ಬ್ರೇಕಿಂಗ್ ನ್ಯೂಸ್
18-11-20 02:26 pm Mangalore Correspondent ಕರಾವಳಿ
ಮಂಗಳೂರು, ನವೆಂಬರ್ 18 : ಮರಾಠ ಅಭಿವೃದ್ಧಿ ಪ್ರಾಧಿಕಾರ ವಿಚಾರದಲ್ಲಿ ಪರ - ವಿರೋದ ಕೇಳಿಬರುತ್ತಿದ್ದಂತೆ ಮಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡ, ಕೆಪಿಸಿಸಿ ವಕ್ತಾರ ಐವನ್ ಡಿಸೋಜಾ ಕೌಂಟರ್ ಹೊಡೆದಿದ್ದಾರೆ.
ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುತ್ತೇವೆ ಎಂದು ಹೇಳುತ್ತಾ ಬಂದಿರಿ. 50 ಕೋಟಿ ಮೀಸಲಿಡುವ ಮಾತನ್ನೂ ಆಡಿದ್ರಿ. ಆದರೆ, ಕ್ರೈಸ್ತ ನಿಗಮ ಜಾರಿಗೊಳಿಸಿಲ್ಲ ಯಾಕೆ ಎಂದು ಪ್ರಶ್ನಿಸಿದ ಐವನ್ ಡಿಸೋಜ, ಕ್ರೈಸ್ತರಲ್ಲಿಯೂ ಬಡ ಜನರಿದ್ದಾರೆ. ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ನಮ್ಮ ಒತ್ತಾಯವೂ ಇತ್ತು. ಆದರೆ ಸರಕಾರ ನಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ಕಿಡಿಕಾರಿದರು.
ನಿಗಮ ಸ್ಥಾಪನೆ ಮಾಡದಿದ್ದರೆ ರಾಜ್ಯದ ಕ್ರೈಸ್ತರನ್ನ ಹೋರಾಟಕ್ಕೆ ಧುಮುಕುವಂತೆ ಮಾಡುತ್ತೇವೆ. ಜನರು ಬೀದಿಗೆ ಬಂದರೆ ಸರಕಾರವೇ ನೇರ ಹೊಣೆ. ಕ್ರೈಸ್ತರನ್ನ ಅಂಡರ್ ಎಸ್ಟಿಮೇಟ್ ಮಾಡುವುದು ಬೇಡ. ಕ್ರೈಸ್ತ ಸಮುದಾಯದ ಮೌನ, ಅವರ ವೀಕ್ನೆಸ್ ಅಲ್ಲ. ಬಿಷಪ್ ಸನ್ಮಾನ ಸ್ವೀಕರಿಸಿ ಹೋದ ಸಿಎಂ, ನಿಗಮಕ್ಕೆ ಅನುಮೋದನೆ ನೀಡುವುದಾಗಿ ಹೇಳಿದ್ದರು. ಆದರೆ ಆನಂತರ ಯಾಕಾಗಿ ರದ್ದು ಮಾಡಿದ್ದೀರಿ? ಇದರ ಹಿಂದಿನ ಅಜೆಂಡಾ ಏನು ? ತಕ್ಷಣವೇ ಸಿಎಂ ಇದಕ್ಕೆ ಉತ್ತರ ಕೊಡಬೇಕು ಎಂದು ಐವಾನ್ ಒತ್ತಾಯಿಸಿದರು.
55 ಕೋಟಿ ನಿಗಮಕ್ಕಾಗಿ ಇಟ್ಟಿದ್ದು ಏನು ಮಾಡಿದ್ದೀರಿ ಎಂದು ಕೇಳಿದ ಐವನ್ ಡಿಸೋಜ, 2008 ರಲ್ಲಿ ಚರ್ಚ್ ದಾಳಿಯಾದಾಗಲೂ ಕ್ರೈಸ್ತರು ತಾಳ್ಮೆ ವಹಿಸಿದ್ದರು. ಆದರೆ ಸರಕಾರ ಕ್ರೈಸ್ತರಿಗಾಗಿ ಚಿಕ್ಕಾಸು ಖರ್ಚು ಮಾಡಿಲ್ಲ. ನಿಗಮ ಕೊಟ್ಟಿದ್ದೇವೆ ಅಂತಾ ಜಾಹೀರಾತು ನೀಡಿದ್ದರು. ಆದರೆ, ಅನುಷ್ಠಾನಕ್ಕೆ ತಂದಿಲ್ಲ. ಕ್ರೈಸ್ತರನ್ನ ಮಂಗಗಳು ಎಂದು ಭಾವಿಸಿಕೊಂಡಿದ್ದಾರೆಯೇ ಸಿಎಂ ಯಡಿಯೂರಪ್ಪ ಎಂದ ಐವನ್ ಡಿಸೋಜಾ ಕಿಡಿಕಾರಿದ್ದಾರೆ.
Video:
Former MLC Ivan D'Souza urged CM BS Yediyurappa to reinstate Christian Development Corporation and asked for a justification to the community and reason behind rejecting the corporation.
24-08-26 03:16 pm
HK News Staffer
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 02:55 pm
HK News Staffer
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
25-08-26 12:46 pm
HK News Staffer
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am
ಪಡಿತರ ಅಕ್ಕಿ ಸಾಗಾಟದ ಲಾರಿಗೆ ಸ್ಕೂಟರ್ ಢಿಕ್ಕಿ! ಸಚಿ...
24-08-26 09:06 pm
ಸಾವಿರಾರು ಕೋಟಿ ವಂಚಕ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿ...
24-08-26 07:04 pm