ಕ್ರಿಸ್ತಿಯನ್ನರಿಗೆ ಬ್ರಿಟಿಷರು ಕೊಟ್ಟಿದ್ದ ಭೂಮಿ ಕಿತ್ಕೋಬೇಕು ಎಂದಿದ್ದ ಡಾ.ಪ್ರಸಾದ್ ಭಂಡಾರಿ ವಿರುದ್ಧ ಕ್ರಿಸ್ತಿಯನ್ ನಿಯೋಗ ಎಸ್ಪಿ, ಕಮಿಷನರ್ ಭೇಟಿ, ಕ್ರಮಕ್ಕೆ ಒತ್ತಾಯ

02-04-23 10:14 pm       Mangalore Correspondent   ಕರಾವಳಿ

ಪುತ್ತೂರು ಮತ್ತು ಮಂಗಳೂರಿನಲ್ಲಿ ಕ್ರಿಸ್ತಿಯನ್ ಸಂಸ್ಥೆಗಳಿಗೆ ಬ್ರಿಟಿಷರ ಕಾಲದಲ್ಲಿ ಕೊಟ್ಟಿರುವ ಜಾಗಗಳನ್ನು ಮರಳಿ ಪಡೆಯಬೇಕೆಂದು ಹಿಂದು ಸಂಘಟನೆ ಮುಖಂಡ ಡಾ.ಎಂ.ಕೆ.ಪ್ರಸಾದ್ ಭಂಡಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮಂಗಳೂರಿನಲ್ಲಿ ಕ್ರಿಸ್ತಿಯನ್ ಸಂಘಟನೆಗಳು ಪೊಲೀಸ್ ಕಮಿಷನರ್ ಮತ್ತು ಎಸ್ಪಿ ವಿಕ್ರಮ್ ಅಮಟೆ ಅವರಿಗೆ ಮನವಿ ನೀಡಿವೆ.

ಮಂಗಳೂರು, ಎ.2: ಪುತ್ತೂರು ಮತ್ತು ಮಂಗಳೂರಿನಲ್ಲಿ ಕ್ರಿಸ್ತಿಯನ್ ಸಂಸ್ಥೆಗಳಿಗೆ ಬ್ರಿಟಿಷರ ಕಾಲದಲ್ಲಿ ಕೊಟ್ಟಿರುವ ಜಾಗಗಳನ್ನು ಮರಳಿ ಪಡೆಯಬೇಕೆಂದು ಹಿಂದು ಸಂಘಟನೆ ಮುಖಂಡ ಡಾ.ಎಂ.ಕೆ.ಪ್ರಸಾದ್ ಭಂಡಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮಂಗಳೂರಿನಲ್ಲಿ ಕ್ರಿಸ್ತಿಯನ್ ಸಂಘಟನೆಗಳು ಪೊಲೀಸ್ ಕಮಿಷನರ್ ಮತ್ತು ಎಸ್ಪಿ ವಿಕ್ರಮ್ ಅಮಟೆ ಅವರಿಗೆ ಮನವಿ ನೀಡಿವೆ.

ಪುತ್ತೂರಿನ ಹಿಂದು ಜಾಗರಣ ವೇದಿಕೆಯ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಪ್ರಸಾದ್ ಭಂಡಾರಿ ಪ್ರಚೋದನಕಾರಿ ಮಾತುಗಳನ್ನು ಮಾತನಾಡಿದ್ದರು. ಪುತ್ತೂರಿನ ಫಿಲೋಮಿನಾ ಕಾಲೇಜು, ಬೆಥನಿ ವಿದ್ಯಾಸಂಸ್ಥೆಗಳು, ಮಂಜಲ್ಪಡ್ಪು ಪ್ರದೇಶದಲ್ಲಿ ಪ್ರೊಟೆಸ್ಟೆಂಟ್ ಕ್ರಿಸ್ತಿಯನ್ನರ ಸಂಸ್ಥೆಗಳಿವೆ. ಇವರಿಗೆ ನೂರು ವರ್ಷಗಳ ಹಿಂದೆ ಬ್ರಿಟಿಷರು ನಮ್ಮ ಹಿಂದುಗಳ ಜಾಗವನ್ನು ತೆಗೆದು ಕೊಟ್ಟಿದ್ದರು. ಆ ಜಾಗಗಳನ್ನು ನಾವು ಮರಳಿ ಪಡೆಯಬೇಕಾಗಿದೆ. ನಾವು ಹಿಂದುಗಳು ಒಂದು ಎಕರೆ ಜಾಗಕ್ಕಾಗಿ ಬಡಿದಾಡುವ ಸ್ಥಿತಿಯಿದೆ. ಎಲ್ಲ ಜಾಗಗಳನ್ನು ಕ್ರಿಸ್ತಿಯನ್, ಮುಸ್ಲಿಮರಿಗೆ ಕೊಟ್ಟರೆ ನಾವೆಲ್ಲಿ ಹೋಗಬೇಕು. ನಮ್ಮ ಯುವಕರು ಮನಸ್ಸು ಮಾಡಿದರೆ ಇದೆಲ್ಲ ಸಾಧ್ಯ ಎಂದು ಪ್ರಸಾದ್ ಭಂಡಾರಿ ಹೇಳಿದ್ದರು. ಮಂಗಳೂರಿನ ಮಿಲಾಗ್ರಿಸ್ ಚರ್ಚ್, ಆಗ್ನೆಸ್ ಕಾಲೇಜು ಸೇರಿ ಎಲ್ಲವೂ ಬ್ರಿಟಿಷರು ಕೊಟ್ಟಿರುವುದು. ಅದನ್ನು ಮರಳಿ ಪಡೆಯಬೇಕಾಗಿದೆ ಎಂದಿದ್ದರು.

ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಮತ್ತು ಪೊಲೀಸ್ ಕಮಿಷನರ್ ಗೆ ನೀಡಿರುವ ದೂರಿನಲ್ಲಿ ಕ್ರಿಸ್ತಿಯನ್ ಮುಖಂಡರು, ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಸದ್ರಿಯವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿದ್ದು ಇದರಿಂದ ಸಾಮಾನ್ಯ ಜನರು ಉದ್ರೇಕಗೊಳ್ಳುವ ಅಪಾಯವಿದೆ. ಸಮಾಜದಲ್ಲಿ ದ್ವೇಷ, ಅಶಾಂತಿ ಹರಡಿ ಶಾಂತಿ ಕದಡುವ ಸಾಧ್ಯತೆಯಿದೆ. ಹಿಂಸೆಗೆ ಪ್ರಚೋದನೆಗೊಳ್ಳಲು ಕಾರಣರಾಗಿದ್ದಾರೆ. ಕ್ರೈಸ್ತರ ಮೇಲೆ ಸಂಶಯ ಮೂಡಿಸಿ ವೈಮನಸ್ಸು ಉಂಟಾಗುವಂತೆ ಮಾಡಿದ್ದಾರೆ. ಕ್ರೈಸ್ತ ಸಂಸ್ಥೆಯಲ್ಲಿ ಕಲಿತಿದ್ದ ಇವರು ಕ್ರೈಸ್ತರ ವಿರುದ್ಧ ಮಾತನಾಡಿ, ಜನರ ಮನಸ್ಸನ್ನು ಕೆಡಿಸುತ್ತಿದ್ದಾರೆ. ದ್ವೇಷಪೂರಿತ ಭಾಷಣದಿಂದ ಕ್ರೈಸ್ತ ಸಮುದಾಯವನ್ನು ಗುರಿಯಾಗಿಸುವ ಮತ್ತು ಬೆದರಿಸುವ ಸಮಸ್ಯೆ ಹೆಚ್ಚುತ್ತಿದ್ದು ಇದನ್ನು ತಡೆಯಲು ತ್ವರಿತ ಕ್ರಮ ಕೈಗೊಳ್ಳಬೇಕಾಗಿದೆ. ಸಮಾಜದಲ್ಲಿ ಅಶಾಂತಿಗೆ ಕಾರಣವಾಗಬಲ್ಲ ಹೇಳಿಕೆಗಳಿಗೆ ಕಡಿವಾಣ ಹಾಕಲು ಸುಪ್ರೀಂ ಕೋರ್ಟ್ ಹೇಳಿದೆ.

ಭಾರತೀಯ ದಂಡ ಸಂಹಿತೆಯ 1860ರಡಿಯಲ್ಲಿ ಪ್ರಸಾದ್ ಭಂಡಾರಿ ಅಪರಾಧಗಳನ್ನು ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಇದಲ್ಲದೆ, ದ್ವೇಷ ಬಿತ್ತುವ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ ಮತ್ತಿತರ ಸಾಮಾಜಿಕ ಜಾಲತಾಣಗಳಿಂದ ತಕ್ಷಣ ಅಳಿಸಿ ಹಾಕಬೇಕೆಂದು ಒತ್ತಾಯಿಸಿದ್ದಾರೆ. ಬಿಷಪ್ ಮತ್ತು ಕೆಥೋಲಿಕ್ ಚರ್ಚ್ ಪರವಾಗಿ ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ  ಫಾ.ಜೆ.ಬಿ.ಸಲ್ದಾನಾ, ರಾಯ್ ಕ್ಯಾಸ್ಟಲಿನೋ ನೇತೃತ್ವದಲ್ಲಿ ಪೊಲೀಸ್ ವರಿಷ್ಠರನ್ನು ಕ್ರಿಸ್ತಿಯನ್ ನಿಯೋಗ ಭೇಟಿಯಾಗಿದೆ. ನಿಯೋಗದಲ್ಲಿ ನೋರಿನ್ ಪಿಂಟೋ, ಅಲ್ಫೋನ್ಸ್ ಫೆರ್ನಾಂಡಿಸ್, ವಿನೋದ್ ಪಿಂಟೋ, ಫ್ರಾನ್ಸಿಸ್ ಸೆರಾವೋ, ಆರ್ಥರ್ ಡಿಸೋಜ, ಲ್ಯಾನ್ಸಿ ಮಸ್ಕರೇನಸ್, ಕಾಲಿನ್ ಮಿರಾಂಡ, ಸ್ಟ್ಯಾನಿ ಬಂಟ್ವಾಳ್ ಮತ್ತಿತರರು ಇದ್ದರು.

Puttur Dr Prasad for inflammatory speech against the Catholic community and Christians, Catholic Sabha files complaint. The land on which the Christians run their institutes are given to them by the British and we (Hindus) do not have land now. We have only one country called India. If these people (Christians) drive us out of this country where we will run to? We should jump into the sea.” In addition, Dr Prasad also said, “Institutes like St Philomena Puttur, Bethany institute and St Victor institutes have taken a major chunk of land of Puttur and we now do not have land.”