ಪುತ್ತೂರು ಶಾಸಕರ ಮಹಿಳೆ ಜೊತೆಗಿನ ಫೋಟೊ ವೈರಲ್ ; ಬಿಜೆಪಿಗೆ ಮುಜುಗರ, ಉಪ್ಪಿನಂಗಡಿ ಠಾಣೆಯಲ್ಲಿ ಎಫ್ಐಆರ್

06-04-23 02:14 pm       Mangaluru Correspondent   ಕರಾವಳಿ

ಪುತ್ತೂರು ಬಿಜೆಪಿ ಶಾಸಕ ಸಂಜೀವ ಮಠಂದೂರು ಮಹಿಳೆಯೊಬ್ಬರ ಜೊತೆಗಿರುವ ಖಾಸಗಿ ಕ್ಷಣಗಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚುನಾವಣೆ ಕಾಲದಲ್ಲಿ ಬಿಜೆಪಿಗೆ ಮುಜುಗರ ಸೃಷ್ಟಿಸಿದೆ.

ಮಂಗಳೂರು, ಎ.6: ಪುತ್ತೂರು ಬಿಜೆಪಿ ಶಾಸಕ ಸಂಜೀವ ಮಠಂದೂರು ಮಹಿಳೆಯೊಬ್ಬರ ಜೊತೆಗಿರುವ ಖಾಸಗಿ ಕ್ಷಣಗಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚುನಾವಣೆ ಕಾಲದಲ್ಲಿ ಬಿಜೆಪಿಗೆ ಮುಜುಗರ ಸೃಷ್ಟಿಸಿದೆ.

ಎ.5ರಂದು ಫೋಟೋ ವೈರಲ್ ಆಗುತ್ತಿದ್ದಂತೆ ಉಪ್ಪಿನಂಗಡಿ ಠಾಣೆಯಲ್ಲಿ ಮಹಿಳೆಯೊಬ್ಬರು ದೂರು ನೀಡಿದ್ದು, ತನ್ನ ಫೋಟೋವನ್ನು ಯಾರೋ ಎಡಿಟ್ ಮಾಡಿ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆಂದು ದೂರಿದ್ದಾರೆ. ಈ ಬಗ್ಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ.  

ಶಾಸಕ ಸಂಜೀವ ಮಠಂದೂರು ಅವರಿಗೆ ಈ ಬಾರಿ ಟಿಕೆಟ್ ಇಲ್ಲವೆಂದು ಚರ್ಚೆ ಒಂದೆಡೆ ಇದ್ದರೆ, ಇದರ ನಡುವಲ್ಲೇ ಗೌಡ ಸಮುದಾಯದ ಮುಖಂಡರು ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿಯಾಗಿ ಮಠಂದೂರು ಅವರಿಗೆ ಮತ್ತೆ ಟಿಕೆಟ್ ನೀಡಬೇಕೆಂದು ಒತ್ತಾಯ ಮಾಡಿದ್ದರು. ಇದರ ಬೆನ್ನಲ್ಲೇ ಫೋಟೋ ಮತ್ತು ವಿಡಿಯೋ ಹರಿಯಬಿಡಲಾಗಿದೆ. ಈ ವಿಡಿಯೋ ಯಾವಾಗಿನದ್ದು, ಎಲ್ಲಿಂದ ಸೃಷ್ಟಿಯಾಗಿದೆ ಎನ್ನುವುದು ಗೊತ್ತಿಲ್ಲ. ಶಾಸಕರ ಫೋಟೊ ಜಾಲತಾಣದಲ್ಲಿ ಫಾರ್ವರ್ಡ್ ಮಾಡುತ್ತಿರುವ ಬಗ್ಗೆ ಪೊಲೀಸರು ಐಟಿ ಏಕ್ಟ್ ಅಡಿ ಪ್ರಕರಣ ದಾಖಲಿಸಿದ್ದಾರೆ.

ಚುನಾವಣೆ ಸಮಯದಲ್ಲಿಯೇ ಬಿಜೆಪಿ ಶಾಸಕನ ಅಶ್ಲೀಲ ಫೋಟೊ ಬಿಡುಗಡೆ ಆಗಿರುವುದು ಸಂಚಲನ ಮೂಡಿಸಿದ್ದು, ಕಾಂಗ್ರೆಸ್ ಪಾಲಿಗೆ ಅಸ್ತ್ರ ನೀಡಿದಂತಾಗಿದೆ. ವರ್ಷದ ಹಿಂದೆಯೇ ಪುತ್ತೂರಿನಲ್ಲಿ ಶಾಸಕರ ವಿಡಿಯೋ ಇದೆಯೆಂದು ವದಂತಿ ಹಬ್ಬಿತ್ತು. ಆದರೆ ಅದು ಬಿಡುಗಡೆ ಆಗಿರಲಿಲ್ಲ. ಇದೀಗ ಉದ್ದೇಶಪೂರ್ವಕವಾಗಿ ವಿಡಿಯೋ ಮತ್ತು ಫೋಟೊಗಳನ್ನು ಹರಿಯಬಿಡಲಾಗಿದೆ ಎನ್ನುವುದು ಕಂಡುಬರುತ್ತದೆ.

A purported photograph of a Puttur BJP MLA Sanjeeva Matandoor with an unknown woman has gone viral on social media. The woman in the photograph has filed a police complaint at the Uppinangady Police Station alleging that the viral picture was doctored.