ಬ್ರೇಕಿಂಗ್ ನ್ಯೂಸ್
07-04-23 10:41 pm Richard, Mangalore HK Correspondent ಕರಾವಳಿ
ಬೆಳ್ತಂಗಡಿ, ಎ.7: ಆ ಇಬ್ಬರು ಹೆಣ್ಮಕ್ಕಳ ನಿಗೂಢ ಸಾವು ಬೆಳ್ತಂಗಡಿ ತಾಲೂಕಿನಲ್ಲಿ ಸಂಚಲನ ಸೃಷ್ಟಿಸಿದೆ. ಅವರದ್ದು ಆತ್ಮಹತ್ಯೆಯೋ, ಯಾರಾದ್ರೂ ವಿಷ ಕೊಟ್ಟು ಸಾಯಿಸಿದ್ದಾರೆಯೇ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಕಾರಣವಾಗಿರೋದು ಸ್ನೇಹಿತೆಯರಾಗಿದ್ದ ಆ ಇಬ್ಬರು ಹೆಣ್ಮಕ್ಕಳು ಒಂದೇ ದಿನ, ಒಂದೇ ರೀತಿಯಲ್ಲಿ ಸಾವು ಕಂಡಿರೋದು.
ನೆಲ್ಯಾಡಿ ಸಮೀಪದ ಪಟ್ರಮೆ ಗ್ರಾಮದ ರಕ್ಷಿತಾ(22) ಮತ್ತು ಲಾವಣ್ಯ (21) ಹೆಚ್ಚು ಕಡಿಮೆ ಒಂದೇ ವಯಸ್ಸಿನವರು. ಇಬ್ಬರು ಕೂಡ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಗುಂಪುಗಳಲ್ಲಿ ಸೇವಾ ನಿರತರಾಗಿ ಕೆಲಸ ಮಾಡುತ್ತಿದ್ದರು. ಎಪ್ರಿಲ್ 2ರ ಭಾನುವಾರ ಸಂಜೆ ಅವರಿಬ್ಬರೂ ಮನೆಯಲ್ಲಿದ್ದಾಗ ಹೊಟ್ಟೆ ನೋವು, ವಾಂತಿ ಮಾಡತೊಡಗಿದ್ದರು. ರಕ್ಷಿತಾಳನ್ನು ಸ್ಥಳೀಯ ನೆಲ್ಯಾಡಿ ಆಸ್ಪತ್ರೆಗೆ ಒಯ್ದಿದ್ದಾಗ, ಫುಡ್ ಪಾಯ್ಸನ್ ಆಗಿರಬೇಕೆಂದು ಹೇಳಿ ಗ್ಲುಕೋಸ್ ಕೊಟ್ಟು ಕಳುಹಿಸಿದ್ದರಂತೆ. ಲಾವಣ್ಯ ಕೂಡ ವಾಂತಿಯಿಂದ ನರಳುತ್ತಿದ್ದರೂ, ಮನೆಯಲ್ಲಿ ಅನಕ್ಷರಸ್ಥರೇ ಇದ್ದುದರಿಂದ ಏನಾಗಿದೆ ಎಂದು ಕೇಳಲು ಹೋಗಿಲ್ಲ.
ಎರಡು ದಿನಗಳಿಂದ ನಿರಂತರ ವಾಂತಿಯಿಂದಾಗಿ ಯಾವುದೇ ಆಹಾರ ತಿಂದರೂ ಹೊಟ್ಟೆಯಲ್ಲಿ ನಿಲ್ಲುತ್ತಿರಲಿಲ್ಲ. ಮಂಗಳವಾರದ ವೇಳೆಗೆ ರಕ್ಷಿತಾಳದ್ದು ಕಣ್ಣು, ಮುಖ ಹಳದಿ ಬಣ್ಣಕ್ಕೆ ತಿರುಗಿತ್ತು. ಕೆಲವರು ಏನೋ ಜಾಂಡಿಸ್ ಆಗಿರಬೇಕೆಂದು ಮನೆ ಮದ್ದು ಮಾಡಲು ಸಲಹೆ ನೀಡಿದರೆ, ಇನ್ನು ಕೆಲವು ಸ್ಥಳೀಯರು ಸೇರಿ ಏನೋ ಸಮಸ್ಯೆ ಆಗಿರಬೇಕೆಂದು ಹೆಚ್ಚಿನ ಚಿಕಿತ್ಸೆಗಾಗಿ ಬುಧವಾರದ ವೇಳೆಗೆ ಬೆಳ್ತಂಗಡಿ ಎಸ್ಡಿಎಂ ಆಸ್ಪತ್ರೆಗೆ ಕರೆತಂದಿದ್ದರು. ಇದೇ ವೇಳೆ, ಲಾವಣ್ಯಳನ್ನು ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ದಿದ್ದರು. ಎರಡೂ ಕಡೆಯಲ್ಲಿ ಏನೋ ವಿಷ ಸೇವನೆ ರೀತಿಯಿದೆ ಎಂದು ಹೇಳಿ ಮಂಗಳೂರಿಗೆ ಕರೆದೊಯ್ಯಲು ವೈದ್ಯರು ಸೂಚಿಸಿದ್ದಾರೆ.
ರಕ್ಷಿತಾಳನ್ನು ಬುಧವಾರ ಮಧ್ಯರಾತ್ರಿ ವೇಳೆಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿತ್ತು. ಅತ್ತ ಲಾವಣ್ಯಳನ್ನು ಪುತ್ತೂರಿನ ಆಸ್ಪತ್ರೆ ವೈದ್ಯರ ಸೂಚನೆಯಂತೆ ಸುರತ್ಕಲ್ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಂಕನಾಡಿ ಆಸ್ಪತ್ರೆಯಲ್ಲಿದ್ದ ರಕ್ಷಿತಾ ಎ.7ರ ಬೆಳಗ್ಗೆ 8.30ಕ್ಕೆ ಕೊನೆಯುಸಿರೆಳೆದಿದ್ದಳು. ಇತ್ತ ಜೀವನ್ಮರಣ ಹೋರಾಟದಲ್ಲಿದ್ದ ಲಾವಣ್ಯ ಕೂಡ ಮುಕ್ಕ ಆಸ್ಪತ್ರೆಯಲ್ಲಿ ಅದೇ ದಿನ ಸಂಜೆ ವೇಳೆಗೆ ಮೃತಪಟ್ಟಿದ್ದಾಳೆ. ಅಸಹಜ ಸಾವು ಆಗಿದ್ದರಿಂದ ಎರಡೂ ಕಡೆ ಪೋಸ್ಟ್ ಮಾರ್ಟಂ ನಡೆದಿದ್ದು, ರಕ್ಷಿತಾಳದ್ದು ವಿಷ ಸೇವನೆಯಿಂದಲೇ ಸಾವು ಅನ್ನುವ ಪ್ರಾಥಮಿಕ ಮಾಹಿತಿ ಬಂದಿದೆ. ಶುಕ್ರವಾರ ಲಾವಣ್ಯಳದ್ದೂ ಎಜೆ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂ ನಡೆಸಲಾಗಿದ್ದು, ಅಲ್ಲಿಯೂ ವಿಷದ ಕಾರಣದಿಂದಲೇ ಸಾವಾಗಿದೆ ಎನ್ನುವ ಪ್ರಾಥಮಿಕ ಮಾಹಿತಿ ಬಂದಿದೆ.
ಮೊನ್ನೆಯಷ್ಟೇ ಕೆಲಸ ತೊರೆದಿದ್ದ ಲಾವಣ್ಯ
ಲಾವಣ್ಯ ಮತ್ತು ರಕ್ಷಿತಾ ಇಬ್ಬರು ಕೂಡ ಒಂದೂವರೆ ವರ್ಷಗಳಿಂದ ಮುಂಡೂರುಪಳಿಕೆ ಮತ್ತು ಉಪ್ಪಾರಪಳಿಕೆ ಭಾಗದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸೇವಾ ನಿರತರಾಗಿ ಕೆಲಸ ಮಾಡುತ್ತಿದ್ದರು. ಈ ಪೈಕಿ ಲಾವಣ್ಯ ಇತ್ತೀಚೆಗೆ ಕೆಲಸದ ಜಾಗದಲ್ಲಿ ಕಿರಿಕಿರಿ ಮಾಡುತ್ತಿದ್ದಾರೆಂದು ಹೇಳಿ ಮೊನ್ನೆ ಮಾರ್ಚ್ 31ಕ್ಕೆ ಕೆಲಸಕ್ಕೆ ರಾಜಿನಾಮೆ ನೀಡಿದ್ದಳು. ರಕ್ಷಿತಾ ಕೆಲಸಕ್ಕೆ ಹೋಗುತ್ತಿದ್ದಳು. ಅದಾಗಿ ಎರಡೇ ದಿನದಲ್ಲಿ ಇವರಿಬ್ಬರಿಗೂ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ವೈಪರೀತ್ಯದ ಬೆಳವಣಿಗೆ ಆಗಿತ್ತು. ಇವರು ವಿಷ ಸೇವನೆ ಮಾಡಿದ್ದಾರೆಯೇ, ಯಾರಾದ್ರೂ ವಿಷ ಕೊಟ್ಟಿದ್ದಾರೆಯೇ ಅನ್ನೋದು ತಿಳಿದುಬಂದಿಲ್ಲ. ಧರ್ಮಸ್ಥಳ ಠಾಣೆಯಲ್ಲಿ ಅಸಹಜ ಸಾವೆಂದು ಪ್ರಕರಣ ದಾಖಲಾಗಿದ್ದು, ಪೊಲೀಸರು ಆಸ್ಪತ್ರೆಗೆ ಬಂದು ಹೇಳಿಕೆ ಪಡೆದು ಹೋಗಿದ್ದಾರೆ. ಸ್ವತಃ ವಿಷ ಸೇವನೆ ಮಾಡಿದ್ದರೆ, ನಾಲ್ಕು ದಿನಗಳಲ್ಲಿ ನರಳಾಡುತ್ತಿದ್ದಾಗ ಹೇಳಿರುತ್ತಿದ್ದರು. ವೈದ್ಯರು ಏನಾದ್ರೂ ವಿಷ ತಗೊಂಡಿದ್ದೀರಾ ಎಂದು ಕೇಳಿದಾಗ, ಇಲ್ಲ ಎಂದೇ ಹೇಳುತ್ತಿದ್ದರು. ಹೀಗಾಗಿ ಅವರು ಸ್ವತಃ ವಿಷ ಸೇವಿಸಿರಬಹುದು ಅನ್ನುವ ಮಾತನ್ನು ಜೊತೆಗಿದ್ದವರು ಒಪ್ಪಿಕೊಳ್ಳುತ್ತಿಲ್ಲ.
ಒಟ್ಟಿನಲ್ಲಿ ಜೊತೆಗೆ ಕೆಲಸ ಮಾಡಿಕೊಂಡಿದ್ದವರು ಒಂದೇ ದಿನ ಸಾವಿನ ಮನೆ ಕದ ತಟ್ಟಿರುವುದು ಸಾರ್ವಜನಿಕ ವಲಯದಲ್ಲಿ ಇವರ ಸಾವಿನ ಬಗ್ಗೆಯೇ ಅನುಮಾನ ಹುಟ್ಟುಹಾಕಿದೆ. ಪೊಲೀಸರು ಪೋಸ್ಟ್ ಮಾರ್ಟಂ ವರದಿ ಆಧರಿಸಿ ತನಿಖೆ ನಡೆಸಲು ಮುಂದಾಗಿದ್ದಾರೆ.
Two young girls, neighbours, who were admitted to hospital in Mangaluru for severe stomach ache, succumbed on Thursday April 6. The deceased are identified as Rakshitha (22) and Lavanya (21), residents of Patrame village in Belthangady taluk of Dakshina Kannada district. While Rakshitha died Thursday morning, Lavanya succumbed in the afternoon at the hospital.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm