ಬ್ರೇಕಿಂಗ್ ನ್ಯೂಸ್
16-11-20 02:02 pm Crime Correspondent - Mangaluru ಕರಾವಳಿ
ಮಂಗಳೂರು, ನವೆಂಬರ್ 16: ಗಡಿಭಾಗ ಮಂಜೇಶ್ವರದಲ್ಲಿ ಹಿಂದು ಯುವತಿಯನ್ನು ಮುಸ್ಲಿಂ ಯುವಕನೊಬ್ಬ ಅಪಹರಿಸಿ ಕೊಂಡೊಯ್ದಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾರದ ಹಿಂದೆ ಘಟನೆ ನಡೆದಿದ್ದು, ಕೃತ್ಯದ ಹಿಂದೆ ಲವ್ ಜಿಹಾದ್ ಇರುವ ಶಂಕೆ ವ್ಯಕ್ತವಾಗಿದೆ. ಯುವತಿ ಮಂಜೇಶ್ವರದ ಕಡಂಬಾರು ನಿವಾಸಿಯಾಗಿದ್ದು ಮನೆಯಲ್ಲಿ ರಾತ್ರಿ ಊಟ ಮಾಡಿ ಮಲಗಿದ್ದವಳು ಬೆಳಗ್ಗೆದ್ದು ನೋಡಿದಾಗ ನಾಪತ್ತೆಯಾಗಿದ್ದಳು. ಆಬಳಿಕ ಮನೆಯವರು ಮಂಜೇಶ್ವರ ಠಾಣೆಯಲ್ಲಿ ಯುವತಿ ನಾಪತ್ತೆ ಕೇಸು ದಾಖಲಿಸಿದ್ದಾರೆ. ನಾಪತ್ತೆ ವಿಚಾರ ಬಯಲಾಗುತ್ತಿದ್ದಂತೆ ಯುವತಿಯನ್ನು ಆಕೆಯೊಂದಿಗೆ ಕೆಲಸ ಮಾಡುತ್ತಿದ್ದ ಯುವಕನೇ ಅಪಹರಿಸಿರುವುದಾಗಿ ವದಂತಿ ಹರಡಿದೆ.
ಬಂಗ್ರ ಮಂಜೇಶ್ವರ ನಿವಾಸಿಯಾಗಿರುವ ಅಲ್ತಾಫ್ ಎಂಬ ಯುವಕನೇ ಅಪಹರಿಸಿದ್ದಾನೆ ಎನ್ನಲಾಗುತ್ತಿದ್ದು, ಬೆಂಗಳೂರಿನಲ್ಲಿ ಇಟ್ಟಿದ್ದಾನೆ ಎನ್ನುವ ಮಾಹಿತಿ ಇದೆ. ಕೆಲವರ ಪ್ರಕಾರ, ಕೇರಳದ ಕಣ್ಣೂರಿಗೆ ಒಯ್ದಿದ್ದಾನೆ ಎನ್ನಲಾಗುತ್ತಿದೆ. ಆದರೆ, ಎಲ್ಲಿದ್ದಾರೆ ಎನ್ನುವ ಖಚಿತ ಮಾಹಿತಿ ಯಾರಲ್ಲೂ ಇಲ್ಲ. 21 ವರ್ಷದ ಸ್ಫುರದ್ರೂಪಿಯಾಗಿರುವ ಯುವತಿ, ಕಡಂಬಾರಿನ ಮರದ ಮಿಲ್ ಮುಂಭಾಗದಲ್ಲಿರುವ ಬೊಂಡ ಜ್ಯೂಸ್ ತಯಾರಿಸುವ ಫ್ಯಾಕ್ಟರಿಯಲ್ಲಿ ಕೆಲಸಕ್ಕಿದ್ದಳು. ಓದಿದ ಯುವತಿಯಾಗಿದ್ದರಿಂದ ವಹಿವಾಟು ನೋಡಿಕೊಂಡಿದ್ದರೆ, ಇತರ ಯುವಕರು, ಯುವತಿಯರು ಕೆಲಸಕ್ಕಿದ್ದರು. ಅಲ್ತಾಫ್ ಕೂಡ ಅಲ್ಲಿಯೇ ಕೆಲಸಕ್ಕಿದ್ದ.
ಕ್ರಿಮಿನಲ್ ಹಿನ್ನೆಲೆ, ಗಾಂಜಾ ವ್ಯಸನಿ !
ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಅಲ್ತಾಫ್ ಗಾಂಜಾ ವ್ಯಸನಿ ಆಗಿದ್ದ ಎನ್ನುತ್ತಾರೆ ಅಲ್ಲಿನ ಜನ. ಸಣ್ಣಂದಿನಲ್ಲೇ ಶಾಲೆ ಬಿಟ್ಟು ಅಲೆದಾಡುತ್ತಿದ್ದ ವೇಳೆ, ಕ್ಯಾಟರಿಂಗ್ ಸರ್ವಿಸಿನಲ್ಲಿ ಊಟ ಬಡಿಸುವ ಕೆಲಸಕ್ಕೂ ಹೋಗುತ್ತಿದ್ದ. ಒಂದು ವರ್ಷದಿಂದ ಜ್ಯೂಸ್ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿದ್ದ. ಫ್ಯಾಕ್ಟರಿಯಲ್ಲಿ ಎಲ್ಲರ ಜೊತೆ ಒಡನಾಟ ಹೊಂದಿದ್ದ ಯುವತಿಯನ್ನು ಅದೇನು ಮರುಳು ಮಾಡಿ ಎಳಕೊಂಡು ಹೋಗಿದ್ದಾನೋ ಗೊತ್ತಿಲ್ಲ. ಸುಂದರ ಆಕರ್ಷಕ ಮೈಕಟ್ಟಿನ ಯುವತಿ, ನರಪೇತಲನಂತಿರುವ ಹುಡುಗನ ಜೊತೆ ಹೋಗಿದ್ದಾಳೆ ಎನ್ನುವುದನ್ನು ಸ್ಥಳೀಯರು ಇನ್ನೂ ಅರಗಿಸಿಕೊಂಡಿಲ್ಲ.
ಕಾಸರಗೋಡು ಎಸ್ಪಿಗೆ ವಿಹಿಂಪದಿಂದ ದೂರು
ಘಟನೆ ಹಿಂದೆ ಮುಸ್ಲಿಂ ಲವ್ ಜಿಹಾದ್ ತಂತ್ರ ವರ್ಕೌಟ್ ಆಗಿರುವ ಬಗ್ಗೆ ವ್ಯಾಪಕ ಶಂಕೆ ವ್ಯಕ್ತವಾಗಿದೆ. ಏನೋ ಭಸ್ಮ ಹಾಕಿ, ಯುವತಿಯನ್ನು ಅಪಹರಿಸಿರಬೇಕೆಂದು ಜನರಾಡಿಕೊಳ್ಳುತ್ತಿದ್ದಾರೆ. ಘಟನೆ ಬಗ್ಗೆ ಹಿಂದು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಯುವತಿ ಲವ್ ಜಿಹಾದಿಗೆ ಬಲಿಯಾಗಿದ್ದಾಳೆ ಎಂದು ದೂರಿದ್ದಾರೆ. ವಿಶ್ವ ಹಿಂದು ಪರಿಷತ್ ಮಂಗಳೂರು ವಿಭಾಗ ಸಂಚಾಲಕ ಶರಣ್ ಪಂಪ್ವೆಲ್ ಮತ್ತು ಕಾಸರಗೋಡು ವಿಭಾಗದ ವಿಹಿಂಪ ಮತ್ತು ಬಜರಂಗದಳ ಪ್ರಮುಖರು ಸೇರಿ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿದ್ದಾರೆ. ಯುವತಿಯನ್ನು ಮತಾಂತರಿಸುವ ಉದ್ದೇಶದಿಂದ ಅಪಹರಿಸಲಾಗಿದೆ. ಇದರ ಹಿಂದೆ ಲವ್ ಜಿಹಾದ್ ಕೃತ್ಯದ ಶಂಕೆಯಿದೆ, ಕೂಡಲೇ ಯುವಕನನ್ನು ಬಂಧಿಸಬೇಕು, ಇಲ್ಲದಿದ್ದರೆ ಸಂಘಟನೆಯ ಕಾರ್ಯಕರ್ತರು ಆ ಕೆಲಸವನ್ನು ಮಾಡಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಂಜೇಶ್ವರ ಪೊಲೀಸರ ನಿರ್ಲಕ್ಷ್ಯ !
ಘಟನೆ ನಡೆದು ವಾರ ಕಳೆದರೂ, ಯುವತಿ ಎಲ್ಲಿದ್ದಾಳೆ ಎನ್ನುವುದನ್ನು ಇನ್ನೂ ಪತ್ತೆ ಮಾಡಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಮಂಜೇಶ್ವರ ಪೊಲೀಸರಲ್ಲಿ ಕೇಳಿದರೆ, ಯುವಕ ಫೋನ್ ಮಾಡಿದ್ದು, ಠಾಣೆಗೆ ಬರುವುದಾಗಿ ತಿಳಿಸಿದ್ದಾರೆ ಎನ್ನುತ್ತಿದ್ದಾರೆ. ಇದರರ್ಥ ಯುವಕ – ಯುವತಿ ಮದುವೆಯಾಗಿ ಪೊಲೀಸ್ ಠಾಣೆಗೆ ಹಾಜರಾಗಲಿದ್ದಾರೆ ಎಂದು ಪರೋಕ್ಷವಾಗಿ ಪೊಲೀಸರು ಹೇಳುತ್ತಿದ್ದಾರೆ. ಮೊದಲೇ ಕಾಸರಗೋಡಿನ ಪೊಲೀಸ್ ಅಂದರೆ ಆಡಳಿತ ಪಕ್ಷದ ಕೈಗೊಂಬೆ ಎನ್ನುವ ಆರೋಪ ಇದೆ. ಈಗೇನಿದ್ದರೂ, ಕಮ್ಯುನಿಸ್ಟ್ ಆಡಳಿತ ಇರುವಾಗ ಲವ್ ಜಿಹಾದ್ ಕೃತ್ಯದ ವಿರುದ್ಧ ಪೊಲೀಸರು ಕ್ರಮ ಜರುಗಿಸಿಯಾರೇ ಎನ್ನುವ ಸಂಶಯ ಜನರಲ್ಲಿದೆ.
ಕಿಡ್ನಾಪ್ ಕೇಸು ದಾಖಲಿಸಿಲ್ಲ ಯಾಕೆ ?
ಯುವತಿಯನ್ನು ರಾತ್ರೋರಾತ್ರಿ ಅಪಹರಿಸಿ ಕೊಂಡೊಯ್ದಿದ್ದರೂ, ಮಂಜೇಶ್ವರ ಠಾಣೆಯಲ್ಲಿ ಆ ಕುರಿತು ಕೇಸು ದಾಖಲಾಗಿಲ್ಲ. ಹಿಂದು ಸಂಘಟನೆಗಳ ನಾಯಕರು ಕಾಸರಗೋಡು ಎಸ್ಪಿಯನ್ನು ಭೇಟಿಯಾಗಿ, ಕಿಡ್ನಾಪ್ ಆಗಿರುವ ಬಗ್ಗೆ ದೂರು ನೀಡಿದ್ದರೂ, ಅದು ತಾಂತ್ರಿಕವಾಗಿ ಪ್ರಕರಣ ದಾಖಲಿಸಿಕೊಳ್ಳಲು ನೆರವಾಗುವುದಿಲ್ಲ. ಹೆತ್ತವರ ಜೊತೆ ಆಯಾ ಠಾಣೆಗೆ ತೆರಳಿ, ಕಿಡ್ನಾಪ್ ಮಾಡಿರುವ ಯುವಕನ ಹೆಸರು ಉಲ್ಲೇಖಿಸಿ ಕೇಸು ದಾಖಲಿಸಬೇಕಿತ್ತು. ಆದರೆ, ಈ ಕೆಲಸ ಇನ್ನೂ ಆಗಿಲ್ಲ. ಹೆತ್ತವರು ಬಡವರು ಮತ್ತು ಕಾನೂನು ವಿಚಾರ ತಿಳಿಯದವರು. ಹಾಗೆಂದು ಹಿಂದು ಸಮಾಜದ ಬಗ್ಗೆ ಮಾತನಾಡುವ ಮಂದಿ ಗೈಡೆನ್ಸ್ ಮಾಡಬೇಕಿತ್ತು. ಹೊಸ ಎಫ್ಐಆರ್ ದಾಖಲಿಸಿಕೊಳ್ಳಲು ಪೊಲೀಸರಿಗೆ ಒತ್ತಡ ಹೇರಬೇಕಿತ್ತು. ಲವ್ ಜಿಹಾದ್ ಬಗ್ಗೆ ಹೇಳಿಕೆ ಕೊಟ್ಟ ಮಾತ್ರಕ್ಕೆ ಬಿಸಿ ಮುಟ್ಟುವುದಿಲ್ಲ ಎನ್ನುವುದನ್ನು ನಾಯಕರು ಅರ್ಥ ಮಾಡಿಕೊಳ್ಳಬೇಕು.
ಹೆಸರಿಗಷ್ಟೇ ನಾಯಕ ಮಣಿಗಳು !
ಕಾಸರಗೋಡು ಜಿಲ್ಲೆಯ ಮಂಜೇಶ್ವರ, ಉಪ್ಪಳ, ಬಾಯಾರು, ಪೆರ್ಲ ಹೀಗೆ ಪ್ರತಿ ವರ್ಷ ಈ ಭಾಗದಲ್ಲಿ ನೂರಾರು ಯುವತಿಯರು ನಾಪತ್ತೆಯಾಗುತ್ತಿದ್ದಾರೆ. ಬಡವರ ಮನೆಗಳ ನಾಪತ್ತೆ ಪ್ರಕರಣಗಳು ಹೊರಗೆ ಬರುವುದೇ ಕಡಿಮೆ. ಕೆಲವು ಪ್ರಕರಣಗಳು ನಾಪತ್ತೆ ದೂರು ದಾಖಲಿಸುವುದಕ್ಕಷ್ಚೆ ಸೀಮಿತವಾಗುತ್ತದೆ. ಯುವತಿಯರು ಎಲ್ಲಿ ಹೋಗಿದ್ದಾರೆ, ಯಾರ ಜೊತೆಗಿದ್ದಾರೆ. ಆನಂತರ ಜೀವಂತ ಇದ್ದಾರೆಯೇ ಎನ್ನುವ ಬಗ್ಗೆ ಹಿಂದು ಸಂಘಟನೆಗಳು ಕೂಡ ನಿಗಾ ಇಟ್ಟಿಲ್ಲ. ಕಾಸರಗೋಡಿನ ಮಟ್ಟಿಗೆ ಹೇಳುವುದಾದರೆ, ಅಲ್ಲಿ ಹಿಂದು ಸಂಘಟನೆಗಳಿಗೆ ಹೆಸರಿಗಷ್ಟೇ ನಾಯಕ ಮಣಿಗಳು. ಸಮಾಜದ ಪರವಾಗಿ ಕೆಲಸ ಮಾಡುವ ಆಸಕ್ತಿಯೂ ಇಲ್ಲ. ಗೊಡವೆಯೂ ಇರುವುದಿಲ್ಲ. ನಿರ್ಲಕ್ಷ್ಯ ಭಾವದ ಸಮಾಜ ಸತ್ತಿರುವುದಕ್ಕೆ ಸಮ ಎನ್ನುವ ಮಾತನ್ನು ಆರೆಸ್ಸೆಸ್ ಪ್ರಮುಖರು ಹೇಳುತ್ತಿದ್ದರು. ಅದು ಕಾಸರಗೋಡಿನ ಮಟ್ಟಿಗೆ ಅಕ್ಷರಶಃ ಸತ್ಯ.
A Love Jihad case has been reported at the Manjeshwar Police Station where a Hindu girl allegedly runs away with Muslim Boy. Detailed report by Headline Karnataka.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
09-09-25 11:09 pm
HK News Desk
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
09-09-25 10:47 pm
Mangalore Correspondent
Mangalore Accident, Kulur, NHAI: ಕುಳೂರು ರಸ್ತೆ...
09-09-25 08:01 pm
YouTuber Munaf, SIT, Dharmasthala Case: ಎಸ್ಐಟ...
09-09-25 05:59 pm
Mangalore, NHAI, Padmaraj: ಇನ್ನೆಷ್ಟು ಜೀವ ಬಲಿಯ...
09-09-25 05:14 pm
MLA Vedavyas Kamath, Mangalore, Yakshangana:...
09-09-25 04:47 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm