ಬ್ರೇಕಿಂಗ್ ನ್ಯೂಸ್
17-11-20 11:09 pm Mangaluru Correspondent ಕರಾವಳಿ
ಮಂಗಳೂರು, ನವೆಂಬರ್ 17: ಪ್ರಸಿದ್ಧ ವ್ಯಕ್ತಿಗಳ ಹೆಸರಲ್ಲಿ ನಕಲಿ ಐಡಿ ಕ್ರಿಯೇಟ್ ಮಾಡಿ ಹಣ ಪೀಕಿಸುವ ಖದೀಮರು ಹೆಚ್ಚುತ್ತಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ಉಪಾಯುಕ್ತರಾಗಿರುವ ಐಎಎಸ್ ಅಧಿಕಾರಿ ಡಾ.ಸಂತೋಷ್ ಕುಮಾರ್ ಹೆಸರಲ್ಲಿ ನಕಲಿ ಐಡಿ ಸೃಷ್ಟಿಸಿ ಹಲವರಿಂದ ಹಣ ಪೀಕಿಸ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಸಂತೋಷ್ ಕುಮಾರ್ ಹೆಸರಿನಲ್ಲಿ ಅವರದೇ ಒರಿಜಿನಲ್ ಐಡಿಯಲ್ಲಿರುವ ಫೋಟೊ ಮತ್ತು ಹೆಸರು, ಹುದ್ದೆಯನ್ನು ಬಳಸಿಕೊಂಡು ಮತ್ತೊಂದು ಫೇಸ್ಬುಕ್ ಐಡಿ ಕ್ರಿಯೇಟ್ ಮಾಡಲಾಗಿದೆ. ಅಲ್ಲದೆ, ಅವರ ಸ್ನೇಹಿತರ ಲಿಸ್ಟ್ ಸಂಗ್ರಹಿಸಿ, ಹಣದ ಅಗತ್ಯ ಇರುವುದನ್ನು ಮನವರಿಕೆ ಮಾಡಿ ಹಣ ಕೇಳುತ್ತಿರುವುದು ಬಯಲಾಗಿದೆ.

ಸ್ನೇಹಿತನ ಮಗುವಿಗೆ ಹುಷಾರಿಲ್ಲ , ಸೀರಿಯಸ್ ಆಗಿದೆ. ಹತ್ತಿರದ ಸಂಬಂಧಿಕರು ಅನಾರೋಗ್ಯದಿಂದ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ತುರ್ತು ಹಣದ ಅಗತ್ಯ ಇದೆ. ಗೂಗಲ್ ಪೇ ಇದ್ದರೆ ಆದಷ್ಟು ಬೇಗ ಹಣ ರವಾನಿಸಿ. ಬೆಳಗ್ಗೆ ಹಿಂತಿರುಗಿಸುತ್ತೇನೆ... ಹೀಗೆಂದು ಸ್ನೇಹಿತರಿಗೆ ಮೆಸೆಂಜರ್ ಮೂಲಕ ಸಂದೇಶ ಕಳಿಸುವ ನಕಲಿ ವ್ಯಕ್ತಿ ಹಲವರ ಬಳಿಯಿಂದ ಹಣ ಲಪಟಾಯಿಸಿರುವ ಮಾಹಿತಿಯಿದೆ.

ಆಯುಕ್ತರಿಗೆ ಫೇಸ್ಬುಕ್ ಫ್ರೆಂಡ್ ಆಗಿರುವ ಮಾಧ್ಯಮದ ವ್ಯಕ್ತಿಯೊಬ್ಬರಿಗೆ ಇದೇ ರೀತಿಯ ಮೆಸೇಜ್ ಬಂದಿತ್ತು. ಹಣದ ಅಗತ್ಯ ಇರುವುದಾಗಿ ಹೇಳಿಕೊಂಡಿದ್ದನ್ನು ಅರಿತ ಮಾಧ್ಯಮ ಕ್ಷೇತ್ರದ ವ್ಯಕ್ತಿ ಕೂಡಲೇ ಉಪಾಯುಕ್ತ ಸಂತೋಷ್ ಕುಮಾರ್ ಅವರಿಗೆ ಫೋನಾಯಿಸಿದ್ದಾರೆ. ಅದಾಗಲೇ ಹಲವರಿಂದ ಫೋನ್ ಬಂದಿದ್ದರಿಂದ ಎಚ್ಚತ್ತುಕೊಂಡಿದ್ದ ಆಯುಕ್ತರು ತನ್ನ ಒರಿಜಿನಲ್ ಐಡಿಯಲ್ಲಿ ಮನವಿ ಕೂಡ ಮಾಡಿಕೊಂಡಿದ್ದರು. ಯಾರು ಕೂಡ ನನ್ನ ಹೆಸರಲ್ಲಿ ಹಣ ಕೇಳಿ, ಪೀಡಿಸಿದರೆ ಮೋಸ ಹೋಗಬೇಡಿ. ಈ ಬಗ್ಗೆ ಪೊಲೀಸ್ ದೂರು ಕೊಟ್ಟಿದ್ದಾಗಿ ಮಾಹಿತಿ ನೀಡಿದ್ದರು.
ಈ ಬಗ್ಗೆ ಆಯುಕ್ತರನ್ನು ಸಂಪರ್ಕಿಸಿದಾಗ, ಫೇಕ್ ಅಕೌಂಟ್ ಮೂಲಕ ಖದೀಮರು ಹಣ ಕೇಳಿರುವುದನ್ನು ದೃಢಪಡಿಸಿದ್ದಾರೆ. ಈ ಬಗ್ಗೆ ಈಗಾಗಲೇ ಸೈಬರ್ ಕ್ರೈಮ್ ಮತ್ತು ಮಂಗಳೂರು ಪೊಲೀಸ್ ಕಮಿಷನರ್ ಗೆ ತಿಳಿಸಿದ್ದಾಗಿ ಮಾಹಿತಿ ನೀಡಿದ್ದಾರೆ.
Fraudsters create fake facebook id of Revenue Assistant Commissioner Santosh Kumar, Mangalore and have looted money through online. A case has been registered to the cyber crime and also the issue has been brought to the notice of Commissioner of police said Santosh Kumar to Headline Karnataka.
25-06-26 09:10 pm
HK News Staffer
ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರೀ ಕಳ್ಳಾಟ ! 19 ಸಾವಿರ...
24-06-26 05:55 pm
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
25-06-26 10:56 pm
HK News Staffer
Mangalore Drugs, Police: ಒಂದು ವರ್ಷದಲ್ಲಿ 400 ಡ...
25-06-26 10:48 pm
ಸಂಪುಟ ವಿಸ್ತರಣೆ ವಿಳಂಬ ; ಪ್ರಕೃತಿ ವಿಕೋಪ ಮೇಲುಸ್ತು...
25-06-26 02:39 pm
ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಧನ; ‘ಸಮಾಜ ಕಳೆ...
23-06-26 06:02 pm
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
25-06-26 09:40 pm
HK News Staffer
ಮಂಡ್ಯದಲ್ಲಿ ಸೆಲ್ಫಿ ಹುಚ್ಚಿಗೆ ಐವರ ಬಲಿ ; ಕಾವೇರಿ ನ...
25-06-26 01:00 pm
ಹಸೆಮಣೆ ಏರಬೇಕಿದ್ದವಳೇ ಭಾವಿ ಪತಿಯನ್ನು ಫೋಟೊ ಶೂಟ್ ನ...
24-06-26 09:28 pm
30 ಲಕ್ಷ ಸಾಲ, ಲಿವ್-ಇನ್ ಸಂಬಂಧಕ್ಕೆ ಪೋಷಕರ ವಿರೋಧ ;...
24-06-26 08:53 pm
ರಾಮ ಮಂದಿರವನ್ನ ಸ್ಫೋಟಿಸಲು ಪ್ಲಾನ್ ಮಾಡಿದ್ವಿ ! ;...
24-06-26 07:53 pm