ಬ್ರೇಕಿಂಗ್ ನ್ಯೂಸ್
04-11-20 08:35 pm Mangaluru Correspondent ಕರಾವಳಿ
ಮಂಗಳೂರು, ನವೆಂಬರ್ 4: ಮಂಗಳೂರಿನಲ್ಲಿ ನಡೆಯಲಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ಸಿಎಂ ಯಡಿಯೂರಪ್ಪ ಮಂಗಳೂರಿಗೆ ಆಗಮಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಿ.ಎಸ್ ಯಡಿಯೂರಪ್ಪ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಬಿಜೆಪಿ ಪ್ರಮುಖರು ಬರಮಾಡಿಕೊಂಡರು.
ಈ ವೇಳೆ, ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ , ಸಿಎಂ ಬದಲಾವಣೆ ಕುರಿತ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಗರಂ ಆಗಿ ಮಾತನಾಡಿದ್ರು. ಸಿದ್ದರಾಮಯ್ಯನವರ ಹೇಳಿಕೆಗೆ ನಾನು ರಿಯಾಕ್ಷನ್ ನೀಡುತ್ತಿರಲಿಲ್ಲ. ಮಾಧ್ಯಮದವರು ಪ್ರಶ್ನಿಸಿದ್ದಕ್ಕಾಗಿ ಪ್ರತಿಕ್ರಿಯಿಸುತ್ತಿದ್ದೇನೆ. ಸಿದ್ದರಾಮಯ್ಯ ಇನ್ನಾದ್ರೂ ಬೇಜವಾಬ್ದಾರಿ ಹೇಳಿಕೆ ನಿಲ್ಲಿಸಬೇಕು. ದಿಲ್ಲಿಯಿಂದ ನನಗೆ ಸುದ್ದಿ ಬಂದಿದೆ ಅಂತ ಸುಳ್ಳು ಹೇಳುವುದನ್ನ ಸಿದ್ದರಾಮಯ್ಯ ಮೊದಲು ನಿಲ್ಲಿಸಬೇಕು ಎಂದು ಹೇಳಿದರು.


ನಾನು ಕೂಡ ಇದೇ ರೀತಿ ಹೇಳಿಕೆ ಮಾತನಾಡಬೇಕಾಗುತ್ತೆ. ನನಗೂ ದೆಹಲಿಯಿಂದ ಮಾಹಿತಿ ಬಂದಿದೆ ಅಂತ. ವಿಪಕ್ಷ ನಾಯಕ ಸ್ಥಾನದಿಂದ ಸಿದ್ದರಾಮಯ್ಯರನ್ನು ಬದಲಾಯಿಸುತ್ತಾರೆ ಅಂತ. ಇನ್ನಾದ್ರೂ ಜವಾಬ್ದಾರಿಯುತವಾಗಿ ಮಾತಾಡುವಂತೆ ಸಿದ್ದರಾಮಯ್ಯರಲ್ಲಿ ವಿನಂತಿ ಮಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.
ಶಿರಾ ಮತ್ತು ಆರ್.ಆರ್. ನಗರ ಕ್ಷೇತ್ರದ ಉಪ ಚುನಾವಣೆ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದಿದೆ. ಚುನಾವಣೆಯಲ್ಲಿ ನೂರಕ್ಕೆ ನೂರು ಕಾಂಗ್ರೆಸ್ ದಯನೀಯ ಸೋಲು ಅನುಭವಿಸಲಿದೆ. ಬೈ ಎಲೆಕ್ಷನ್, ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸೋಲನುಭವಿಸುತ್ತಾರೆ. ಎರಡೂ ಕಡೆಯಲ್ಲೂ ಬಿಜೆಪಿ ಗೆದ್ದೇ ಗೆಲ್ಲುತ್ತೆ. ಬಿಜೆಪಿ ಗೆದ್ಮೇಲೆ ಯಾರು ರಾಜೀನಾಮೆ ಕೊಡ್ಬೇಕಾಗುತ್ತೆ ಹೇಳಿ..? ಸಿದ್ದರಾಮಯ್ಯ ನೇತೃತ್ವದಲ್ಲಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸೋಲಾದರೆ, ಆವಾಗ ಕ್ರಮ ಆಗೋದು ಸಿದ್ದರಾಮಯ್ಯ ಮೇಲೋ ಅಥವಾ ಬೇರೆ ಯಾರಾದ್ರ ಮೇಲೋ ಎಂದು ಪ್ರಶ್ನೆ ಮಾಡಿದ್ರು.
Chief minister B S Yediyurappa arrived at Mangaluru International Airport on Wednesday, November 4. The CM reached on Wednesday evening to take part in the special executive meeting.
25-06-26 09:10 pm
HK News Staffer
ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರೀ ಕಳ್ಳಾಟ ! 19 ಸಾವಿರ...
24-06-26 05:55 pm
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
25-06-26 10:56 pm
HK News Staffer
Mangalore Drugs, Police: ಒಂದು ವರ್ಷದಲ್ಲಿ 400 ಡ...
25-06-26 10:48 pm
ಸಂಪುಟ ವಿಸ್ತರಣೆ ವಿಳಂಬ ; ಪ್ರಕೃತಿ ವಿಕೋಪ ಮೇಲುಸ್ತು...
25-06-26 02:39 pm
ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಧನ; ‘ಸಮಾಜ ಕಳೆ...
23-06-26 06:02 pm
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
25-06-26 09:40 pm
HK News Staffer
ಮಂಡ್ಯದಲ್ಲಿ ಸೆಲ್ಫಿ ಹುಚ್ಚಿಗೆ ಐವರ ಬಲಿ ; ಕಾವೇರಿ ನ...
25-06-26 01:00 pm
ಹಸೆಮಣೆ ಏರಬೇಕಿದ್ದವಳೇ ಭಾವಿ ಪತಿಯನ್ನು ಫೋಟೊ ಶೂಟ್ ನ...
24-06-26 09:28 pm
30 ಲಕ್ಷ ಸಾಲ, ಲಿವ್-ಇನ್ ಸಂಬಂಧಕ್ಕೆ ಪೋಷಕರ ವಿರೋಧ ;...
24-06-26 08:53 pm
ರಾಮ ಮಂದಿರವನ್ನ ಸ್ಫೋಟಿಸಲು ಪ್ಲಾನ್ ಮಾಡಿದ್ವಿ ! ;...
24-06-26 07:53 pm