ಕಲಬುರಗಿ ಪೊಲೀಸ್ ಕಮಿಷನರ್ ಜೊತೆ ಜೆಡಿಎಸ್ ಅಭ್ಯರ್ಥಿ ತಕರಾರು ; ಏಳು ಮಂದಿ ವಿರುದ್ಧ ಎಫ್ಐಆರ್

08-04-23 12:48 pm       HK News Desk   ಕರಾವಳಿ

ನಗರ ಪೊಲೀಸ್ ಆಯುಕ್ತರೊಂದಿಗೆ ವಾಗ್ವಾದಕ್ಕಿಳಿದಿದ್ದಕ್ಕಾಗಿ ಜೆಡಿಎಸ್ ಅಭ್ಯರ್ಥಿ ಸೇರಿದಂತೆ ಏಳು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಕಲಬುರಗಿ, ಎ.8: ನಗರ ಪೊಲೀಸ್ ಆಯುಕ್ತರೊಂದಿಗೆ ವಾಗ್ವಾದಕ್ಕಿಳಿದಿದ್ದಕ್ಕಾಗಿ ಜೆಡಿಎಸ್ ಅಭ್ಯರ್ಥಿ ಸೇರಿದಂತೆ ಏಳು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಕಲಬುರ್ಗಿಯ ರೋಜಾ ಪೊಲೀಸ್ ಠಾಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಾಸೀರ್ ಹುಸೇನ್ ಉಸ್ತಾದ್ ಮತ್ತು ಅವರ ಸಹಚರರ ವಿರುದ್ಧ ದೂರು ದಾಖಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ ಎಂದು ಹೆಸರಿಸಲಾಗಿರುವ ನಾಸೀರ್ ಅವರು ಕಲಬುರ್ಗಿ ಉತ್ತರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಆತನ ಸಹಚರರಾದ ಅಫ್ಜಲ್ ಮೊಹಮ್ಮದ್, ಶಫಿ ಪಟೇಲ್, ಮುದ್ದಸ್ಸಿರ್, ಘೌಸ್ ಭಗವಾನ್, ಮಜರ್ ಲಾಟೋರ್, ತಲಾಹ್ ಮತ್ತು ಸೊಹೈಲ್ ಅವರನ್ನು ಪ್ರಕರಣದಲ್ಲಿ ಸಹ ಆರೋಪಿಗಳೆಂದು ಹೆಸರಿಸಲಾಗಿದೆ

ಮುಸ್ಲಿಂ ಚೌಕ್ ಬಳಿ ಪೊಲೀಸರು ಬೀದಿಬದಿ ವ್ಯಾಪಾರಿಗಳನ್ನು ಖಾಲಿ ಮಾಡಿಸುತ್ತಿದ್ದಾಗ ಪೊಲೀಸ್ ಕಮಿಷನರ್ ಚೇತನ್ ಅವರೊಂದಿಗೆ ಜೆಡಿಎಸ್ ಮುಖಂಡ ವಾಗ್ವಾದ ನಡೆಸಿದರು. ಈ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಸ್ವೇತ ಕಮಿಷನರ್ ಸಾಹೇಬ್ರೆ ಸ್ಥಳಕ್ಕೆ ಬಂದಿದ್ದರು.

ಬೀದಿಬದಿ ವ್ಯಾಪಾರಿಗಳು ಈ ಕ್ರಮವನ್ನು ವಿರೋಧಿಸುತ್ತಿದ್ದಾಗ, ನಾಸಿರ್ ಅವರೊಂದಿಗೆ ಸೇರಿಕೊಂಡು ಪೊಲೀಸ್ ಆಯುಕ್ತರನ್ನು ಸಾರ್ವಜನಿಕವಾಗಿ ಪ್ರಶ್ನಿಸಿದರು. ವಾಗ್ವಾದದ ಬಳಿಕ ಪೊಲೀಸರ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದರು.

ರಂಜಾನ್ ಸಮಯದಲ್ಲಿ ಅಂಗಡಿಗಳು ಬರುತ್ತವೆ ಮತ್ತು ಹಬ್ಬದ ನಂತರ ಅದನ್ನು ಸರಿಯಾಗಿ ಅಂಗಡಿಗಳನ್ನು ತೆರವುಗೊಳಿಸಲಾಗುತ್ತದೆ. ಹೀಗಾಗಿ, ಪೊಲೀಸರು ಅವರಿಗೆ ತೊಂದರೆ ನೀಡಬಾರದು ಎಂದು ಮುಖಂಡರು ಸಮರ್ಥಿಸಿಕೊಂಡಿದ್ದರು.

ಈ ಸಂಬಂಧ ರೋಜಾ ಠಾಣೆ ಇನ್ಸ್‌ಪೆಕ್ಟರ್ ಮಹಾಂತೇಶ ಬಸಾಪುರ ದೂರು ದಾಖಲಿಸಿದ್ದರು. ಪೊಲೀಸರು ಐಪಿಸಿ ಸೆಕ್ಷನ್ 143, 147, 283 ಮತ್ತು 149 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Clash between JDS candidate and Police Commissioner Chethan in Kalaburagi, Seven booked including leader