ಬ್ರೇಕಿಂಗ್ ನ್ಯೂಸ್
03-10-23 11:13 pm Mangalore Correspondent ಕರಾವಳಿ
ಮಂಗಳೂರು, ಅ.3: ನಗರದ ಕೆಪಿಟಿ ಮತ್ತು ನಂತೂರು ವೃತ್ತದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ -66ರಲ್ಲಿ ಎರಡೂ ಕಡೆ ಉಂಟಾಗುವ ವಾಹನ ದಟ್ಟಣೆಯನ್ನು ನಿಭಾಯಿಸಲು ಹೊಸತಾಗಿ ಫ್ಲೈಓವರ್ ನಿರ್ಮಾಣಕ್ಕೆ ಹೆದ್ದಾರಿ ಅಧಿಕಾರಿಗಳು ಮುಂದಾಗಿದ್ದಾರೆ. ಎನ್ಎಂಪಿಟಿ ಬಂದರು ಇಲಾಖೆಯ ಟ್ರಸ್ಟ್ ನಡಿ ಈ ಫ್ಲೈಓವರ್ ನಿರ್ಮಿಸಲು ಹುಬ್ಬಳ್ಳಿ ಮತ್ತು ಧಾರವಾಡ ಮೂಲದ ಕಂಪನಿಗಳಿಗೆ ಟೆಂಡರ್ ನೀಡಲಾಗಿದೆ.
ತರಾತುರಿಯಲ್ಲಿ ಪ್ರಾಜೆಕ್ಟ್ ರಿಪೋರ್ಟ್ ತಯಾರಿಸಿ ಎರಡೂ ಕಡೆ ಪ್ರತ್ಯೇಕ ಫ್ಲೈಓವರ್ ನಿರ್ಮಾಣಕ್ಕೆ ಟೆಂಡರ್ ಒಪ್ಪಿಗೆ ಸಿಕ್ಕಿದೆ. ವಾಸ್ತವ ಏನಂದ್ರೆ, ಇದು ಯಾವ ರೀತಿಯ ಪ್ರಾಜೆಕ್ಟ್ ಅನ್ನುವ ಬಗ್ಗೆ ಹೆದ್ದಾರಿ ಅಧಿಕಾರಿಗಳಲ್ಲಿಯೇ ಮಾಹಿತಿ ಇಲ್ಲ. ಹೆದ್ದಾರಿಯ ಇಕ್ಕೆಲಗಳಲ್ಲಿ 600ಕ್ಕೂ ಹೆಚ್ಚು ಮರಗಳಿದ್ದು ಅವುಗಳ ಪೈಕಿ 370 ಮರಗಳನ್ನು ತೆರವುಗೊಳಿಸಲು ಮತ್ತು ಉಳಿದವನ್ನು ಕಡಿದು ತೆರವು ಮಾಡಲು ಅರಣ್ಯ ಇಲಾಖೆಯೂ ಒಪ್ಪಿಗೆ ನೀಡಿದೆ. ಆದರೆ ಅಧಿಕಾರಿಗಳು ಸಣ್ಣ ರೀತಿಯ ಮರಗಳನ್ನು ತೆರವು ಮಾಡುವ ಬದಲು ಬುಡದಿಂದಲೇ ಕತ್ತರಿಸಲು ಮುಂದಾಗಿದ್ದಾರೆ.
ಈ ಬಗ್ಗೆ ಪರಿಸರ ಪ್ರಿಯರಿಂದ ವಿರೋಧ ವ್ಯಕ್ತವಾಗಿದ್ದು ಮಂಗಳವಾರ ಬೆಳಗ್ಗೆ ಮರಗಳನ್ನು ಕಡಿಯುವುದು ತಿಳಿಯುತ್ತಲೇ ಸ್ಥಳಕ್ಕಾಗಮಿಸಿ ಅಡ್ಡಹಾಕಿದ್ದಾರೆ. ಹೆದ್ದಾರಿ ಅಧಿಕಾರಿಗಳು ಮಾತ್ರ ನೀವು ಯಾರ್ರೀ.. ನಮಗೆ ಆರ್ಡರ್ ಆಗಿದೆ, ಮರ ಕಡಿಯೋಕೆ ಎಂದು ಪರಿಸರದ ಪರ ವಾದಿಸಿದ್ದಕ್ಕೆ ಮೇಲೇರಿ ಬಂದಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಬಂದಿದ್ದು, ಜಿಲ್ಲಾಧಿಕಾರಿಗಳೇ ಮರ ಕಡಿಯುವುದಕ್ಕೆ ಸದ್ಯಕ್ಕೆ ತಡೆ ಹಾಕಿದ್ದಾರೆ. ಸ್ಥಳದಲ್ಲೇ ಮರಗಳನ್ನು ಮಲಗಿಸಿ, ಅದರ ಮೇಲೆ ಬಿಳಿ ಬಟ್ಟೆ ಹಾಸಿ ಶವದ ರೀತಿ ಮಾಡಿ ಪ್ರತಿಭಟನೆ ಮಾಡಿದ್ದಾರೆ.
ಪರಿಸರ ಹೋರಾಟಗಾರ ಜೀತ್ ಮಿಲನ್ ಹೇಳುವ ಪ್ರಕಾರ, ಕೆಪಿಟಿ ಮತ್ತು ನಂತೂರಿನಲ್ಲಿ ಪ್ರತ್ಯೇಕ ಫ್ಲೈಓವರ್ ಮಾಡಿದರೆ, ಇಲ್ಲಿನ ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಯಲ್ಲ. ಕೆಪಿಟಿಯ ಬದಲು ಪದವು ಸ್ಕೂಲ್ ಬಳಿ ಮತ್ತಷ್ಟು ಸಮಸ್ಯೆ ಆಗುತ್ತದೆ. ಈಗಾಗಲೇ ಕುಳೂರು, ಕೊಟ್ಟಾರ, ಬಿಕರ್ನಕಟ್ಟೆ, ಬಿಸಿ ರೋಡ್ ಹೀಗೆ ಇವರು ಎಲ್ಲೆಲ್ಲಿ ಫ್ಲೈಓವರ್ ಮಾಡಿದ್ದಾರೋ, ಅಲ್ಲೆಲ್ಲ ದೊಡ್ಡ ಬ್ಲಂಡರ್ ಆಗಿದೆ. ವನ್ ವೇ ಫ್ಲೈಓವರ್ ಮಾಡಿದ್ದಲ್ಲದೆ, ಅನಗತ್ಯವಾಗಿ ದುಂದುವೆಚ್ಚ ಮಾಡಿದ್ದಾರೆ. ನಂತೂರಿನಲ್ಲಿ ಮಾಡುವ ಬದಲು ಬಿಕರ್ನಕಟ್ಟೆಯಲ್ಲಿ ಫ್ಲೈಓವರ್ ಮಾಡಿದ್ದಾರೆ. ಜನರ ದುಡ್ಡನ್ನು ಪೋಲು ಮಾಡುತ್ತಾರೆ. ಈಗ ಕೆಪಿಟಿ ಮತ್ತು ನಂತೂರಿನಲ್ಲೂ ಅಂತಹದ್ದೇ ಮತ್ತೊಂದು ಬ್ಲಂಡರ್ ಮಾಡುತ್ತಾರೆ, ಪ್ರಾಜೆಕ್ಟ್ ಪ್ಲಾನ್ ಕೇಳಿದರೆ ಅಧಿಕಾರಿಗಳು ಕೊಡುವುದಿಲ್ಲ.
ಇವರೀಗ ನಾವು ಹತ್ತು ವರ್ಷಗಳ ಹಿಂದೆ ನೆಟ್ಟು ಬೆಳೆಸಿದ ಮರಗಳನ್ನು ಕಡಿಯುತ್ತಿದ್ದಾರೆ. ಈ ಮರಗಳಿಗೆ ನಾವೇ ನೀರು ಹಾಕಿ ಬೆಳೆಸಿದ್ದು. ಇವರು ಕಡಿದು ಹಾಕಲು ಒಂದು ಕ್ಷಣ ಸಾಕಾಗುತ್ತದೆ. ಹೆದ್ದಾರಿ ಇಲಾಖೆಯವರು ಮರ ಕಡಿಯಲು ಅರಣ್ಯ ಇಲಾಖೆಗೆ 58 ಲಕ್ಷ ಕೊಟ್ಟಿದ್ದಾರೆ. ನಾವು ಬೆಳೆಸಿದ ಮರಗಳನ್ನು ಅರಣ್ಯ ಇಲಾಖೆಯವರು ಹಣಕ್ಕಾಗಿ ಮಾರುತ್ತಿದ್ದಾರೆ. ಆದರೂ ಇವರು ಒಂದೊಳ್ಳೆ ಕೆಲಸ ಮಾಡಲ್ಲ. ಜನರನ್ನು ಮತ್ತೆ ಬಲಿಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2017ರಿಂದ 2022ರ ವರೆಗೆ ಮಂಗಳೂರಿನಲ್ಲಿ ರಸ್ತೆಯ ಎಡವಟ್ಟಿನಿಂದಾಗಿ 3477 ಮಂದಿ ಗಂಭೀರ ಗಾಯಗೊಂಡು ಕೈಕಾಲು ಊನಗೊಂಡು ಮೂಲೆಗೆ ಬಿದ್ದಿದ್ದರೆ, 845 ಮಂದಿ ಸಾವು ಕಂಡಿದ್ದಾರೆ. ಇದಕ್ಕೆಲ್ಲ ಇಲ್ಲಿನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೇ ಕಾರಣ. ಪಶ್ಚಿಮ ಘಟ್ಟದಲ್ಲಿ ಮರಗಳನ್ನು ಕಡಿದ ಕಾರಣ ಈಗ ಕರಾವಳಿಗೆ ಮಳೆಯೇ ಇಲ್ಲವಾಗಿದೆ. ಈಗ ನಗರ ಭಾಗದಲ್ಲಿ ಅಳಿದುಳಿದ ಮರಗಳನ್ನೂ ಕಡಿದಲ್ಲಿ ಮುಂದೆ ಕುಡಿಯುವುದಕ್ಕೇ ನೀರು ಇರೋದಿಲ್ಲ. ಸೇವನೆಗೆ ಉತ್ತಮ ಗಾಳಿಯೂ ಸಿಗಲಾರದು. ಮರದ ಅವಶ್ಯಕತೆ ಆಗಲೇ ಅರಿವಾಗುತ್ತದೆ. ನಾವು ಅಭಿವೃದ್ಧಿ ವಿರೋಧಿಯಲ್ಲ. ಇವರು ಒಳ್ಳೆದಾಗಿ ರಸ್ತೆ ಮಾಡಲಿ. ದುಡ್ಡು ಹೊಡೆಯುವುದಕ್ಕಾಗಿ ಬೇಕಾಬಿಟ್ಟಿ ರಸ್ತೆ ಮಾಡಿ ಜನರನ್ನು ಸಾಯಿಸಬೇಡಿ ಎಂದು ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ಆಕ್ರೋಶ ತೋಡಿಕೊಂಡಿದ್ದಾರೆ. ಸಮಾಜ ಕಾರ್ಯ ಓದುವ ವಿದ್ಯಾರ್ಥಿಗಳು ಸೇರಿದಂತೆ ಪರಿಸರ ಪ್ರಿಯರು ಉಪಸ್ಥಿತರಿದ್ದರು.
Trees Axed For Highway Expansion at Nantoor in Mangalore, Dinesb Holla and environmentlist protest placing dead body.
24-05-25 07:45 pm
HK News Desk
Landslide Threat Returns in Shirur, Danger Zo...
24-05-25 06:04 pm
Hassan Marriage, wedding: ತಾಳಿ ಕಟ್ಟುವ ಸಮಯಕ್ಕೆ...
24-05-25 03:19 pm
ನವೆಂಬರ್ ವೇಳೆಗೆ ಜಿಪಂ, ತಾಪಂ ಚುನಾವಣೆ ಸಾಧ್ಯತೆ ; ರ...
23-05-25 02:35 pm
ಹಾಸನ ಜಿಲ್ಲೆಯಲ್ಲಿ ಮತ್ತೊಬ್ಬ ಮಹಿಳೆಯನ್ನು ತುಳಿದು ಸ...
23-05-25 11:54 am
23-05-25 08:08 pm
HK News Desk
ಭಾರತೀಯ ಹೈಕಮಷಿನ್ ಅಧಿಕಾರಿಗೆ ಗೇಟ್ ಪಾಸ್, 24 ಗಂಟೆಯ...
22-05-25 05:53 pm
ವಿದೇಶಕ್ಕೆ ಹೊರಟ ಸರ್ವಪಕ್ಷಗಳ ಏಳು ನಿಯೋಗ ; ಭಾರತದ ಸ...
22-05-25 05:43 pm
ಸಿಂಧು ಜಲ ಒಪ್ಪಂದ ಮರು ಪರಿಶೀಲಿಸಲು ಭಾರತ ಉತ್ಸುಕ ;...
21-05-25 12:57 pm
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
24-05-25 04:29 pm
Mangalore Correspondent
Mangalore Accident, Kolya: ಬೈಕ್ ಸ್ಕಿಡ್ ಆಗಿ ಸವ...
24-05-25 12:41 pm
Mangalore Lokayukta Raid, Pilikula: ಪಿಲಿಕುಳ ನ...
23-05-25 10:46 pm
Bantwal Heart Attack, Mangalore: ಪತ್ನಿಯ ಸೀಮಂತ...
23-05-25 06:04 pm
Mangalore Suhas Shetty, Nandan Mallya, BJP: ಸ...
23-05-25 05:38 pm
23-05-25 11:20 pm
Mangalore Correspondent
ಬಾಬ್ರಿ ಮಸೀದಿಗೆ ಪ್ರತೀಕಾರ, ಭಾರತದ ವಿರುದ್ಧ ದಾಳಿಗ...
23-05-25 01:25 pm
Valachil Murder, Mangalore crime: ಮದುವೆ ಸಂಬಂಧ...
23-05-25 10:02 am
Davangere Doctor, Stock Market Fraud: ಷೇರು ಮಾ...
22-05-25 02:22 pm
Mangalore Fraud, Currency trading scam: ಕರೆನ್...
19-05-25 09:38 pm