ಬ್ರೇಕಿಂಗ್ ನ್ಯೂಸ್
17-11-20 09:39 pm Mangaluru Crime Correspondent ಕರಾವಳಿ
ಉಳ್ಳಾಲ, ನವಂಬರ್ 17: ಕಳೆದ ವಾರವಷ್ಟೆ ಉಳ್ಳಾಲ ಕೋಟೆಪುರದ ಕಡಲ ತೀರದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಧಂಧೆಯನ್ನು ವೀಡಿಯೋ ಸಹಿತ ಹೆಡ್ ಲೈನ್ ಕರ್ನಾಟಕ ವರದಿ ಮಾಡಿತ್ತು. ಇದೀಗ ಕೋಟೆಪುರದ ನದಿ ತೀರದಲ್ಲೂ ಮರಳು ಧಂಧೆ ರಾಜಾರೋಷವಾಗಿ ನಡೆಯುತ್ತಿರುವುದನ್ನು ಪತ್ತೆ ಮಾಡಿದೆ. ಈ ಬಗ್ಗೆ ಡಿಸಿಪಿಗೆ ಮಾಹಿತಿ ನೀಡಿದ್ದು, ಉಳ್ಳಾಲ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಧಂಧೆಕೋರರು ಎಸ್ಕೇಪ್ ಆಗಿದ್ದಾರೆ.
ಉಳ್ಳಾಲ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿರುವ ಕೋಟೆಪುರ ವೃತ್ತದ ಬಲಗಡೆಯ ನದಿ ತೀರದಲ್ಲಿ ನಿತ್ಯವೂ ಲೋಡ್ ಗಟ್ಟಲೆ ಮರಳನ್ನು ಅಕ್ರಮವಾಗಿ ಟಿಪ್ಪರ್ ಲಾರಿಗೆ ತುಂಬಿಸಿ ಸಾಗಿಸಲಾಗುತ್ತಿದೆ. ಈ ಬಗ್ಗೆ ಸ್ಥಳದಿಂದಲೇ ಡಿಸಿಪಿ ಅರುಣಾಂಶು ಗಿರಿ ಅವರಿಗೆ ಫೋನ್ ಮಾಡಿ ವಿಚಾರ ತಿಳಿಸಲಾಗಿದೆ. ಅದರಂತೆ, ಒಂದು ಪಿಸಿಆರ್ ವಾಹನ ಕೋಟೆಪುರ ಸರ್ಕಲ್ ಕಡೆಗೆ ದೌಡಾಯಿಸಿದ್ದಲ್ಲದೆ, ಒಂದು ಸುತ್ತು ಹೊಡೆದು ಮತ್ತೆ ಠಾಣೆ ಕಡೆ ಹಿಂದಿರುಗಿದೆ. ಸ್ಥಳೀಯ ಪೊಲೀಸರೇ ಹೊಯ್ಗೆಯವರಿಗೆ ಮಾಹಿತಿ ನೀಡಿದರೋ ಏನೋ ಎನ್ನುವಂತೆ ಅಲ್ಲಿದ್ದ ಎರಡು ಟಿಪ್ಪರ್ ಗಳು ಕೋಟೆಪುರ ಒಳದಾರಿ ಮೂಲಕ ಕಾಲ್ಕಿತ್ತಿದೆ.



ಇದೇನು ಉಳ್ಳಾಲ ಪೊಲೀಸರಿಗೆ ತಿಳಿಯದೆ ಆಗುತ್ತಿರೋ ವ್ಯವಹಾರ ಏನಲ್ಲ. ಪೊಲೀಸರ ಎದುರಲ್ಲೇ ಟಿಪ್ಪರ್ ಲಾರಿಗಳಲ್ಲಿ ಮರಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ. ನದಿ ತೀರದಿಂದ ದೋಣಿಗಳಲ್ಲಿ ತಂದ ಮರಳನ್ನು ರಾಜಾರೋಷವಾಗಿ ಟಿಪ್ಪರ್ ಗೆ ಲೋಡ್ ಮಾಡಲಾಗುತ್ತದೆ. ಆದರೆ, ಈ ಬಗ್ಗೆ ಪೊಲೀಸರಿಗೆ, ಮೇಲಧಿಕಾರಿಗಳಿಗೆ ತಿಳಿಸಿದರೆ, ಅಲ್ಲಿಂದಲೇ ಹೊಯ್ಗೆ ಮಾಫಿಯಾಕ್ಕೆ ವಿಚಾರ ಹೋಗುತ್ತದೆ. ಕಳ್ಳನಿಗೆ ಪೊಲೀಸನೇ ಮಾಹಿತಿದಾರನಾದರೆ ಕಳ್ಳನ ಹಿಡಿಯೋದು ಸಾಧ್ಯವೇ ಎಂಬ ಪ್ರಶ್ನೆ ಸಾರ್ವಜನಿಕರದ್ದು. ಇದರ ಹಿಂದೆ ಬರೀಯ ಪೊಲೀಸರೇ ಇರೋದಾ, ಪೊಲೀಸರನ್ನು ಕುಣಿಸೋ ಆಡಳಿತ ಪಕ್ಷಗಳ ನಾಯಕರು ಕೂಡ ಇದ್ದಾರೆಯೇ ಎನ್ನುವ ಅನುಮಾನ ಮೂಡಿದೆ.
ಮರಳು ನೀತಿ ಜಾರಿಗೆ ತಡೆ ಯಾರು ?
ಸಾಮಾನ್ಯ ಜನರಿಗೆ ಮರಳು ಸಿಗದ ವಿಚಾರದಲ್ಲಿ ಸಂಸದರ ಬಳಿ ಇತ್ತೀಚೆಗೆ ಮರಳು ವ್ಯಾಪಾರಿಗಳೇ ಹೋಗಿದ್ದರಂತೆ. ಮರಳು ನೀತಿ ವಿಚಾರದಲ್ಲಿ ಜಿಲ್ಲಾಡಳಿತ ನಿರ್ಧಾರಕ್ಕೆ ಬರಬೇಕೆಂದು ಅಹವಾಲು ಮುಂದಿಟ್ಟಿದ್ದರಂತೆ. ಆದರೆ, ಈ ಬಗ್ಗೆ ಸಮಾಲೋಚಿಸಿ ನಿರ್ಧಾರ ಪ್ರಕಟಿಸುವ ಆಯಕಟ್ಟಿನಲ್ಲಿರುವ ವ್ಯಕ್ತಿಯೇ ತಿರುಗಿ ಬಿದ್ದು, ಮರಳು ವ್ಯಾಪಾರಿಗಳನ್ನು ಬೈದು ಕಳಿಸಿದ್ದರಂತೆ.. ಹೀಗೆ ಅಂತೆ ಕಂತೆಗಳನ್ನು ಬಿಜೆಪಿಯವರೇ ಹೇಳುತ್ತಿದ್ದು ಮರಳು ನೀತಿ ಜಾರಿಗೆ ಬರದಿರಲು ಅಡ್ಡಿಯಾಗಿರುವ ಕಾಣದ ಕೈಗಳ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಾರೆ.
The Headline Karnataka Team in Mangalore has exposed the illegal sand mining at Kotepura, Ullal, Mangalore. Though the Ullal police know about the illegal activity yet no action is been taken place.
01-05-26 08:33 pm
HK News Staffer
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾನು ಸ...
30-04-26 08:16 pm
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
ಸದ್ಯಕ್ಕಿಲ್ಲ ಡಿಕೆಶಿಗೆ ಸಿಎಂ ಭಾಗ್ಯ ; ರಾಜ್ಯಸಭೆ- ಏ...
29-04-26 10:36 am
ನಾಯಕತ್ವ ಬದಲಾವಣೆ ಮಾತೇ ಇಲ್ಲ, ಮೇ 20ರೊಳಗೆ ಸಂಪುಟ ವ...
26-04-26 08:05 pm
02-05-26 11:18 am
HK News Staffer
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
02-05-26 12:19 pm
HK News Staffer
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm
Rakesh Gladson Dsouza: ಮಂಗಳೂರಿನ ಯುವ ಉದ್ಯಮಿ ರಾ...
01-05-26 06:36 pm
ಮಕ್ಕಳ ಆಯೋಗ ಸಮಿತಿ ಸದಸ್ಯನಿಂದಲೇ ಹಲವು ಮಹಿಳೆಯರಿಗೆ...
01-05-26 01:45 pm