ಬ್ರೇಕಿಂಗ್ ನ್ಯೂಸ್
15-11-20 11:43 am Mangaluru Correspondent ಕರಾವಳಿ
ಮಂಗಳೂರು, ನವೆಂಬರ್ 15: ಡೆಲಿವರಿ ಕೆಲಸ ಮಾಡುತ್ತಿದ್ದ ಯುವಕನನ್ನು ಅಡ್ಡಗಟ್ಟಿ ತಲೆಗೆ ಹೊಡೆದು ಹಲ್ಲೆಗೈದು ಆತನ ಕೈಯಲ್ಲಿದ್ದ 15 ಸಾವಿರ ಹಣ ದರೋಡೆಗೈದ ಘಟನೆ ನಡೆದಿದ್ದು ಮಂಗಳೂರಿನ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದ ಕುಲಶೇಖರ ನಿವಾಸಿ ಮಂಜುನಾಥ (24) ಆಸ್ಪತ್ರೆಗೆ ದಾಖಲಾಗಿದ್ದಾನೆ. ರಾತ್ರಿ 11 ಗಂಟೆ ವೇಳೆಗೆ ಕುದ್ರೋಳಿಯಲ್ಲಿ ಘಟನೆ ನಡೆದಿದೆ. ಕಂಕನಾಡಿಯ ಸಿಟಿ ಗೋಲ್ಡ್ ಬಳಿಯ ಬಿಲ್ಡಿಂಗ್ ನಲ್ಲಿ ಹುಟ್ಟುಹಬ್ಬದ ಪ್ರಯುಕ್ತ ಕೇಕ್ ಮತ್ತು ಹೂವಿನ ಬುಕ್ಕೆ ಆರ್ಡರ್ ಇತ್ತು. ಅದರಂತೆ ಮಂಜುನಾಥ್, ಕುದ್ರೋಳಿಯಿಂದ ಕೇಕ್ ಮತ್ತು ಹೂವಿನ ಬುಕ್ಕೆ ಪಡೆದು ಸ್ಕೂಟರಿನಲ್ಲಿ ಬರುತ್ತಿದ್ದಾಗ ಕುದ್ರೋಳಿ ಮಸೀದಿ ಬಳಿ, ಇರ್ಫಾನ್ ಅಳಕೆ ಮತ್ತು ಫಹಾದ್ ಕುದ್ರೋಳಿ ಎಂಬ ಇಬ್ಬರು ಯುವಕರು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ತಲೆಗೆ ಸೋಡಾ ಬಾಟಲಿಯಿಂದ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಮುಂದಕ್ಕೆ ಈ ಕಡೆಗೆ ಬಂದರೆ ಜೀವ ಸಹಿತ ಬಿಡಲ್ಲ ಎಂದು ನೆಲಕ್ಕೆ ಹಾಕಿ ಕಾಲಿನಲ್ಲಿ ತುಳಿದಿದ್ದಾರೆ. ಇದರಿಂದ ಬೆದರಿದ ಮಂಜುನಾಥ್, ಸ್ಕೂಟರನ್ನು ಬಿಟ್ಟು ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದಾನೆ. ಗ್ರಾಹಕರಿಂದ ಪಡೆದಿದ್ದ 15 ಸಾವಿರ ಹಣ ಸ್ಕೂಟರಿನಲ್ಲಿತ್ತು. ಅದನ್ನು ಆರೋಪಿಗಳು ಕಿತ್ತುಕೊಂಡಿದ್ದಾರೆ ಎಂದು ಬಂದರು ಠಾಣೆಯಲ್ಲಿ ಮಂಜುನಾಥ್ ದೂರು ನೀಡಿದ್ದು ಎಫ್ಐಆರ್ ದಾಖಲಾಗಿದೆ.
ನ.6ರಂದು ಘಟನೆ ನಡೆದರೂ, ಪೊಲೀಸರು ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ ಎಂದು ಮಂಜುನಾಥ್ ದೂರಿದ್ದಾನೆ. ರಾತ್ರಿ ವೇಳೆ ಯುವಕನ ಅಡ್ಡಗಟ್ಟಿ ದರೋಡೆ ನಡೆಸಿದ್ರೂ ಆರೋಪಿಗಳ ಗುರುತು ಹೇಳಿದ್ದರೂ ಪೊಲೀಸರು ಬಂಧಿಸದೆ ಮೀನ ಮೇಷ ಎಣಿಸುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ.
Miscreants attack Delivery boy with a soda bottle in Kudroli, Mangalore by looting 15,000 Rs Cash. Though the case has been registered at Bunder Police station yet the culprits are not been arrested by the police.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm