ಥಾಯ್ಲೆಂಡ್ ನಲ್ಲಿ ಸ್ಕೂಬಾ ಡೈವಿಂಗ್ ; ಮಂಗಳೂರಿನ ರೆಸ್ಟೋರೆಂಟ್ ಒಡತಿ ಸಾವು

11-04-23 09:21 pm       Mangalore Correspondent   ಕರಾವಳಿ

ಮಂಗಳೂರಿನಲ್ಲಿ ಹೊಸತಾಗಿ ಬೇಕಿಂಗ್ ಕಂಪನಿ ಹುಟ್ಟುಹಾಕಿ ಉದಯೋನ್ಮುಖ ಉದ್ಯಮಿಯಾಗಿ ಬೆಳವಣಿಗೆ ತೋರಿದ್ದ 26 ವರ್ಷದ ಯುವತಿ ಓಶಿನ್ ಪಿರೇರಾ(26) ಥಾಯ್ಲೆಂಡ್ ಪ್ರವಾಸ ಹೋಗಿದ್ದ ವೇಳೆ ಮೃತಪಟ್ಟಿದ್ದಾರೆ.

ಮಂಗಳೂರು, ಎ.11: ಮಂಗಳೂರಿನಲ್ಲಿ ಹೊಸತಾಗಿ ಬೇಕಿಂಗ್ ಕಂಪನಿ ಹುಟ್ಟುಹಾಕಿ ಉದಯೋನ್ಮುಖ ಉದ್ಯಮಿಯಾಗಿ ಬೆಳವಣಿಗೆ ತೋರಿದ್ದ 26 ವರ್ಷದ ಯುವತಿ ಓಶಿನ್ ಪಿರೇರಾ(26) ಥಾಯ್ಲೆಂಡ್ ಪ್ರವಾಸ ಹೋಗಿದ್ದ ವೇಳೆ ಮೃತಪಟ್ಟಿದ್ದಾರೆ.

ಕುಟುಂಬದ ಜೊತೆ ಥಾಯ್ಲೆಂಡಿಗೆ ಪ್ರವಾಸಕ್ಕಾಗಿ ತೆರಳಿದ್ದ ವೇಳೆ ಓಶಿನ್ ಪಿರೇರಾ ಸ್ಕೂಬಾ ಡೈವಿಂಗ್ ಮಾಡಲು ಹೋಗಿದ್ದಾರೆ. ಈ ವೇಳೆ, ಉಸಿರು ಕಟ್ಟಿ ಓಶಿನ್ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಕುಟುಂಬ ಮೂಲಗಳಿಂದ ಲಭ್ಯವಾಗಿದೆ. ಓಶಿನ್, ಮಂಗಳೂರು ನಗರದ ಗೋರಿಗುಡ್ಡದ ಮಾರ್ಟಿನ್ ಪಿರೇರಾ ಮತ್ತು ಆಲಿವ್ ಪಿರೇರಾ ದಂಪತಿಯ ಪುತ್ರಿಯಾಗಿದ್ದರು.

ಓಶಿನ್ ಬೇಸಗೆಯ ದಿನಗಳನ್ನು ಕಳೆಯಲು ಎರಡು ದಿನಗಳ ಹಿಂದಷ್ಟೇ ಆಕೆ ಥಾಯ್ಲೆಂಡ್ ತೆರಳಿದ್ದರು. ಪ್ರವಾಸದಲ್ಲಿರುವಾಗಲೇ ದುರಂತ ಸಾವು ಕಂಡಿದ್ದಾರೆ. ಓಶಿನ್ ಪಿರೇರಾ ಅವರು ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜು ಬಳಿ ಮಂಗಳೂರು ಬೇಕಿಂಗ್ ಕಂಪನಿ ಹೆಸರಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದರು.

Oshin Pereira (28), owner of Mangalore Baking Company passed away in Thailand on Tuesday April 11. Oshin is the daughter of Olivia and the late Oscar Pereira.