ಬ್ರೇಕಿಂಗ್ ನ್ಯೂಸ್
04-11-20 12:57 pm Mangalore Correspondent ಕರಾವಳಿ
ಮಂಗಳೂರು, ನವೆಂಬರ್ 04: ಯಾವಾಗಿನ ರೀತಿ ಇರುತ್ತಿದ್ದರೆ ಈಗ ಕಂಬಳಕ್ಕೆ ಕೋಣಗಳು ರೆಡಿಯಾಗುತ್ತಿದ್ದವು. ಕಂಬಳ ಸಮಿತಿಯವರು ಕಂಬಳದ ವೇಳಾಪಟ್ಟಿಯನ್ನು ರೆಡಿ ಮಾಡುತ್ತಿದ್ದರು. ಆದರೆ, ಈ ಬಾರಿ ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳಕ್ಕೆ ಕೊರೊನಾ ಕರಿಛಾಯೆ ಆವರಿಸಿದೆ. ಈ ಬಾರಿ ಕಂಬಳ ಆಗುತ್ತೋ ಇಲ್ಲವೋ ಅನ್ನುವ ಕುತೂಹಲ, ನಿರೀಕ್ಷೆ ಜನರಲ್ಲಿದೆ.
ಈ ಬಗ್ಗೆ ಕಂಬಳ ಸಮಿತಿಯವರಲ್ಲಿ ಕೇಳಿದರೆ, ನಾವು ಕಂಬಳ ನಡೆಸಲು ರೆಡಿ ಇದ್ದೇವೆ. ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡೇ ಕಂಬಳ ಮಾಡುತ್ತೇವೆ. ಅದಕ್ಕೆ ಜಿಲ್ಲಾಡಳಿತ ಅವಕಾಶ ಮಾಡಬೇಕು ಎಂದು ಹೇಳುತ್ತಾರೆ. ಆದರೆ, ಜಿಲ್ಲಾಡಳಿತ ಕಂಬಳಕ್ಕೆ ಸದ್ಯದಲ್ಲಿ ಅವಕಾಶ ಕೊಡುವ ಹಾಗಿಲ್ಲ. ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಗೆ ಈಗ ಅವಕಾಶ ಕೊಡುತ್ತಿಲ್ಲ. ಕೆಲವು ಸಭೆ, ಸಮಾರಂಭಗಳಿಗೆ ಅವಕಾಶ ನೀಡಿದರೂ 150 ಜನಕ್ಕೆ ಮಾತ್ರ ಸೀಮಿತ ಎನ್ನುವ ನಿಯಮ ಹೇರಲಾಗುತ್ತಿದೆ. ಕಂಬಳಕ್ಕೆ ಹೋಲಿಸಿದರೆ, ಇದು ಸಾಧ್ಯವಿಲ್ಲ. ಸಾವಿರಾರು ಜನರು ಸೇರುವ ಕಾರಣ ಇಲ್ಲಿ ಕಂಬಳ ಅಭಿಮಾನಿಗಳು, ಸಾರ್ವಜನಿಕರು, ಕಂಬಳ ಕೋಣಗಳ ಜೊತೆ ಆಗಮಿಸುವವರು ಹೀಗೆ ಎಲ್ಲರೂ ಇರುತ್ತಾರೆ. ಹೀಗಾಗಿ ನವೆಂಬರ್ ವರೆಗೆ ಕೇಂದ್ರ ಸರಕಾರದ ನಿರ್ಬಂಧ ಇರುವುದರಿಂದ ಮುಂದಿನ ಆದೇಶದ ಬಗ್ಗೆ ಜಿಲ್ಲಾಡಳಿತ ಎದುರು ನೋಡುತ್ತಿದೆ.



ಡಿಸೆಂಬರ್ ವೇಳೆಗೆ, ಕೇಂದ್ರ ಸರಕಾರ ನಿರ್ಬಂಧ ಸಡಿಲಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಒಂದೆಡೆ ಕೊರೊನಾ ಸೋಂಕಿತರ ಸಂಖ್ಯೆ ತಗ್ಗುತ್ತಿರುವುದು ಮತ್ತು ಚೇತರಿಕೆ ಸಂಖ್ಯೆಯೂ ಹೆಚ್ಚುತ್ತಿರುವುದರಿಂದ ನಿರ್ಬಂಧ ಸಡಿಲಿಕೆ ಬಗ್ಗೆ ನವೆಂಬರ್ ಅಂತ್ಯಕ್ಕೆ ಕೇಂದ್ರ ಹೊಸ ಆದೇಶ ಹೊರಡಿಸುವ ನಿರೀಕ್ಷೆಯಿದೆ. ಅಲ್ಲದೆ, ಆಯಾಭಾಗದ ಜನಪದ ಪ್ರಕಾರಗಳು, ಉತ್ಸವಗಳಿಗೆ ಕೇಂದ್ರ ಸರಕಾರ ಈಗಲೇ ಅವಕಾಶ ಕೊಟ್ಟಿದೆ. ಈ ನೆಲೆಯಲ್ಲಿ ನೋಡಿದರೆ ಕಂಬಳಕ್ಕೂ ಅವಕಾಶ ಸಿಗುವ ಸಾಧ್ಯತೆ ಹೆಚ್ಚು.
ಈ ನಡುವೆ, ಕಂಬಳ ಸಮಿತಿಯವರು ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ಕಂಬಳಕ್ಕೆ ಅವಕಾಶ ಕೊಡುವಂತೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಉಸ್ತುವಾರಿ ಕೋಟ ಶ್ರೀನಿವಾಸ ಪೂಜಾರಿ ಕೂಡ, ಶೀಘ್ರದಲ್ಲೇ ಕಂಬಳ ಸಮಿತಿಯವರ ಜೊತೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ಡಿಸೆಂಬರ್ ಅಲ್ಲದಿದ್ದರೂ ಜನವರಿ ವೇಳೆಗೆ ಕಂಬಳಕ್ಕೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆಯಂತೂ ಪಕ್ಕಾ ಎನ್ನಲಾಗುತ್ತಿದೆ.
The spread of coronavirus has affected the staging of Mangalore Sporting event Kambala. Kambala lovers are anticipating for the dates to be announced.
26-10-25 07:33 pm
Bangalore Correspondent
ಪ್ರೀತಿ ನೆಪದಲ್ಲಿ ಹಿಂದು ಯುವತಿಗೆ ಮೋಸ ; ಮದುವೆಯಾಗಲ...
25-10-25 09:33 pm
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
"ಎ" ಖಾತೆ ಪರಿವರ್ತಿಸುವ ಸರ್ಕಾರದ ಬೋಗಸ್ ಸ್ಕೀಂ ;...
25-10-25 09:00 pm
ಸಿಎಂ ಬದಲಾವಣೆ ಹೇಳಿಕೆಯ ಬಗ್ಗೆ ಯತೀಂದ್ರನನ್ನು ಕೇಳ್ದ...
24-10-25 09:35 pm
26-10-25 11:01 pm
HK News Desk
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
27-10-25 07:24 pm
Mangalore Correspondent
ಹೈಕಮಾಂಡ್ ತೀರ್ಮಾನ ಮಾಡಿದ್ರೆ ಐದು ವರ್ಷ ಸಿಎಂ ಆಗಿರು...
27-10-25 05:56 pm
ಮನವಿ ಕೊಡಲು ಬಂದವರನ್ನು ತಡೆದ ಪೊಲೀಸರು, ಬೆಳ್ತಂಗಡಿ...
27-10-25 04:36 pm
11 ದಿನಗಳಿಂದ ಅರಬ್ಬೀ ಸಮುದ್ರದಲ್ಲಿ ಸಿಕ್ಕಿಬಿದ್ದಿದ್...
26-10-25 04:42 pm
ಮುಸ್ಲಿಂ ಮಹಿಳೆಯರಿಗೆ ಅವಮಾನ ಆರೋಪ ; ಆರೆಸ್ಸೆಸ್ ಮುಖ...
26-10-25 02:12 pm
27-10-25 05:29 pm
HK News Desk
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm
ಶಬರಿಮಲೆಯಲ್ಲಿ ಕದ್ದ ಚಿನ್ನ ಬಳ್ಳಾರಿ ಜುವೆಲ್ಲರಿಗೆ ಮ...
25-10-25 10:00 pm
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm