ನಿದ್ದೆ ಮಂಪರಲ್ಲಿ ಆಯತಪ್ಪಿ ಬಾವಿಗೆ ಬಿದ್ದು ಸಾವು ; ಬಾವಿ ಕಟ್ಟೆಯಲ್ಲಿ ಕುಳಿತಿದ್ದಾಗ ಅವಘಡ, ಸಿಸಿಟಿವಿಯಲ್ಲಿ ದಾಖಲು

16-04-23 12:29 pm       Mangalore Correspondent   ಕರಾವಳಿ

ಮನೆಯಂಗಳದ ಬಾವಿಯ ಕಟ್ಟೆಯಲ್ಲಿ ಕುಳಿತಿದ್ದ ವ್ಯಕ್ತಿಯೋರ್ವರು ನಿದ್ದೆಯ ಮಂಪರಿನಲ್ಲಿ ಆಯತಪ್ಪಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ಕಲ್ಲಾಪು ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ. 

ಉಳ್ಳಾಲ, ಎ.16 : ಮನೆಯಂಗಳದ ಬಾವಿಯ ಕಟ್ಟೆಯಲ್ಲಿ ಕುಳಿತಿದ್ದ ವ್ಯಕ್ತಿಯೋರ್ವರು ನಿದ್ದೆಯ ಮಂಪರಿನಲ್ಲಿ ಆಯತಪ್ಪಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ಕಲ್ಲಾಪು ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ. 

ಕಲ್ಲಾಪು ನಿವಾಸಿ ವಾಲ್ಟರ್ ಮೊಂತೆರೋ(65) ಮೃತ ದುರ್ದೈವಿ. ವಾಲ್ಟರ್ ಶನಿವಾರ ಸಂಜೆ ತೊಕ್ಕೊಟ್ಟಿನ ಚರ್ಚ್ ಗೆ ತೆರಳಿ ಪೂಜೆಯಲ್ಲಿ ಪಾಲ್ಗೊಂಡು ಮನೆಗೆ ಹಿಂದಿರುಗಿದ್ದರು. ರಾತ್ರಿ 7.23 ರ ಹೊತ್ತಿಗೆ ವಾಲ್ಟರ್ ಅವರು ಮನೆಯಂಗಳದ‌ ಬಾವಿಯ ಕಟ್ಟೆಯಲ್ಲಿ ನಿದ್ದೆಯ ಮಂಪರಲ್ಲಿ ಕುಳಿತಿದ್ದಾಗ ಹಠಾತ್ತಾಗಿ ಉರುಳಿ ಬಾವಿಯೊಳಗೆ ಬಿದ್ದಿದ್ದಾರೆ. 

ಕೂಡಲೇ ಮನೆ ಮಂದಿ ಆಳ ಇಲ್ಲದ ಬಾವಿಗೆ ಏಣಿ ಇಳಿಸಿ ವಾಲ್ಟರ್ ಅವರನ್ನ ಮೇಲಕ್ಕೆತ್ತಿದ್ದು ತಲೆಗೆ ಗಂಭೀರ ಗಾಯಗೊಂಡ ಪರಿಣಾಮ ಸಾವನ್ನಪ್ಪಿದ್ದಾರೆ. ಘಟನೆಯ ದೃಶ್ಯಾವಳಿ ಮನೆಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಮೃತರು ಪತ್ನಿ , ಇಬ್ಬರು ಗಂಡು ಮಕ್ಕಳನ್ನ ಅಗಲಿದ್ದಾರೆ.

Mangalore Man falls into open well in the house at Kallapu in Ullal. The deceased has been identified as Walter Monterio (66). It is said he was in sleepy eyes and fell off accidentally as he was sitting on the well.