ಬ್ರೇಕಿಂಗ್ ನ್ಯೂಸ್
03-02-24 08:06 pm Mangalore Correspondent ಕರಾವಳಿ
ಮಂಗಳೂರು, ಫೆ.3: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ಏಳು ವಿಧಾನಸಭಾ ಕ್ಷೇತ್ರಗಳ ಮಂಡಲಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಪುತ್ತೂರು ಹೊರತುಪಡಿಸಿ ಉಳಿದ ಏಳು ಕಡೆಗಳಿಗೆ ಮಾತ್ರ ಅಧ್ಯಕ್ಷರನ್ನು ನೇಮಕ ಮಾಡಿರುವುದು ಕುತೂಹಲ ಮೂಡಿಸಿದೆ. ಅರುಣ್ ಪುತ್ತಿಲ ಬಿಜೆಪಿ ಸೇರುತ್ತಾರೆ ಎಂಬ ಸೂಚನೆ ಇರುವ ಕಾರಣವೋ ಏನೋ ಪುತ್ತೂರು ಬಿಜೆಪಿ ಮಂಡಲಾಧ್ಯಕ್ಷ ಸ್ಥಾನ ಖಾಲಿ ಬಿಡಲಾಗಿದೆ. .
ಬೆಳ್ತಂಗಡಿ ಶ್ರೀನಿವಾಸ ರಾವ್, ಮೂಡುಬಿದಿರೆ ದಿನೇಶ್ ಪುತ್ರನ್, ಮಂಗಳೂರು ನಗರ ಉತ್ತರ ಕ್ಷೇತ್ರಕ್ಕೆ ರಾಜೇಶ್ ಕೊಟ್ಟಾರಿ, ಮಂಗಳೂರು ನಗರ ದಕ್ಷಿಣ ಕ್ಷೇತ್ರಕ್ಕೆ ರಮೇಶ್ ಕಂಡೆಟ್ಟು, ಮಂಗಳೂರು (ಉಳ್ಳಾಲ) ಕ್ಷೇತ್ರಕ್ಕೆ ಜಗದೀಶ ಆಳ್ವ ಕುವೆತ್ತಬೈಲು, ಬಂಟ್ವಾಳ ಕ್ಷೇತ್ರಕ್ಕೆ ಚೆನ್ನಪ್ಪ ಕೋಟ್ಯಾನ್, ಸುಳ್ಯ ಕ್ಷೇತ್ರಕ್ಕೆ ವೆಂಕಟ್ ವಳಲಂಬೆ ಅವರನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್ ಸುಳ್ಯ, ಕಿಶೋರ್ ಬೊಟ್ಯಾಡಿ ಪುತ್ತೂರು ಅವರನ್ನು ನೇಮಕ ಮಾಡಲಾಗಿದೆ.
ಯುವಮೋರ್ಚಾ ಜಿಲ್ಲಾಧ್ಯಕ್ಷರಾಗಿ ಉಳ್ಳಾಲ ನಂದನ್ ಮಲ್ಯ, ಮಹಿಳಾ ಮೋರ್ಚಾಕ್ಕೆ ಮಂಜುಳಾ ರಾವ್, ಎಸ್ಸಿ ಮೋರ್ಚಾಕ್ಕೆ ಜಗನ್ನಾಥ ಬೆಳ್ವಾಯಿ, ಎಸ್ಟಿ ಮೋರ್ಚಾಕ್ಕೆ ಹರೀಶ್ ಬಿಜತ್ರೆ, ರೈತ ಮೋರ್ಚಾ ಅಧ್ಯಕ್ಷರಾಗಿ ಗಣೇಶ್ ಗೌಡ ನಾವುರ ಅವರನ್ನು ನೇಮಕ ಮಾಡಲಾಗಿದೆ. ಉಳಿದಂತೆ ಜಿಲ್ಲಾ ವಕ್ತಾರ ಹುದ್ದೆಗೆ ರಾಜಗೋಪಾಲ ರೈ, ಮೋಹನರಾಜ್ ಕೆ.ಆರ್, ಅರುಣ್ ಶೇಟ್ ಅವರನ್ನು ನಿಯುಕ್ತಿ ಮಾಡಲಾಗಿದೆ. ಮಾಧ್ಯಮ ಪ್ರಮುಖರನ್ನಾಗಿ ವಸಂತ ಜೆ. ಪೂಜಾರಿ, ಮನೋಹರ್ ಶೆಟ್ಟಿಗೆ ಜವಾಬ್ದಾರಿ ನೀಡಲಾಗಿದೆ. ಸಾಮಾಜಿಕ ಜಾಲತಾಣ ಸಂಚಾಲಕ ಹುದ್ದೆಗೆ ದಿರೇಶ್ ಕೆ., ಸಹ ಸಂಚಾಲಕರಾಗಿ ಅಕ್ಷಯ್ ಆಳ್ವ, ಕಾರ್ತಿಕ್ ರಾವ್ ಗಂಜಿಮಠ ಅವರನ್ನು ನಿಯುಕ್ತಿ ಮಾಡಲಾಗಿದೆ.
ಜಿಲ್ಲಾ ಉಪಾಧ್ಯಕ್ಷರಾಗಿ ಸುನಿಲ್ ಆಳ್ವ ಮೂಲ್ಕಿ, ಜಯಂತ ಪೂಜಾರಿ ಬೆಳ್ತಂಗಡಿ, ತಿಲಕರಾಜ್ ಕೃಷ್ಣಾಪುರ, ರವೀಂದ್ರ ಶೆಟ್ಟಿ ಉಳಿದೊಟ್ಟು, ಪೂಜಾ ಪೈ, ರಾಕೇಶ್ ರೈ ಕೆಡೆಂಜಿ, ಶಾಂತಿಪ್ರಸಾದ್ ಹೆಗ್ಡೆ ಅವರನ್ನು ನಿಯುಕ್ತಿ ಮಾಡಿದ್ದು ಜಿಲ್ಲಾ ಕಾರ್ಯದರ್ಶಿ ಸ್ಥಾನಕ್ಕೆ ಎಂಟು ಮಂದಿಯನ್ನು ನೇಮಕ ಮಾಡಲಾಗಿದೆ. ವಿನಯ ಮುಳುಗಾಡು, ದೇವಪ್ಪ ಪೂಜಾರಿ ಬಂಟ್ವಾಳ, ಕವಿತಾ ದಿನೇಶ್ ಮೂಡುಶೆಡ್ಡೆ, ವಸಂತಿ ಕುಲಾಲ್ ಮಚ್ಚಿನ, ಪೂರ್ಣಿಮಾ, ವಿದ್ಯಾಗೌರಿ ಪುತ್ತೂರು, ದಿನೇಶ್ ಅಮ್ಟೂರು, ಸೀತಾರಾಮ ಬೆಳಾಲು, ಕೋಶಾಧಿಕಾರಿಯಾಗಿ ಸಂಜಯ ಪ್ರಭು, ಅರವಿಂದ ಬೆಂಗ್ರೆ ಕಾರ್ಯಾಲಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಇತ್ತೀಚೆಗೆ ನೂತನ ಜಿಲ್ಲಾಧ್ಯಕ್ಷರಾಗಿ ಸತೀಶ ಕುಂಪಲ ನೇಮಕಗೊಂಡ ಬಳಿಕ ಪೂರ್ತಿ ಕಮಿಟಿಯನ್ನು ಹೊಸತಾಗಿ ರಚಿಸಿದ್ದಾರೆ. ಪುತ್ತೂರಿನಲ್ಲಿ ಅರುಣ್ ಪುತ್ತಿಲ ಸೇರುವುದಕ್ಕೆ ಬಿಜೆಪಿಯಲ್ಲಿ ವಿರೋಧ ಇರುವುದು ಮತ್ತು ಅಲ್ಲಿನ ಅಧ್ಯಕ್ಷ ಹುದ್ದೆಗೆ ಪ್ರಬಲ ಆಕಾಂಕ್ಷಿಯಾಗಿದ್ದ ಕಿಶೋರ್ ಬೊಟ್ಯಾಡಿ ಅವರನ್ನು ಜಿಲ್ಲಾ ಕಾರ್ಯದರ್ಶಿ ಸ್ಥಾನಕ್ಕೆ ತರುವ ಮೂಲಕ ರಾಜಕೀಯ ದಾಳ ಉರುಳಿಸಲಾಗಿದೆ. ಇದರೊಂದಿಗೆ ಅರುಣ್ ಪುತ್ತಿಲ ಅವರಿಗೆ ಜಿಲ್ಲಾ ಕಮಿಟಿಯಲ್ಲಿ ಸ್ಥಾನ ಸಿಗುವ ಅವಕಾಶವೂ ಇಲ್ಲವಾಗಿದೆ.
Will BJP try to convince Puttur Arun Puthila this coming assembly elections? Former MLA Sanjeeva Matandoor has, however, laid out three conditions for Puthila’s inclusion, adding an intriguing element to the unfolding political scenario.
11-01-25 10:53 pm
HK News Desk
ಕೊಪ್ಪದ ಮೇಗೂರು ಅರಣ್ಯದಲ್ಲಿ ಶರಣಾಗಿದ್ದ ನಕ್ಸಲರ ಶಸ...
11-01-25 10:27 pm
BBMP Raid, Lokayukta; ಬಿಬಿಎಂಪಿ 50 ಕಡೆಗಳಲ್ಲಿ ಲ...
11-01-25 09:14 pm
CT Ravi,Threat, Lakshmi Hebbalkar; ಬೆಳಗಾವಿ ಅಭ...
11-01-25 02:11 pm
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
12-01-25 12:33 pm
Mangalore Correspondent
CM Siddaramaiah, Kambala Mangalore, Naringana...
11-01-25 10:34 pm
Mangalore Lit Fest 2025, Hardeep Singh Puri;...
11-01-25 07:19 pm
DYFI, CM Siddaramaiah, IPS Anupam Agrawal; ಪೊ...
11-01-25 04:57 pm
Lava Kusha Jodukare Kambala, Mangalore; ತೃತೀಯ...
11-01-25 02:25 pm
11-01-25 10:21 pm
Mangalore Correspondent
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm