ಬ್ರೇಕಿಂಗ್ ನ್ಯೂಸ್
08-04-23 03:27 pm Mangaluru Correspondent ಕರಾವಳಿ
ಮಂಗಳೂರು, ಎ.8: ಪುರಾಣ ಪ್ರಸಿದ್ದ ಕದ್ರಿ ಜೋಗಿ ಮಠದಲ್ಲಿ ಕಾಲಭೈರವ ದೇವರ ಎರಡು ಸಾವಿರ ವರ್ಷಗಳಷ್ಟು ಹಳೆಯದಾದ ಮೂರ್ತಿಯನ್ನು 70 ಲಕ್ಷ ರೂಪಾಯಿಗೆ ಮಾರಾಟ ಮಾಡಲು ಸ್ವಾಮೀಜಿ ಮುಂದಾಗಿದ್ದಾರೆ ಎಂದು ಜೋಗಿ ಸಮುದಾಯದ ಮುಖಂಡ ಹರಿನಾಥ ಜೋಗಿ ಆತಂಕ ವ್ಯಕ್ತಪಡಿಸಿದ್ದಾರೆ.
ಜೋಗಿ ಸಮುದಾಯದ ಸಮಸ್ತ ಬಾಂಧವರೆಲ್ಲ ಸೇರಿ ಕಾಲಭೈರವ ದೇವರ ಪುನರ್ ಪ್ರತಿಷ್ಠೆ ಮಾಡುವ ನಿರ್ಧಾರ ಕೈಗೊಂಡಿದ್ದರು. 2023ರ ಫೆಬ್ರವರಿ 6ರಂದು ಕದ್ರಿ ಮಠಾಧೀಶ ಶ್ರೀ ನಿರ್ಮಲನಾಥಜೀಯವರು ಕಾಲಭೈರವ ದೇವರ ವಿಗ್ರಹದ ಪುನರ್ ಪ್ರತಿಷ್ಠೆಯನ್ನೂ ಮಾಡಿದ್ದಾರೆ. ಆದರೆ, ಇಲ್ಲಿ ಎರಡು ಸಾವಿರ ವರ್ಷಗಳಿಂದ ಇದ್ದ ಮೂರ್ತಿಯನ್ನು ಬಿಟ್ಟು ರಾಜಸ್ಥಾನದಿಂದ ಯಾರೋ ಮಾರ್ವಾಡಿಗಳು ತಂದಿರುವ ಕಾಲಭೈರವ ದೇವರ ಸಣ್ಣ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಇದು ಅಕ್ಷಮ್ಯ ಅಪರಾಧವಾಗಿದ್ದು, ಮಠದಲ್ಲಿರುವ ಪುರಾತನ ವಿಗ್ರಹಗಳಾದ ಜ್ವಾಲಾ ಮಹಮ್ಮಾಯಿ, ಮಹಾಕಾಳಿ ಹಾಗೂ ಇತರ ಮೂರ್ತಿಗಳನ್ನು ಮರು ಪ್ರತಿಷ್ಠಾಪಿಸದೇ ಸ್ವಾಮೀಜಿಯವರು ಘೋರ ಅಪರಾಧ ಮಾಡಿದ್ದಾರೆ.
ಪುನರ್ ಪ್ರತಿಷ್ಠೆ ಆಗಬೇಕಾಗಿದ್ದ ಕದ್ರಿಯ ಕಾಲಭೈರವ ದೇವರ ವಿಗ್ರಹ 2000 ವರ್ಷಗಳಷ್ಟು ಹಿಂದಿನದ್ದಾಗಿದೆ. ಈ ಪ್ರಾಚೀನ ಮೂರ್ತಿಯನ್ನು 70 ಲಕ್ಷ ರೂ.ಗೆ ಮಾರಾಟ ಮಾಡಲು ಈಗಿನ ಸ್ವಾಮೀಜಿ ಹುನ್ನಾರ ನಡೆಸಿದ್ದರು. ಆದರೆ ಸದ್ಯಕ್ಕೆ ನಾವು ಅದನ್ನು ವಿಫಲಗೊಳಿಸಿದ್ದೇವೆ. ಮಠದ ವಿಚಾರದಲ್ಲಿ ನಡೆಯುತ್ತಿರುವ ಅಕ್ರಮ ಕೆಲಸಗಳಿಗೆ ಕೋರ್ಟಿನಿಂದ ತಡೆಯಾಜ್ಞೆ ತರಲು ಯತ್ನಿಸಿದರೂ, ಅದು ಈಡೇರಿಲ್ಲ ಎಂದು ಹರಿನಾಥ ಜೋಗಿ ಹೇಳಿದರು.
ಕದ್ರಿ ಜೋಗಿ ಮಠದ ಬಗ್ಗೆ ಮಂಗಳೂರಿನ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇವೆ. ಸೂಕ್ತ ದಾಖಲೆಗಳನ್ನು ನೀಡಿದ್ದೇವೆ. ಎಂಟು ವರ್ಷಗಳಾದರೂ ನ್ಯಾಯಾಲಯ ನ್ಯಾಯಬದ್ಧ ತೀರ್ಪು ನೀಡಿದ್ದರೆ ನಮಗೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ. ನಮ್ಮ ಸಮಾಜಕ್ಕೆ ಅನ್ಯಾಯವಾಗುತ್ತಿರಲಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಮನವರಿಕೆ ಮಾಡಿದ್ದೇವೆ. ಪೊಲೀಸ್ ಠಾಣೆಗೂ ದೂರು ನೀಡಿದ್ದೇವೆ.
15 ವರ್ಷಗಳ ಹಿಂದೆ ಜಿಲ್ಲಾಧಿಕಾರಿಗಳು ಇದು ಜೋಗಿ ಮಠ ಎಂದು ಹೇಳಿದ್ದಾರೆ. ಈಗ ಕಾಲಭೈರವ ದೇವರ ವಿಗ್ರಹ ಪುನಃಪ್ರತಿಷ್ಠೆ ಮಾಡಬೇಕೆಂದು ನಾವು ಜಿಲ್ಲಾಧಿಕಾರಿಗಳಲ್ಲಿ ವಿನಂತಿ ಮಾಡಿಕೊಂಡಿದ್ದೇವೆ. ಇಲ್ಲಿನ ವಿವಾದದ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ವಿಶೇಷ ಕಾಳಜಿ ವಹಿಸಿ ನಮ್ಮ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಬೇಕಾಗಿದೆ ಎಂದು ಕದ್ರಿ ಜೋಗಿ ಮಠದ ಜೀರ್ಣೋದ್ದಾರ ಮತ್ತು ಕಾರ್ಯನಿರ್ವಹಣಾ ಸಮಿತಿ ಅಧ್ಯಕ್ಷರೂ ಆಗಿರುವ ಹರಿನಾಥ್ ಹೇಳಿದ್ದಾರೆ.
Mangalore Kadri Jogi Mutt seer trying to sale two thousand year old ancient idol, alleges Harinath jogi
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
14-09-25 10:55 pm
Mangalore Correspondent
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
Kundapura Accident, Samba Deer, Bike: ಕುಂದಾಪು...
13-09-25 11:05 pm
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm