Venur Blast News, Mangalore: ವೇಣೂರಿನಲ್ಲಿ ಪಟಾಕಿ ದುರಂತ ; ಮಾಲಕ ಪೊಲೀಸ್ ವಶಕ್ಕೆ, ಫಾರೆನ್ಸಿಕ್ ತಜ್ಞರ ತಪಾಸಣೆ, ಸ್ಥಳದಲ್ಲಿ ದೊಡ್ಡ ಗಾತ್ರದ ಸಿಡಿಮದ್ದು ಪತ್ತೆ 

29-01-24 01:36 pm       Mangalore Correspondent   ಕರಾವಳಿ

ವೇಣೂರು ಬಳಿ ಪಟಾಕಿ ತಯಾರಿ ಘಟಕದಲ್ಲಿ ನಡೆದ ಭೀಕರ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಫ್ಯಾಕ್ಟರಿ ಮಾಲಕ ಸಯ್ಯದ್ ಬಷೀರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಂಗಳೂರು, ಜ.29: ವೇಣೂರು ಬಳಿ ಪಟಾಕಿ ತಯಾರಿ ಘಟಕದಲ್ಲಿ ನಡೆದ ಭೀಕರ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಫ್ಯಾಕ್ಟರಿ ಮಾಲಕ ಸಯ್ಯದ್ ಬಷೀರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವೇಣೂರಿನಿಂದ ಮೈಸೂರು ಕಡೆಗೆ ಪರಾರಿಯಾಗುತ್ತಿದ್ದ ಬಶೀರ್ ನನ್ನು ಪೊಲೀಸರು ಸುಳ್ಯದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.‌

ಸ್ಫೋಟಗೊಂಡ ಸ್ಥಳಕ್ಕೆ ಫಾರೆನ್ಸಿಕ್ ತಜ್ಞರು ಆಗಮಿಸಿದ್ದು ಸ್ಫೋಟಕದ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಗೋಳಿಯಂಗಡಿ ಬಳಿಯ ಕುಕ್ಕೇಡಿ ಎಂಬಲ್ಲಿ ತೋಟದ ಮಧ್ಯೆ ಶೆಡ್ ಒಂದರಲ್ಲಿ ಸುಡು ಮದ್ದುಗಳನ್ನು ತಯಾರಿಸುತ್ತಿದ್ದರು. ಒಂಬತ್ತು ಮಂದಿ ಕಾರ್ಮಿಕರು ಸ್ಥಳದಲ್ಲಿ ಕೆಲಸ ಮಾಡುತ್ತಿದ್ದರು. 

ಸ್ಥಳದಲ್ಲಿ ಸ್ಥಳೀಯವಾಗಿ ಕದೊನಿ ಎಂದು ಹೇಳುವ ದೊಡ್ಡ ಗಾತ್ರದ ಸುಡುಮದ್ದು ಅಥವಾ ಮಿನಿ ಬಾಂಬ್ ಮಾದರಿಯ ವಸ್ತುಗಳು ಪತ್ತೆಯಾಗಿದೆ. ಹತ್ತಕ್ಕೂ ಹೆಚ್ಚು ಇಂತಹ ಕದೊನಿ ಬಾಂಬ್ ಮಾದರಿಗಳು ಸಿಕ್ಕಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆ ಸಂಜೆ ಐದು ಬಾರಿ ದೊಡ್ಡ ಸದ್ದಿನೊಂದಿಗೆ ಸ್ಫೋಟಗೊಂಡಿದ್ದು ಇದರಿಂದ ಅಲ್ಲಿಯೇ ಬಳಿಯಿದ್ದ ವೃದ್ಧ ದಂಪತಿಯ ಮನೆ ಕುಸಿದು ಬಿದ್ದಿದೆ. ಘಟನೆಯಿಂದ ವೃದ್ಧ ದಂಪತಿ ಆತಂಕಕ್ಕೆ ಈಡಾಗಿದ್ದಾರೆ.‌

ಮಂಗಳೂರಿನಿಂದ ಸ್ಥಳಕ್ಕೆ ಫಾರೆನ್ಸಿಕ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದು ತನಿಖೆ ನಡೆಸಿದ್ದಾರೆ. ಸ್ಥಳಕ್ಕೆ ಬಂದ ಎಸ್ಪಿ ರಿಷ್ಯಂತ್ ಸಿಂಗ್  ಮಾಧ್ಯಮಕ್ಕೆ ಸ್ಫೋಟದ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ಪ್ರಕಾರ, ಬಶೀರ್ ನಿಂದಲೇ ಸುಡುಮದ್ದುಗಳನ್ನು ಖರೀದಿಸುತ್ತಿದ್ದರು. ಉತ್ಸವ, ಜಾತ್ರೆ ಉದ್ದೇಶಕ್ಕಾಗಿ ಈತನಲ್ಲಿ ಸುಡುಮದ್ದು, ಪಟಾಕಿ ತಯಾರಿಗೆ ಹೇಳುತ್ತಿದ್ದರು. ಮೈಸೂರಿನಿಂದ ಬಂದಿದ್ದ ಕಂಟ್ರಾಕ್ಟ್ ಪಡೆದು ಸುಡುಮದ್ದುಗಳನ್ನು ದೊಡ್ಡ ಮಟ್ಟದಲ್ಲಿ ತಯಾರಿಸುತ್ತಿದ್ದರು ಎನ್ನುವ ಮಾಹಿತಿಯಿದೆ. ಯಾವ ಮಾದರಿಯ ವಸ್ತುಗಳನ್ನು ಸ್ಪೋಟಕಕ್ಕೆ ಬಳಸಲಾಗಿದೆ ಎಂಬ ಬಗ್ಗೆ ಫಾರೆನ್ಸಿಕ್ ರಿಪೋರ್ಟ್ ಪಡೆಯುತ್ತೇವೆ. ಘಟಕದ ಮಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಇತರೇ ಕಾರ್ಮಿಕರಿಂದಲೂ ಮಾಹಿತಿ ಸಂಗ್ರಹಿಸಿದ್ದೇವೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. 

ಸ್ಫೋಟ ಘಟನೆಯಲ್ಲಿ ಕೇರಳ ಮೂಲದ ಕಾರ್ಮಿಕರಾದ ವರ್ಗೀಸ್(60),  ಕುಂಞ್ಞ ಸ್ವಾಮಿ(60), ಹಾಸನ ಮೂಲದ ಚೇತನ್ (24) ಎಂಬವರು ಸಾವನ್ನಪ್ಪಿದ್ದಾರೆ. ಆರು ಮಂದಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ‌

Blast at Venur, Belthangady, Mangalore: ವೇಣೂರು ಬಳಿ ಪಟಾಕಿ ತಯಾರಿ ಘಟಕದಲ್ಲಿ ಭಾರೀ ಸ್ಫೋಟ ; ಮೂವರು ಕಾರ್ಮಿಕರು ಸಾವು 

Mangalore Venur blast, three killed: ವೇಣೂರು ಪಟಾಕಿ ಘಟಕದಲ್ಲಿ ಸ್ಫೋಟ ಪ್ರಕರಣ ; ಕೇರಳದ ಇಬ್ಬರು, ಹಾಸನದ ಒಬ್ಬ ಸಾವು, ಆರು ಮಂದಿಗೆ ಗಂಭೀರ ಗಾಯ

Venur Blast news, owner of the fire work factory arrested by police in Mangalore. Three persons were killed in a blast at a licenced cracker manufacturing unit under Kukkedy Gram Panchayat, near Venur, of Belthangady taluk on Sunday, January 28.