹೇಳುತ್ತಿರುವುದನ್ನು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ. ಬಿಜೆಪಿಗೆ ಚುನಾವಣೆ ಹೊತ್ತಲ್ಲಿ ನಡುಕ ಶುರುವಾಗಿದೆ. ರಾಹುಲ್ ಗಾಂಧಿಯನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ್ದು ಪ್ರಜಾಪ್ರಭುತ್ವದ ಮೇಲಿನ ದಾಳಿ, ಭಾರತ ದೇಶದ ಆತ್ಮಕ್ಕೆ ಕೊಟ್ಟ ಕೊಡಲಿಯೇಟು ಎಂದು ವಿಧಾನಸಭೆ ಉಪ ನಾಯಕ, ಮಾಜಿ ಸಚಿವ ಯುಟಿ ಖಾದರ್ ಹೇಳಿದ್ದಾರೆ.

ಮಂಗಳೂರು, ಮಾ.24: ರಾಹುಲ್ ಗಾಂಧಿ ಸತ್ಯ ಹೇಳುತ್ತಿರುವುದನ್ನು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ. ಬಿಜೆಪಿಗೆ ಚುನಾವಣೆ ಹೊತ್ತಲ್ಲಿ ನಡುಕ ಶುರುವಾಗಿದೆ. ರಾಹುಲ್ ಗಾಂಧಿಯನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ್ದು ಪ್ರಜಾಪ್ರಭುತ್ವದ ಮೇಲಿನ ದಾಳಿ, ಭಾರತ ದೇಶದ ಆತ್ಮಕ್ಕೆ ಕೊಟ್ಟ ಕೊಡಲಿಯೇಟು ಎಂದು ವಿಧಾನಸಭೆ ಉಪ ನಾಯಕ, ಮಾಜಿ ಸಚಿವ ಯುಟಿ ಖಾದರ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ರಾಹುಲ್ ಗಾಂಧಿಯನ್ನು ಸತ್ಯ ಮಾತಾಡಲು ಬಿಡದವರು ಜನಸಾಮಾನ್ಯರು ಸತ್ಯ ಹೇಳಿದರೆ ಬಿಟ್ಟಾರೆಯೇ.. ಬಿಜೆಪಿ ನಾಯಕರು ಏನೇ ಟಾರ್ಗೆಟ್ ಮಾಡಿದರೂ, ರಾಹುಲ್ ಸತ್ಯ ಹೇಳಲು ಹಿಂಜರಿಯಲಿಲ್ಲ. ರಾಹುಲ್ ಕೋಲಾರದಲ್ಲಿ ಮಾತನಾಡಿದ್ದಕ್ಕೆ ಗುಜರಾತಿನ ಶಾಸಕ ಸೂರತ್ ಕೋರ್ಟಿನಲ್ಲಿ ದೂರು ನೀಡಿದ್ದರು. ಕೋರ್ಟ್ ತೀರ್ಪು ಕೊಟ್ಟು ಅದನ್ನು ಎರಡು ತಿಂಗಳ ಕಾಲ ಅಮಾನತಿನಲ್ಲಿರಿಸಿದೆ. ಹಾಗಿದ್ದರೂ, ರಾಹುಲ್ ಗಾಂಧಿ ಅವರನ್ನು ಸಂಸತ್ ಸ್ಥಾನದಿಂದ ಅನರ್ಹ ಮಾಡಲಾಗಿದೆ. ನ್ಯಾಯಾಧೀಶರೇ ತಮ್ಮ ತೀರ್ಪನ್ನು ಅಮಾನತಿನಲ್ಲಿಟ್ಟು ಆದೇಶ ಮಾಡಿದ್ದರೂ, ಇವರು ಅನರ್ಹ ಹೇಗೆ ಮಾಡುತ್ತಾರೆ.

ರಾಹುಲ್ ಸಂಸತ್ತಿನಲ್ಲಿ ಸತ್ಯ ಮಾತನಾಡಬಾರದು ಎಂದು ಹೀಗೆ ಮಾಡಿದ್ದಾರೆ. ಸಂಸತ್ತಿನಲ್ಲಿ ಮೊನ್ನೆ ರಾಹುಲ್ ಮಾತನಾಡಿದ ವೇಳೆ 20 ನಿಮಿಷ ಮೈಕ್ ಆಫ್ ಮಾಡಿದ್ದರು. ಇದರರ್ಥ ಬಿಜೆಪಿಗೆ ರಾಹುಲ್ ಬಗ್ಗೆ ಭಯವಿದೆಯೆಂದು. ಇವರಾಡುತ್ತಿದ್ದ ಸತ್ಯ ಮಾತು ಬಿಜೆಪಿಗೆ ಎದೆಗುಂದುವಂತೆ ಮಾಡಿತ್ತು. ಕೆಲವೇ ವ್ಯಕ್ತಿಗಳಿಗೆ ಈ ದೇಶವನ್ನು ಮಾರುವ ಹುನ್ನಾರ ಹೊರಬರುತ್ತದೆ ಎಂದು ಈ ರೀತಿ ಮಾಡಿದ್ದಾರೆ. ಹಿಂದೆ 1975ರಲ್ಲಿ ಇಂದಿರಾ ಗಾಂಧಿ ಅವರನ್ನು ಇದೇ ರೀತಿ ಸಂಸತ್ ಸ್ಥಾನದಿಂದ ಅನರ್ಹ ಮಾಡಿದ್ದರು. ಆನಂತರ 1980ರಲ್ಲಿ ಇಂದಿರಾ ಗಾಂಧಿಗೆ ಸ್ಪಷ್ಟ ಜನಾದೇಶ ಬಂದಿತ್ತು ಎನ್ನುವುದನ್ನು ಮರೆಯಬಾರದು.

ನೀರವ್ ಮೋದಿ, ಲಲಿತ್ ಮೋದಿ ದೇಶ ಬಿಟ್ಟು ಹೋಗಿದ್ದಾರೆಂದು ದೇಶದ ಹಿತಾಸಕ್ತಿ ಮುಂದಿಟ್ಟು ಮಾತನಾಡುವುದು ಯಾರಿಗೂ ಮಾನನಷ್ಟ ಆಗುವುದಿಲ್ಲ. ಇದು ದೇಶದ ಮೇಲಾದ ದಬ್ಬಾಳಿಕೆ. ಡೆಮಾಕ್ರಸಿ ಈಸ್ ಇನ್ ಥ್ರೆಟ್ ಎಂದು ರಾಹುಲ್ ಹೇಳುತ್ತಿದ್ದರು. ಅದೀಗ ನಿಜವಾಗಿದೆ. ಭಾರತ ದೇಶದಲ್ಲಿ ಯಾರು ಕೂಡ ಇವರ ವಿರುದ್ಧ ಮಾತನಾಡುವ ಸ್ಥಿತಿಯಿಲ್ಲ. ಇದನ್ನು ನಾವು ಖಂಡಿಸುತ್ತೇವೆ. ರಾಹುಲ್ ಗಾಂಧಿಗೆ ಹೀಗಾಯ್ತು ಎಂದು ನಾವೇನು ಧೃತಿಗೆಡುವುದಿಲ್ಲ. ಈ ರೀತಿಯ ನಡೆಯನ್ನು ಜನರು ಗಮನಿಸುತ್ತಾರೆ ಎಂದು ಖಾದರ್ ಹೇಳಿದರು.

ಇದು ಕರ್ನಾಟಕದ ಚುನಾವಣೆ ಮೇಲೆ ಎಫೆಕ್ಟ್ ಆಗುತ್ತಾ ಎಂದು ಕೇಳಿದ್ದಕ್ಕೆ, ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಜನ ಮತ ಚಲಾಯಿಸಲಿದ್ದಾರೆ ಎಂದು ಹೇಳಿದರು.

Rahul Gandhi disqualified as Lok Sabha MP after conviction, MLA UT Khader in Mangalore says this is the gift for talking truth. Top Congress leader Rahul Gandhi on Friday stood disqualified as an MP with the Lok Sabha Secretariat issuing a notification following his conviction by a Surat court in a defamation case with the party making it clear that this will neither stop their fight nor silence them.