'ರಂಗ್ ದೇ ಬರ್ಸಾ' ಹೋಲಿ ಸಂಭ್ರಮ ; ಡಿಜೆ ಪಾರ್ಟಿಗೆ ಬಜರಂಗದಳ ಕಾರ್ಯಕರ್ತರ ದಾಂಧಲೆ, ಪೊಲೀಸ್ ವಶಕ್ಕೆ 

26-03-23 03:29 pm       Mangalore Correspondent   ಕರಾವಳಿ

ಹೋಲಿ ಸಂಭ್ರಮದ ಹೆಸರಲ್ಲಿ ಡಿಜೆ ಪಾರ್ಟಿ ನಡೆಸುತ್ತಿದ್ದ ಜಾಗಕ್ಕೆ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ್ದು ದಾಂಧಲೆ ನಡೆಸಿದ್ದಾರೆ. ನಗರದ ಮರೋಳಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ದಾಂಧಲೆ ನಡೆಸಿದ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.  

ಮಂಗಳೂರು, ಮಾ.26 : ಹೋಲಿ ಸಂಭ್ರಮದ ಹೆಸರಲ್ಲಿ ಡಿಜೆ ಪಾರ್ಟಿ ನಡೆಸುತ್ತಿದ್ದ ಜಾಗಕ್ಕೆ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ್ದು ದಾಂಧಲೆ ನಡೆಸಿದ್ದಾರೆ. ನಗರದ ಮರೋಳಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ದಾಂಧಲೆ ನಡೆಸಿದ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.  

ರಂಗ್ ದೇ ಬರ್ಸಾ ಹೆಸರಿನಲ್ಲಿ ಯುವಕ - ಯುವತಿಯರು ಸೇರಿ ಮರೋಳಿಯಲ್ಲಿ ಡಿಜೆ ಪಾರ್ಟಿ ಜೊತೆಗೆ ಬಣ್ಣ ಎರಚಿ ಸಂಭ್ರಮಿಸುತ್ತಿದ್ದರು. ಯುವಕರ ಅಶ್ಲೀಲ ವರ್ತನೆ ಮತ್ತು ಪಾರ್ಟಿಯಲ್ಲಿ ಅನ್ಯಧರ್ಮೀಯರು ಇದ್ದಾರೆಂದು ಆರೋಪಿಸಿ ಬಜರಂಗದಳ ಯುವಕರು ಅಡ್ಡ ಹಾಕಿದ್ದಾರೆ. ಹೋಲಿ ಸಂಭ್ರಮಕ್ಕೆ ಹಾಕಿದ್ದ ಬ್ಯಾನರ್ ಗಳನ್ನು ಹರಿದು ಅಲ್ಲಿದ್ದ ವಸ್ತುಗಳನ್ನ ಪುಡಿಗೈದು ದಾಂಧಲೆ ಮಾಡಿದ್ದಾರೆ. 

ಈ ವೇಳೆ ಬಜರಂಗದಳ ಕಾರ್ಯಕರ್ತರು ಮತ್ತು ಪಾರ್ಟಿ ಆಯೋಜಕರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಆಯೋಜಕರ ಮೇಲೆ ಹಲ್ಲೆಗೂ ಯತ್ನಿಸಿದ್ದಾರೆ. ಕೂಡಲೇ ಜಾಗ ಖಾಲಿ ಮಾಡಬೇಕು, ಇಲ್ಲಾಂದ್ರೆ ಎಲ್ಲ ತೆಗೆದು ಬಿಸಾಕುತ್ತೇವೆ. ನಿಮಗೆ ಮೊದಲೇ ವಾರ್ನಿಂಗ್ ಕೊಟ್ಟಿದ್ದೆವು. ನೀವು ಕೇಳಲಿಲ್ಲ. ಪಾರ್ಟಿ ಮಾಡೋಕೆ ಅವಕಾಶ ಕೊಡಲ್ಲ ಅಂತ ಬಜರಂಗದಳ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬಳಿಕ ಕಂಕನಾಡಿ ಪೊಲೀಸರು ಸ್ಥಳಕ್ಕೆ ತೆರಳಿದ್ದು ಬಜರಂಗದಳ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಕಾರ್ಯಕ್ರಮ ನಡೆಸುತ್ತಿದ್ದವರನ್ನು ನಿಲ್ಲಿಸಲು ಸೂಚಿಸಿದ್ದಾರೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

In an act of moral policing, some workers of Bajrang Dal (BD) barged into a DJ party that was taking place at Maroli in the city to celebrate Holi festival and vandalized the premises. The party was going on in the name of Rang De Barsa. Young girls and boys were enjoying by spraying colours on one another. BD workers attacked the programme saying that the youths are showing indecent behaviour. They also accused that the Holi is being celebrated with youths of different religion.