ಬ್ರೇಕಿಂಗ್ ನ್ಯೂಸ್
20-11-20 06:49 pm Mangaluru Reporter ಕರಾವಳಿ
ಮಂಗಳೂರು, ನವೆಂಬರ್ 20: ಸರಕಾರ ಮತ್ತು ಜನರ ಮಧ್ಯೆ ಕೊಂಡಿಯಾಗಿ ಕೆಲಸ ಮಾಡಬೇಕಾದ ವಾರ್ತಾ ಇಲಾಖೆಗೆ ಮಂಗಳೂರಿನಲ್ಲಿ ಗತಿಯಿಲ್ಲದ ಪರಿಸ್ಥಿತಿ. ಅತ್ತ ಸಿಬಂದಿಯೂ ಇಲ್ಲ. ಇರೋ ಸಿಬಂದಿಗೆ ಕೆಲಸವೂ ಇಲ್ಲ. ಹೌದು... ವಾರ್ತಾ ಮತ್ತು ಸಂಪರ್ಕ ಇಲಾಖೆಯ ಕಚೇರಿ ಮಂಗಳೂರಿನಲ್ಲಿ ಆರ್ ಟಿಓ ಕಚೇರಿ ಬಳಿಯಲ್ಲೇ ಇದೆ. ಅತ್ತ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, ಇತ್ತ ತಾಲೂಕು ಕಚೇರಿ ಮಿನಿ ವಿಧಾನಸೌಧವೂ ಅಕ್ಕ ಪಕ್ಕದಲ್ಲೇ ಇದೆ. ಆದರೆ, ವಾರ್ತಾ ಇಲಾಖೆಯ ಕಚೇರಿಯಲ್ಲಿ ಮಾತ್ರ ಯಾರೂ ಇಲ್ಲ.
ಎರಡು ತಿಂಗಳ ಹಿಂದೆ ಮಂಗಳೂರಿನಲ್ಲಿ ವಾರ್ತಾ ಇಲಾಖೆ ಕಚೇರಿಯಲ್ಲಿ ಹಿರಿಯ ಸಹಾಯಕ ನಿರ್ದೇಶಕರಾಗಿದ್ದ ಖಾದರ್ ಷಾ ಅವರನ್ನು ದಿಢೀರ್ ಆಗಿ ಎತ್ತಂಗಡಿ ಮಾಡಲಾಗಿತ್ತು. ಆದರೆ, ಅವರಿಗೆ ಬೇರೆ ಹುದ್ದೆ ತೋರಿಸಿಲ್ಲ. ಹೀಗಾಗಿ, ಎರಡು ತಿಂಗಳಿಂದ ಬೆಂಗಳೂರು- ಮಂಗಳೂರು ಮಧ್ಯೆ ಅಲೆದಾಡುತ್ತಿದ್ದಾರೆ. ಖಾದರ್ ಷಾ ವಾರ್ತಾ ಇಲಾಖೆಯಿಂದ ಹೊರಬಿದ್ದ ಬಳಿಕ ಅಲ್ಲಿ ನೊಣ ಓಡಿಸುವುದಕ್ಕೂ ಜನ ಇಲ್ಲದಾಗಿದೆ.
ಎಂಟು ಹುದ್ದೆಗಳಿರಬೇಕಾದ ಕಚೇರಿಯಲ್ಲಿ ಸದ್ಯಕ್ಕೆ ಮೂರು ಮಂದಿ ವಾಹನ ಚಾಲಕರು ಮಾತ್ರ ಇದ್ದಾರೆ. ನಿವೃತ್ತಿ ಅಂಚಿನಲ್ಲಿರುವ ಇವರಿಗೆ, ಚಾಲಕ ವೃತ್ತಿ ಬಿಟ್ಟರೆ ಬೇರೆ ಕೆಲಸ ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ಸುಮೋ ಮತ್ತು ಟ್ರಾವೆಲರ್ ವಾಹನ ಇದ್ದರೂ, ಅದಕ್ಕೂ ತುಕ್ಕು ಹಿಡಿಯುವ ಸ್ಥಿತಿ ಎದುರಾಗಿದೆ. ಮತ್ತೊಂದೆಡೆ, ಹೊರಗುತ್ತಿಗೆ ನೆಲೆಯಲ್ಲಿ ಟೈಪಿಸ್ಟ್ ಆಗಿ ಒಬ್ಬರು ಮಹಿಳಾ ಸಿಬಂದಿ ಇದ್ದು, ಅವರಿಗೆ ಕಳೆದ ಎಂಟು ತಿಂಗಳಿಂದ ಸಂಬಳವೇ ಬಂದಿಲ್ಲ ಎನ್ನುತ್ತಾರೆ ಅಲ್ಲಿನ ಸಿಬಂದಿ.
ನಿಜಕ್ಕಾದರೆ, ವಾರ್ತಾ ಇಲಾಖೆ ಕಚೇರಿಯಲ್ಲಿ ಹಿರಿಯ ಸಹಾಯಕ ನಿರ್ದೇಶಕ, ಸಹಾಯಕ ನಿರ್ದೇಶಕರು, ವಾರ್ತಾ ಸಹಾಯಕರು, ಪ್ರಥಮ ದರ್ಜೆ ಸಹಾಯಕ, ಬೆರಳಚ್ಚುಗಾರ ಹುದ್ದೆಗಳಿದ್ದು, ಎಲ್ಲವೂ ಖಾಲಿ ಬಿದ್ದಿದೆ. ಅಟೆಂಡರ್ ಒಬ್ಬರು ಇದ್ದಾರೆ. ಇವರನ್ನು ಹೊರತುಪಡಿಸಿ ಮೂರು ಮಂದಿ ವಾಹನ ಚಾಲಕರು ಇದ್ದಾರೆ. ಕೆಲವೊಮ್ಮೆ ಜಿಲ್ಲಾಡಳಿತದ ಪ್ರಕಟಣೆಗಳು ಮಾತ್ರ ಮಾಧ್ಯಮಕ್ಕೆ ಇ-ಮೇಲ್ ಮೂಲಕ ಬರುತ್ತಿವೆ. ಅದು ಬಿಟ್ಟರೆ ವಾರ್ತಾ ಇಲಾಖೆ ಇದೆಯೋ, ಇಲ್ಲವೋ ಎನ್ನುವುದೇ ತಿಳಿಯದಂತಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಾರ್ತಾ ಇಲಾಖೆ ಹೊಣೆಯನ್ನು ಉಡುಪಿಯ ವಾರ್ತಾ ಸಹಾಯಕ ಹುದ್ದೆಯಲ್ಲಿರುವ ಮಂಜುನಾಥ್ ಅವರಿಗೆ ವಹಿಸಲಾಗಿದೆ. ಮಂಜುನಾಥ್, ಆರು ತಿಂಗಳ ಹಿಂದಷ್ಟೇ ಉಡುಪಿಗೆ ಬಂದಿರುವ ಅಧಿಕಾರಿಯಾಗಿದ್ದು ಮಂಗಳೂರಿನ ಪರಿಚಯ ಕಡಿಮೆ. ಮಂಗಳೂರಿಗೆ ವಾರದಲ್ಲೊಮ್ಮೆ ಅಥವಾ ಯಾರಾದ್ರೂ ಸಚಿವರು ಬಂದಲ್ಲಿ ಮಾತ್ರ ಇಲ್ಲಿಗೆ ಎಂಟ್ರಿ ಕೊಡುತ್ತಾರೆ.
ಇಷ್ಟಕ್ಕೂ ಕಳೆದ ಐದು ವರ್ಷಗಳಿಂದ ಮಂಗಳೂರಿನಲ್ಲಿ ವಾರ್ತಾಧಿಕಾರಿ ಆಗಿರುವ ಖಾದರ್ ಷಾ ಅವರನ್ನು ದಿಢೀರ್ ಟ್ರಾನ್ಸ್ ಫರ್ ಮಾಡಿದ್ದೇ ಯಾರದ್ದೋ ಒತ್ತಡದಿಂದ ಅಂತೆ. ಜಿಲ್ಲಾ ಉಸ್ತುವಾರಿ ಸಚಿವರೇ ವರ್ಗ ಮಾಡಲು ಸಿಎಂ ಯಡಿಯೂರಪ್ಪ ಅವರಿಗೆ ಬರೆದಿದ್ದು ಅಂತ ಮಾಹಿತಿ. ಈ ಬಗ್ಗೆ ಉಸ್ತುವಾರಿ ಬಳಿ ಕೇಳಿದರೆ, ನನ್ನ ಕೈ ಕಟ್ಟಿದೆ, ಒತ್ತಡ ಇರುವುದರಿಂದ ಬರೆದಿದ್ದೇನೆ ಎಂದಿದ್ದಾರಂತೆ. ಹಾಗಾದ್ರೆ, ಖಾದರ್ ಅವರನ್ನು ಎತ್ತಂಗಡಿ ಮಾಡಲು ಲಾಬಿ ಮಾಡಿದವರಿಗೆ ಬದಲಿ ಅಧಿಕಾರಿಯನ್ನು ತಂದು ಕೂರಿಸಬೇಕೆಂಬ ಜವಾಬ್ದಾರಿ ಇಲ್ಲವೇ ? ನೊಣ ಓಡಿಸುವುದಕ್ಕೂ ಗತಿಯಿಲ್ಲದ ಕಚೇರಿಯನ್ನಾಗಿ ಪರಿವರ್ತಿಸಿರುವ ಹೊಣೆಯನ್ನು ಹೊತ್ತುಕೊಳ್ಳುತ್ತಾರೆಯೇ..?
ರಾಜಧಾನಿ ಬೆಂಗಳೂರು ಬಿಟ್ಟರೆ ಮಂಗಳೂರು ಅತಿ ಹೆಚ್ಚು ವಾಣಿಜ್ಯ ವಹಿವಾಟು ಇರೋ ನಗರ. ಜಿಲ್ಲಾಡಳಿತದ ಪ್ರಕಟಣೆಗಳು, ಅರೆ ಸರಕಾರಿ ಸಂಸ್ಥೆಗಳ ಪ್ರಕಟಣೆ- ಮಾಹಿತಿಗಳು, ಶಾಸಕರು, ಸಚಿವರ ಪ್ರಕಟಣೆಗಳು, ಸರಕಾರದ ಮಾರ್ಗದರ್ಶನಗಳು, ಯೋಜನೆಗಳ ವಿವರಗಳು ಹೀಗೆ ಎಲ್ಲವೂ ವಾರ್ತಾ ಮತ್ತು ಸಂಪರ್ಕ ಇಲಾಖೆಯಲ್ಲೇ ಪ್ರಕಟವಾಗಬೇಕು. ಆದರೆ, ಮಂಗಳೂರಿನ ಮಟ್ಟಿಗೆ ಇದನ್ನು ನಿಭಾಯಿಸಬೇಕಾದ ಅಧಿಕಾರಿಗಳೇ ಇಲ್ಲವಾಗಿದ್ದಾರೆ. ಬಿಜೆಪಿಯ ಅತಿ ಹೆಚ್ಚು ಶಾಸಕರು, ಪಕ್ಷದ ರಾಜ್ಯಾಧ್ಯಕ್ಷರು ಇರೋ ಜಿಲ್ಲೆಯಲ್ಲೇ ಹೀಗಾದರೆ ಹೇಗೆ ಗತಿ ಎನ್ನುವ ಮಾತು ಕೇಳುವಂತಾಗಿದೆ.
Office of the Vartha ilake in Mangalore is now out of order as the chair is still empty for the Public Relations officer. A detailed report by team Headline Karnataka.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm