ಕಾಂಗ್ರೆಸಿನ 29 ಶಾಸಕರು ಸ್ಟಿಂಗಲ್ಲಿ ದುಡ್ಡು ಪಡೆದು ರೆಡ್ ಹ್ಯಾಂಡ್ ಸಿಕ್ಕಿಬಿದ್ದಿದ್ದಾರೆ, 13 ಮಂದಿಗೆ ಟಿಕೆಟ್ ಕೊಟ್ಟಿದ್ದು ಹೇಗೆ ? 

31-03-23 09:21 pm       Mangalore Correspondent   ಕರಾವಳಿ

ಕಾಂಗ್ರೆಸಿನ 29 ಮಂದಿ ಶಾಸಕರು ಮಾಧ್ಯಮ ಒಂದರ ಸ್ಟಿಂಗ್ ಆಪರೇಶನಲ್ಲಿ ದುಡ್ಡು ತೆಗೆದುಕೊಂಡು ಸಿಕ್ಕಿಬಿದ್ದಿದ್ದಾರೆ. ಇದರ ವಿಡಿಯೋ ಇದ್ದು ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು ಏನಂತಾರೆ.

ಮಂಗಳೂರು, ಮಾ.31 : ಕಾಂಗ್ರೆಸಿನ 29 ಮಂದಿ ಶಾಸಕರು ಮಾಧ್ಯಮ ಒಂದರ ಸ್ಟಿಂಗ್ ಆಪರೇಶನಲ್ಲಿ ದುಡ್ಡು ತೆಗೆದುಕೊಂಡು ಸಿಕ್ಕಿಬಿದ್ದಿದ್ದಾರೆ. ಇದರ ವಿಡಿಯೋ ಇದ್ದು ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು ಏನಂತಾರೆ. ರೆಡ್ ಹ್ಯಾಂಡ್ ಹಣ ತೆಗೆದುಕೊಳ್ತಿರುವ ವಿಡಿಯೋ ಇದ್ದರೂ, 13 ಜನರಿಗೆ ಟಿಕೆಟ್ ಕೊಟ್ಟಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಬೇಕು ಎಂದು ರಾಜ್ಯ ಬಿಜೆಪಿ ವಕ್ತಾರ ಎಂ.ಜಿ. ಮಹೇಶ್ ಆಗ್ರಹ ಮಾಡಿದ್ದಾರೆ.‌

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಈ ಪೈಕಿ ಹನ್ನೊಂದು ಜನ ಬೆಂಗಳೂರಿನ ಶಾಸಕರ ಭವನದಲ್ಲಿಯೇ ಹಣ ಸ್ವೀಕರಿಸಿದ್ದಾರೆ, ಖಾಸಗಿ ಹೊಟೇಲ್ ನಲ್ಲಿ ನಾಲ್ಕು ಜನ, ಒಂದಷ್ಟು ಮಂದಿ ರೆಸಾರ್ಟಲ್ಲಿ ಹಣ ಪಡೆದಿದ್ದಾರೆ. ಒಟ್ಟು 29 ಜನ ಶಾಸಕರು ರೆಡ್ ಹ್ಯಾಂಡ್ ಆಗಿ ಹಣ ತೆಗೊಂಡಿದ್ದು ಸ್ಟಿಂಗಲ್ಲಿ ಪತ್ತೆಯಾಗಿದೆ.‌ ಕಾಂಗ್ರೆಸ್ ಶಾಸಕರು ಬೇರೆ ಬೇರೆ ವಾಮಮಾರ್ಗದಲ್ಲಿ ಹಣ ತೆಗೆದುಕೊಂಡಿರುವುದು ರೆಕಾರ್ಡ್ ಆಗಿದೆ. 

Get the gun…': Siddaramaiah reacts to Karnataka minister's 'appeal to kill'  | Bengaluru - Hindustan Times

ಹೀಗಿದ್ದರೂ ಕಾಂಗ್ರೆಸ್ ನಾಯಕರು ಯಾವ ನೈತಿಕತೆ ಇಟ್ಟು ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಮಾಡುತ್ತಾರೆ.‌ ಈಗ ಸಿದ್ದರಾಮಯ್ಯ ಅವರಲ್ಲಿ ಕೇಳ್ತೀನಿ, ಪ್ರತಿ ಮಾತಿಗೂ ನಲ್ವತ್ತು ಪರ್ಸೆಂಟ್ ಅಂತೀರಲ್ಲಾ.. ನಲ್ವತ್ತು ಪರ್ಸೆಂಟ್ ಕಮಿಷನ್ ಹೇಳಿ ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ಗೆ ವರ್ಕ್ ಆರ್ಡರ್ ಕೊಟ್ಟಿದ್ದು ಯಾರು ? ಸಂತೋಷ್ ಪಾಟೀಲ್ ಗೆ ನಿಮ್ಮದೇ ಶಾಸಕಿಯೊಬ್ಬರು ವರ್ಕ್ ಆರ್ಡರ್ ಇಲ್ಲದೆ ಕಾಮಗಾರಿ ಕೊಟ್ಡಿದ್ದು ಹೇಗೆ ? 

ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ ಅಂತ ಹೇಳುವುದು ಇದಕ್ಕಾಗಿ.‌ ನಿಮ್ಮ ಕೈಲಿ ಸಾಮರ್ಥ್ಯ ಇದ್ದರೆ ದುಡ್ಡು ತೆಗೆದುಕೊಂಡು ಸಿಕ್ಕಿಬಿದ್ದ 13 ಮಂದಿಗೆ ಟಿಕೆಟ್ ಕೊಡುತ್ತಿರುವ ವಿಚಾರದ ಬಗ್ಗೆ ಸ್ಪಷ್ಟನೆ ಕೊಡಿ, ಇವರು ದುಡ್ಡು ತೆಗೆದುಕೊಂಡಿದ್ದು ಸತ್ಯವೋ, ಸುಳ್ಳಾ ಹೇಳಿ.. ನಿಮ್ಮ ಶಾಸಕರು ದುಡ್ಡು ತೆಗೆದುಕೊಳ್ಳುತ್ತಿರುವ ವಿಡಿಯೋ ಬಗ್ಗೆ ಏನು ಹೇಳುತ್ತೀರಿ. 

ನಿಮ್ಮ ರಾಷ್ಟ್ರೀಯ ನಾಯಕರಿಂದ ಹಿಡಿದು ರಾಜ್ಯ ಅಧ್ಯಕ್ಷರೆಲ್ಲ ಬೇಲ್ ನಲ್ಲಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸುವ ಕಾಂಗ್ರೆಸ್ ನಾಯಕರ ಬಗ್ಗೆ ನೈತಿಕತೆ ಇದೆಯೇ‌.. ಯಾವೆಲ್ಲ ಶಾಸಕರು ಹಣ ತೆಗೆದುಕೊಂಡಿದ್ದಾರೆ ಎಂಬ ಬಗ್ಗೆ ನಮ್ಮಲ್ಲಿ ದಾಖಲೆ ಇದೆ.‌ ಇದನ್ನು ನಾವು ಸಾಂವಿಧಾನಿಕ ಸಂಸ್ಥೆಯ ಮುಂದಿಟ್ಟು ಕಾನೂನು ಕ್ರಮಕ್ಕೆ ಒತ್ತಾಯಿಸುತ್ತೇವೆ.‌

ಕಾಂಗ್ರೆಸಿನದ್ದು ಪೂರ್ತಿ ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತ, ತುಷ್ಟೀಕರಣ ರಾಜಕೀಯ ಮಾತ್ರ. ಇವರ ಭ್ರಷ್ಟಾಚಾರದ ಬಗ್ಗೆ ದೇಶದಾದ್ಯಂತ ಜನರಿಗೆ ಗೊತ್ತಿದೆ. ಈ ಸಲದ ಚುನಾವಣೆಯಲ್ಲಿ ಜನರು ಕಾಂಗ್ರೆಸನ್ನು ತಿರಸ್ಕರಿಸಲಿದ್ದಾರೆ‌ ಎಂದು ಎಂಜಿ ಮಹೇಶ್ ಹೇಳಿದ್ದಾರೆ.

29 Congress MLA have been caught red handed in sting operation what has Congress has to say slams MG kumar.