ಬ್ರೇಕಿಂಗ್ ನ್ಯೂಸ್
12-11-20 01:02 pm Mangalore Correspondent ಕರಾವಳಿ
ಮಂಗಳೂರು, ನವೆಂಬರ್ 12: ಬೆಂಗಳೂರಿನ ಕೆಜೆ ಹಳ್ಳಿ, ಡಿಜೆ ಹಳ್ಳಿಯ ಗಲಭೆಯಲ್ಲಿ ಪ್ರಮುಖ ಆರೋಪಿಯೆಂದು ಗುರುತಿಸಲ್ಪಟ್ಟಿರುವ ಮಾಜಿ ಮೇಯರ್ ಸಂಪತ್ ರಾಜ್ ನನ್ನು ಕಾಂಗ್ರೆಸ್ ಅಧ್ಯಕ್ಷರು ಅಡಗಿಸಿಟ್ಟಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ.
ನಳಿನ್ ಕುಮಾರ್ ಹಾಗೆ ಹೇಳುವುದಕ್ಕೇನು ಆತ ಹೋಮ್ ಮಿನಿಸ್ಟರಾ.. ಅಡಗಿಸಿಟ್ಟಿದ್ದರೆ ನನ್ನನ್ನು ಅರೆಸ್ಟ್ ಮಾಡಿಸಲಿ. ಯಾಕೆ ಅರೆಸ್ಟ್ ಮಾಡಲ್ಲಾ ಎಂದು ನಳಿನ್ ಕುಮಾರ್ ಬಗ್ಗೆ ಡಿಕೆಶಿ ಹರಿಹಾಯ್ದಿದ್ದಾರೆ. ಇವರು ಏನೆಲ್ಲಾ ಕಸರತ್ತು ಮಾಡುತ್ತಿದ್ದಾರೆ ಎನ್ನುವ ಮಾಹಿತಿ ನನಗೂ ಇದೆ. ಏನೆಲ್ಲಾ ನೋಟೀಸ್ ಗಳು ಬರ್ತಾ ಇವೆ, ಇದೂ ಒಂದಿರಲಿ. ಏನೆಲ್ಲಾ ತೊಂದರೆಗಳನ್ನು ಕೊಡಲು ಇವರು ಯೋಜನೆ ಹಾಕುತ್ತಿದ್ದಾರೆ, ಅದೂ ಗೊತ್ತಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇನ್ನು ನಳಿನ್ ಕುಮಾರ್, ಹತ್ತು ವರ್ಷ ಕಾಂಗ್ರೆಸ್ ಬರಲ್ಲ, ಬಿಜೆಪಿಯೇ ಆಡಳಿತ ನಡೆಸಲಿದೆ ಎಂದಿದ್ದಾರಲ್ಲಾ ಎಂಬ ಪ್ರಶ್ನೆಗೆ ಹತ್ತು ವರ್ಷ ಯಾಕೆ, ನಳಿನ್ ಜೀವಂತ ಇರೋ ವರೆಗೂ ಅಧಿಕಾರದಲ್ಲೇ ಇರಲಿ, ಯಾಕೆ ಬೇಡ ಅನ್ನೋದು ಎಂದು ಕುಟುಕಿದ್ದಾರೆ.
ಇನ್ನು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಬಗ್ಗೆ ಅಧ್ಯಯನ ನಡೆಸುತ್ತೇವೆ. ಸೋಲು ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ. ಆದರೆ, ಸೋಲಿನ ಅಂತರದ ಬಗ್ಗೆ ನಮ್ಮನ್ನು ಅನುಮಾನ ಕಾಡುವಂತಾಗಿದೆ. ಜನ ಮತ ಹಾಕಿದ್ದಾರೆ, ಆದರೆ ಆರ್.ಆರ್. ನಗರದಲ್ಲಿ 50 ಸಾವಿರಕ್ಕಿಂತಲೂ ಹೆಚ್ಚು ಅಂತರ ಕಾಣಿಸಿದ್ದು ಸಂಶಯಕ್ಕೆ ಕಾರಣವಾಗಿದೆ. ಹಣ ಹಂಚಿಕೆ ಇನ್ನೂ ಏನೇನು ಮ್ಯಾಜಿಕ್ ಆಗಿದೆ ಅನ್ನೋದು ಗೊತ್ತು. ಆದರೆ, ಮತಗಳ ಅಂತರಕ್ಕೆ ಬೇರೇನು ಕಾರಣಗಳಿವೆ ಅನ್ನೋದ್ರ ಬಗ್ಗೆ ಸಮಗ್ರ ಅಧ್ಯಯನ ನಡೆಸುತ್ತೇವೆ. ಇವಿಎಂ ಮೆಷಿನ್ ಗಳ ಬಗ್ಗೆಯೂ ಸಂಶಯ ಕೇಳಿಬಂದಿದೆ. ಇದರ ಬಗ್ಗೆ ಪ್ರತ್ಯೇಕ ತಂಡದಿಂದ ಅಧ್ಯಯನ ಮಾಡುತ್ತೇವೆ ಎಂದಿದ್ದಾರೆ.
ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಕೆಲವು ಜಿಲ್ಲಾ ಕಾಂಗ್ರೆಸ್ ನಲ್ಲಿ ಅಧ್ಯಕ್ಷರನ್ನು ಮತ್ತು ಪದಾಧಿಕಾರಿಗಳನ್ನು ಬದಲಾಯಿಸಬೇಕೆಂದು ನಿರ್ಧರಿಸಿದ್ದೇವೆ. ಯಾರ್ಯಾರು ಏಕ್ಟಿವ್ ಆಗಿಲ್ಲ ಅಂಥವರನ್ನು ಬದಲಾಯಿಸುತ್ತೇವೆ. ಮಂಗಳೂರಿನಲ್ಲಿ ಜಿಲ್ಲಾಧ್ಯಕ್ಷರು ಏಕ್ಟಿವ್ ಆಗಿದ್ದಾರೆ ಎಂದರು. ಖಾಸಗಿ ಕಾರ್ಯಕ್ರಮ ನಿಮಿತ್ತ ಮಂಗಳೂರಿಗೆ ಆಗಮಿಸಿದ್ದ ಡಿಕೆ ಶಿವಕುಮಾರ್, ಸುದ್ದಿಗಾರರ ಜೊತೆ ಮಾತನಾಡಿದ್ದಾರೆ.
Video:
D K Shivakumar slammed at Naleen Kumar Kateel in Mangalore over stating that he has concealed Sampath Kumar. He questioned if Naleen is Home Minister of Karnataka.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm