ಬ್ರೇಕಿಂಗ್ ನ್ಯೂಸ್
07-11-20 10:07 am Udupi Correspondent ಕರಾವಳಿ
ಉಡುಪಿ, ನವೆಂಬರ್ 7: ಯಕ್ಷಗಾನ ಕ್ಷೇತ್ರದಲ್ಲಿ ಸಾಮಗ ಶೈಲಿ ಅಂತಲೇ ಹೆಸರು ಮಾಡಿದ್ದ ಹಿರಿಯ ಯಕ್ಷಗಾನ ಕಲಾವಿದ ವಾಸುದೇವ ಸಾಮಗ (71) ಶನಿವಾರ ನಸುಕಿನಲ್ಲಿ ನಿಧನರಾಗಿದ್ದಾರೆ.
ಯಕ್ಷಗಾನದಲ್ಲಿ ಅಪೂರ್ವ ಸಾಧನೆ ಮಾಡಿದ್ದ ಮಲ್ಪೆ ರಾಮದಾಸ ಸಾಮಗರ ಮಗನಾದ ವಾಸುದೇವ ಸಾಮಗ ಕುಂದಾಪುರದ ಕೋಟೇಶ್ವರದಲ್ಲಿ ನೆಲೆಸಿದ್ದರು. ಕೆಲದಿನಗಳ ಅನಾರೋಗ್ಯದ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಉಡುಪಿಯಲ್ಲಿದ್ದುಕೊಂಡೇ ತೆಂಕು ಮತ್ತು ಬಡಗು ಎರಡೂ ತಿಟ್ಟುಗಳಲ್ಲಿ ತಿರುಗಾಟ ಮಾಡಿ, ಸವ್ಯಸಾಚಿ ಎನಿಸಿಕೊಂಡಿದ್ದ ಅಪರೂಪದ ಕಲಾವಿದ ವಾಸುದೇವ ಸಾಮಗರು. ಮೊದಲಿಗೆ, ಧರ್ಮಸ್ಥಳ, ಕದ್ರಿ, ಕರ್ನಾಟಕ ಮೇಳದಲ್ಲಿ ಬಣ್ಣ ಹಚ್ಚಿದ್ದ ಸಾಮಗರು, ಆಬಳಿಕ ತನ್ನ ಇಳಿ ವಯಸ್ಸಿನಲ್ಲಿ ಸಾಲಿಗ್ರಾಮ ಮೇಳದಲ್ಲಿ ತಿರುಗಾಟ ನಡೆಸಿದ್ದಲ್ಲದೆ ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ ಜಿಲ್ಲೆಯ ಭಾಗದಲ್ಲಿ ಭಾರೀ ಜನಮನ್ನಣೆ ಗಳಿಸಿದ್ದರು. ಈ ನಡುವೆ, ಕರಾವಳಿಯ ನಾಲ್ಕೂ ಜಿಲ್ಲೆ ಸೇರಿದಂತೆ ವಿವಿಧೆಡೆಗಳಲ್ಲಿ ನಡೆಯುತ್ತಿದ್ದ ತಾಳಮದ್ದಲೆಗಳಲ್ಲಿ ಪಾಲ್ಗೊಂಡು ಶೇಣಿ, ಸುಂದರರಾಯರ ಬಳಿಕ ಹೊಸ ಅಭಿಮಾನಿ ಸಮೂಹವನ್ನು ಸೃಷ್ಟಿಸಿದ್ದವರು ವಾಸುದೇವ ಸಾಮಗರು. ನವ ರಸಗಳನ್ನು ವೇಷದಲ್ಲಿ ತೋರುತ್ತಿದ್ದರೆ ತಾಳಮದ್ದಲೆಯಲ್ಲೂ ದುಃಖ, ವೀರ, ರೌದ್ರ ರಸದ ಸನ್ನಿವೇಶಗಳನ್ನು ಕೇಳುಗನ ಮನ ತಟ್ಟುವಂತೆ ಕಟ್ಟಿಕೊಡುತ್ತಿದ್ದ ಅಪರೂಪದ ಕಲಾವಿದ ಸಾಮಗರು. ಮರೆಯಾದ ರಾಮದಾಸ ಸಾಮಗರ ಜಾಗವನ್ನು ಸಮರ್ಥವಾಗಿ ನಿಭಾಯಿಸಿದ್ದರೆಂಬ ಮಾತೂ ಕೇಳಿಬಂದಿತ್ತು.
ಈ ನಡುವೆ, ಸಂಯಮ ಸಂಸ್ಥೆ ಹುಟ್ಟುಹಾಕಿ ತಾಳಮದ್ದಳೆಗೆ ಹೊಸ ಆಯಾಮ ನೀಡಲು ಶ್ರಮಿಸಿದ್ದರು. ಎಲ್ಲೇ ಆಗಲಿ, ತಾಳಮದ್ದಲೆಯಲ್ಲಿ ಸಾಮಗರು ಇದ್ದಾರೆಂದರೆ ಜನರು ಹುಡುಕಿಕೊಂಡು ಬರುತ್ತಿದ್ದ ಸನ್ನಿವೇಶಗಳಿರುತ್ತಿದ್ದವು.
ತಂದೆ ರಾಮದಾಸ ಸಾಮಗರಿಂದ ಬಳುವಳಿಯಾಗಿ ಬಂದಿದ್ದ ಕಲಾಪ್ರೌಢಿಮೆಗೆ ನಾರಣಪ್ಪ ಉಪ್ಪೂರರು ನೀರೆರೆದು ಪೋಷಿಸಿದ್ದರು. ಅವರ ಒಡನಾಡದಲ್ಲಿ ಸಾಮಗರು ಪರಿಪೂರ್ಣ ಕಲಾವಿದರಾಗಿ ಹೊರಹೊಮ್ಮಿದ್ದರು ಎನ್ನುತ್ತಾರೆ, ಅವರ ನಿಕಟವರ್ತಿಗಳು. ಯಕ್ಷಗಾನ ಪ್ರಸಂಗಗಳಲ್ಲಿ ಸಾಮಾನ್ಯವಾಗಿ ನಾಯಕ ಅಥವಾ ಪ್ರತಿನಾಯಕ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಇವರು, ಯಾವುದೇ ಪಾತ್ರ ನಿರ್ವಹಿಸಿದರೂ ಆ ಪಾತ್ರಕ್ಕೊಂದು ಹೊಸ ಆಕರ್ಷಣೆ ಸೃಷ್ಟಿಸುತ್ತಿದ್ದರು. ವಿಭಿನ್ನ ನಿಲುವಿನ ದಶರಥ, ದೇವವ್ರತ, ಭೀಷ್ಮ, ಕಂಸ, ಕೃಷ್ಣ, ರುಕ್ಮಾಂಗದ- ಮೋಹಿನಿ, ಅಂಬೆ-ಪರಶುರಾಮ, ಮಂಥರೆ, ಶನಿ ಮಹಾತ್ಮೆ ಪ್ರಸಂಗದಲ್ಲಿ ವಿಕ್ರಮಾದಿತ್ಯ, ಹರಿಶ್ಚಂದ್ರನ ಪಾತ್ರಗಳು ಕೇಳುಗನಲ್ಲಿ ರೋಮಾಂಚನ ಸೃಷ್ಟಿಸುತ್ತಿದ್ದವು.
Doyen of Yakshagana Malpe Vasudeva Samaga passed away in the early hours of Saturday 07, Nov 2020.
14-07-25 10:44 pm
Bangalore Correspondent
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 09:55 pm
Mangalore Correspondent
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm