ಬ್ರೇಕಿಂಗ್ ನ್ಯೂಸ್
21-11-20 04:47 pm Mangaluru Correspondent ಕರಾವಳಿ
ಉಳ್ಳಾಲ, ನವಂಬರ್ 21 : ಜೆಡಿಎಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಅವರು ಉಳ್ಳಾಲದ ಅಬ್ಬಕ್ಕ ಸರ್ಕಲ್ ಆವರಣದಲ್ಲಿ ಪರವಾನಿಗೆ ಇಲ್ಲದೆ ಅಕ್ರಮ ವಾಣಿಜ್ಯ ಕಟ್ಟಡ ನಿರ್ಮಿಸುತ್ತಿದ್ದು , ಸಾರ್ವಜನಿಕರ ದೂರಿನ ಮೇರೆಗೆ ನಗರಸಭೆ ಆಯುಕ್ತ ರಾಯಪ್ಪ ಕಟ್ಟಡ ಕಾಮಗಾರಿಗೆ ತಡೆಯೊಡ್ಡಿದ್ದಾರೆ.
ಅಬ್ಬಕ್ಕ ಸರ್ಕಲ್ ಬಸ್ ತಂಗುದಾಣದ ಹಿಂಬದಿಯಲ್ಲಿ ಸುಮಾರು 14 ವಾಣಿಜ್ಯ ಮಳಿಗೆಗಳನ್ನು ಹೊಂದಿರುವ ಕಟ್ಟಡ ಈ ಹಿಂದೆ ದಿನಕರ್ ಉಳ್ಳಾಲ್ ಎಂಬವರ ಒಡೆತನದಲ್ಲಿತ್ತು. ಮೂವತ್ತು ವರ್ಷಗಳ ಹಳೆಯ ಕಟ್ಟಡವನ್ನು ಒಂದೂವರೆ ವರ್ಷಗಳ ಹಿಂದೆ ಎಂಎಲ್ಸಿ ಫಾರೂಕ್ ಅವರು ಖರೀದಿಸಿದ್ದರು. ಹೆಚ್ಚುವರಿ ನಿರ್ಮಾಣಕ್ಕೆ ಪರವಾನಿಗೆ ಇಲ್ಲದೆ ಇದ್ದರೂ, ಶಿಥಿಲ ಕಟ್ಟಡದ ಮೇಲೆಯೇ ಮತ್ತೆ ಮಹಡಿ ನಿರ್ಮಾಣದ ಕಾರ್ಯ ಕೈಗೊಂಡಿದ್ದರು. ಈ ಬಗ್ಗೆ ಸಾರ್ವಜನಿಕರೊಬ್ಬರು ನಗರಸಭೆಗೆ ದೂರು ನೀಡಿದ್ದು ಆಯುಕ್ತರಾದ ರಾಯಪ್ಪ ಕಾಮಗಾರಿಯನ್ನು ಸ್ಥಗಿತಗೊಳಿಸಿ ಮೂಡಾದಿಂದ ಪರವಾನಿಗೆ ಪಡೆಯುವಂತೆ ನಿರ್ದೇಶನ ನೀಡಿದ್ದಾರೆ.
ಬಡವರು ಮನೆ ಕಟ್ಟುವಾಗಲೂ ಸಣ್ಣ ತಪ್ಪಿದ್ದರೆ ಅಧಿಕಾರಿ ವರ್ಗದವರು ಕಾನೂನು ನೆಪ ಹೇಳಿ ಕ್ರಮ ಕೈಗೊಳ್ಳುತ್ತಾರೆ. ಆದರೆ ನಗರಸಭೆಯ ಅಂಗಳದಲ್ಲೇ ವಿಧಾನ ಪರಿಷತ್ ಸದಸ್ಯರೆಂದು ಎನಿಸಿದವರೇ ಈ ರೀತಿ ಅಕ್ರಮ ಕಟ್ಟಡ ಕಟ್ಟುವಾಗ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತರೇ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.
ರಸ್ತೆ ಬದಿಯಲ್ಲಿ ನಿರ್ಮಾಣಗೊಳ್ಳುವ ಕಟ್ಟಡಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇರಬೇಕು. ಅನಾಹುತಗಳ ಸಂದರ್ಭದಲ್ಲಿ ಕಾರ್ಯಾಚರಿಸಲು ಸೆಟ್ ಬ್ಯಾಕ್ ಜಾಗ ಹೊಂದಿರಬೇಕು. ಆದರೆ, ಈ ಕಟ್ಟಡದಲ್ಲಿ 28 ವಾಣಿಜ್ಯ ಮಳಿಗೆಗಳಿದ್ದರೂ, ಯಾವುದೇ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಮಳಿಗೆ ಆರಂಭಗೊಂಡರೆ ವಾಹನಗಳೆಲ್ಲ ರಸ್ತೆಯಲ್ಲೇ ಪಾರ್ಕಿಂಗ್ ಮಾಡಬೇಕಷ್ಟೆ ಎಂದು ಜನರು ಹೇಳುತ್ತಿದ್ದಾರೆ.
ಹಳೆ ಕಟ್ಟಡದ ಮೇಲೆ ಮತ್ತಷ್ಟು ಮಹಡಿಗಳನ್ನು ಕಟ್ಟುತ್ತಿರುವ ನಿರ್ಮಾಣ ಕಾಮಗಾರಿ ಹೊತ್ತ ಇಂಜಿನಿಯರ್ಸ್, ಮುಂದಿನ ನಡೆಯುವ ಅನಾಹುತಗಳಿಗೆ ಹೊಣೆಯಾಗ ಬೇಕಾಗುತ್ತದೆ. ಜನಪ್ರತಿನಿಧಿಗಳೇ ಹೀಗೆ ಕಾನೂನು ಗಾಳಿಗೆ ತೂರಿ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು ಹಣವಂತರ ಮುಂದೆ ಯಾವುದೇ ನೀತಿಗಳು ಲೆಕ್ಕಕ್ಕಿಲ್ಲವೇ ಎಂಬ ಮಾತುಗಳು ಕೇಳಿಬರುತ್ತಿವೆ.
The Ullal Muncilapity Corporation has issued a stay order on the building construction of MLC B M Farooq. It is said that the building was illegally constructing floor without permission from the Ullal town municipality.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm