ಸುಳ್ಯದಲ್ಲಿ ನಂದಕುಮಾರ್ ಪರ ಬೃಹತ್ ಸಮಾವೇಶ ; ಕಾಂಗ್ರೆಸ್ ಬಿ ಫಾರಂ ಕೊಡದಿದ್ದರೆ ಪಕ್ಷೇತರ ಕಣಕ್ಕಿಳಿಸುವ ಎಚ್ಚರಿಕೆ, ಕಾರ್ಯಕರ್ತರ ಒಕ್ಕೊರಳ ಆಗ್ರಹ

09-04-23 09:55 pm       Mangaluru Corresondent   ಕರಾವಳಿ

ಸುಳ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿಗಣಿ ಕೃಷ್ಣಪ್ಪ ವಿರುದ್ಧ ಪಕ್ಷದ ಒಳಗಡೆಯೇ ವಿರೋಧ ತೀವ್ರಗೊಂಡಿದೆ. ಒಂದು ವಾರದಲ್ಲಿ ಕೃಷ್ಣಪ್ಪ ಅವರನ್ನು ಬದಲಾವಣೆ ಮಾಡಿ ಹೆಚ್.ಎಂ.ನಂದಕುಮಾರ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿ ಬಿಫಾರಂ ನೀಡಬೇಕು. ಇಲ್ಲದಿದ್ದರೆ ಕಾರ್ಯಕರ್ತರ ಸ್ವಾಭಿಮಾನದ ಅಭ್ಯರ್ಥಿಯಾಗಿ ನಂದಕುಮಾರ್ ಅವರನ್ನು ಪಕ್ಷೇತರರಾಗಿ ಕಣಕ್ಕಿಳಿಸುತ್ತೇವೆ ಎಂದು ನಂದಕುಮಾರ್ ಅಭಿಮಾನಿ ಬಳಗ ನಿರ್ಧಾರಕ್ಕೆ ಬಂದಿದೆ.

ಸುಳ್ಯ, ಎ.9: ಸುಳ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿಗಣಿ ಕೃಷ್ಣಪ್ಪ ವಿರುದ್ಧ ಪಕ್ಷದ ಒಳಗಡೆಯೇ ವಿರೋಧ ತೀವ್ರಗೊಂಡಿದೆ. ಒಂದು ವಾರದಲ್ಲಿ ಕೃಷ್ಣಪ್ಪ ಅವರನ್ನು ಬದಲಾವಣೆ ಮಾಡಿ ಹೆಚ್.ಎಂ.ನಂದಕುಮಾರ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿ ಬಿಫಾರಂ ನೀಡಬೇಕು. ಇಲ್ಲದಿದ್ದರೆ ಕಾರ್ಯಕರ್ತರ ಸ್ವಾಭಿಮಾನದ ಅಭ್ಯರ್ಥಿಯಾಗಿ ನಂದಕುಮಾರ್ ಅವರನ್ನು ಪಕ್ಷೇತರರಾಗಿ ಕಣಕ್ಕಿಳಿಸುತ್ತೇವೆ ಎಂದು ನಂದಕುಮಾರ್ ಅಭಿಮಾನಿ ಬಳಗ ನಿರ್ಧಾರಕ್ಕೆ ಬಂದಿದೆ.

ನಂದಕುಮಾರ್ ಅಭಿಮಾನಿ ಬಳಗದ ಸಂಚಾಲಕ ಹಾಗು ಕಡಬ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಬಳ್ಳೇರಿ ನೇತೃತ್ವದಲ್ಲಿ ನಿಂತಿಕಲ್ಲಿನಲ್ಲಿ ನಡೆದ ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಸಮಾವೇಶಗೊಂಡಿದ್ದು ಒಕ್ಕೊರಲ ಅಭ್ಯರ್ಥಿಯಾಗಿ ನಂದಕುಮಾರ್ ಪರ ಬೆಂಬಲ ಘೋಷಿಸಿದರು.

ಸಮಾವೇಶದಲ್ಲಿ ಮಾತನಾಡಿದ ಬಾಲಕೃಷ್ಣ ಬಳ್ಳೇರಿ, ಒಂದೋ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಮಾಡಿ ನಂದಕುಮಾರ್ ಅವರಿಗೆ ಬಿಫಾರಂ ನೀಡಬೇಕು. ತಪ್ಪಿದಲ್ಲಿ ನಂದಕುಮಾರ್ ಅವರನ್ನು ಪಕ್ಷೇತರರಾಗಿ ಕಣಕ್ಕಿಳಿಸುವುದು ಅಥವಾ ಚುನಾವಣೆಯಲ್ಲಿ ತಟಸ್ಥ ನಿಲುವು ತಳೆಯುವ ನಿರ್ಧಾರವನ್ನು ಕೈಗೊಳ್ಳುವ ಬಗ್ಗೆ ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ನಂದಕುಮಾರ್ ಪಕ್ಷೇತರರಾಗಿ ಸ್ಪರ್ಧಿಸಬೇಕು ಎಂದು ಕಾರ್ಯಕರ್ತರು ಒಕ್ಕೊರಲಿನಿಂದ ಆಗ್ರಹಿಸಿದರು.

ನಿಂತಿಕಲ್ಲಿನ ಧರ್ಮಶ್ರೀ ಆರ್ಕೇಡ್‌ನ ಲಕ್ಷ್ಮೀ ವೆಂಕಟ್ರಮಣ ಸಭಾಭವನದಲ್ಲಿ ಸಮಾವೇಶ ನಡೆದಿದ್ದು ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಸೇರಿದ್ದರು.

ಅಕ್ರಮ ಸಕ್ರಮ ಸಮಿತಿ ಮಾಜಿ ಸದಸ್ಯ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು ಮಾತನಾಡಿ’ ಕಾಂಗ್ರೆಸ್‌ ಪಕ್ಷದ ನಿಷ್ಕ್ರಿಯ ರಾಜಕೀಯಕ್ಕೆ ಮುಕ್ತಿ ಆಗಬೇಕು ಎಂಬ ಉದ್ದೇಶದಿಂದ ನಂದಕುಮಾರ್ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗಬೇಕು ಎಂದು ಆಗ್ರಹಿಸಿ, ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್‌ನ‌ ಒಳ ರಾಜಕೀಯ ಮತ್ತು ನಾಯಕರ ಸ್ವಾರ್ಥದಿಂದಾಗಿ ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತ ಬಂದಿದೆ ಎಂದರು.

ತಾಲೂಕು ಪಂಚಾಯತ್ ಮಾಜಿ ಸದಸ್ಯ ಅಶೋಕ್ ನೆಕ್ರಾಜೆ ಮಾತನಾಡಿ, ನಾಯಕರ ಸ್ವಾರ್ಥದಿಂದಾಗಿ ಪಕ್ಷದ ಕಾರ್ಯಕರ್ತರು ಬಲಿ ಪಶು ಆಗಿದ್ದಾರೆ. ತನ್ನ ಸ್ವಂತ ಖರ್ಚಿನಿಂದ ಸಮಾಜಕ್ಕೆ ಸೇವೆ ಮಾಡಿದ ನಂದಕುಮಾರ್ ಅವರೇ ನಮ್ಮ ಅಭ್ಯರ್ಥಿ. ಅವರನ್ನೇ ಪಕ್ಷದ ಅಭ್ಯರ್ಥಿಯಾಗಿಸಬೇಕು ಎಂದು ಹೇಳಿದರು.

ಗ್ರಾಪಂ ಸದಸ್ಯೆ ಉಷಾ ಜಾಯ್, ಹಿರಿಯರಾದ ಬಾಲಕೃಷ್ಣ ಮರೀಲ್, ಅಬೂಬಕ್ಕರ್ ಅರಾಫ ಅಯ್ಯನಕಟ್ಟೆ, ಶಿವಣ್ಣ ಗೌಡ ಇಡ್ಯಾಡಿ ಮಾತನಾಡಿದರು. ಫೈಜಲ್ ಕಡಬ ಸ್ವಾಗತಿಸಿ, ಶಶಿಧರ ಎಂ.ಜೆ. ವಂದಿಸಿದರು. ಸಚಿನ್‌ರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಪ್ರಮುಖರಾದ ರವೀಂದ್ರ ಕುಮಾರ್ ರುದ್ರಪಾದ, ಸತ್ಯಕುಮಾರ್ ಆಡಿಂಜ, ಮುತ್ತಪ್ಪ ಪೂಜಾರಿ, ಸಿ.ಜೆ.ಸೈಮನ್, ವಿಜಯಕುಮಾರ್ ರೈ, ಉಷಾ ಅಂಚನ್, ಅನಿಲ್ ರೈ ಬೆಳ್ಳಾರೆ, ಜಗನ್ನಾಥ ಪೂಜಾರಿ ಪೆರುವಾಜೆ, ಭವಾನಿಶಂಕರ ಕಲ್ಮಡ್ಕ, ಚೇತನ್ ಕಜೆಗದ್ದೆ, ಲಕ್ಷ್ಮಣ್ ಬೊಳ್ಳಾಜೆ, ರಮೇಶ್ ಕೋಟೆ, ಲೋಕೇಶ್ ಅಕ್ರಿಕಟ್ಟೆ ಮತ್ತಿತರರು ಉಪಸ್ಥಿತರಿದ್ದರು. ಬೃಹತ್ ಸಮಾವೇಶದಲ್ಲಿ‌‌ ಒಂದೂವರೆ ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಸಭಾಂಗಣ ತುಂಬಿ ತುಳುಕಿದ್ದು ಕ್ಷೇತ್ರದಲ್ಲಿ ನಂದಕುಮಾರ್ ಪರ ಮತ್ತು ಅಪರೂಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಒಂದಾಗಿರುವುದಕ್ಕೆ ಸಾಕ್ಷಿ.

Supporters of H.M. Nandakumar, the Congress ticket aspirant from Sullia Assembly constituency in Dakshina Kannada, at a public meeting on Sunday decided to field him as an Independent candidate if the party refused to issue him the B form. The meeting at Nintikal, near Bellare, under the constituency, decided that the Congress should change the official candidature of G. Krishnappa within a week and declare Mr. Nandakumar as the official candidate in his place. If not Mr. Nandakumar will contest as an Independent candidate.