ಬ್ರೇಕಿಂಗ್ ನ್ಯೂಸ್
09-02-24 05:25 pm Mangaluru Correspondent ಕರಾವಳಿ
ಮಂಗಳೂರು, ಫೆ.9: ಸ್ಕೂಟರ್ ಚಲಾಯಿಸುತ್ತಿದ್ದಾಗ ನಾಯಿಯನ್ನು ತಪ್ಪಿಸಲು ಹೋಗಿ ರಸ್ತೆ ಬದಿಯ ಕಂಬವೊಂದಕ್ಕೆ ಡಿಕ್ಕಿಯಾದ ಕಾರಣ ತಲೆಗೆ ತೀವ್ರ ಪೆಟ್ಟು ಬಿದ್ದ ಯುವಕನೊಬ್ಬ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಮರೋಳಿ ಬಳಿ ನಡೆದಿದೆ.
ಕುಲಶೇಖರ ನಿವಾಸಿ ಸ್ಟಾನ್ಲೀ – ಸುನೀತಾ ಡಿಸೋಜ ದಂಪತಿಯ ಪುತ್ರ, ಇಂಜಿನಿಯರಿಂಗ್ ವಿದ್ಯಾರ್ಥಿ ಟೆರ್ರೆನ್ಸ್ ಡಿಸೋಜ(21) ಮೃತ ಯುವಕ. ಗುರುವಾರ ರಾತ್ರಿ 10 ಗಂಟೆ ವೇಳೆಗೆ ಯುವಕ ಕುಲಶೇಖರ್ ಕೋರ್ಡೆಲ್ ಚರ್ಚ್ ನಲ್ಲಿ ಹೆತ್ತವರ ಜೊತೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ. ಬಳಿಕ ಪಡೀಲ್ ಪೆಟ್ರೋಲ್ ಪಂಪ್ ಗೆ ಹೋಗಿ ಬರುತ್ತೇನೆಂದು ಹೇಳಿ ಹೊರಟಿದ್ದ. ಈ ವೇಳೆ, ಬಿಕರ್ನಕಟ್ಟೆಯ ಫ್ಲೈಓವರ್ ಬಳಿಯಿಂದ ಸರ್ವಿಸ್ ರಸ್ತೆಯಲ್ಲಿ ಹೋಗುವಾಗಲೇ ನಾಯಿ ಮರಿಯೊಂದು ಹಠಾತ್ ರಸ್ತೆಗೆ ಅಡ್ಡ ಬಂದಿದ್ದು ಅದನ್ನು ತಪ್ಪಿಸಲು ಯತ್ನಿಸಿದ್ದಾನೆ. ವೇಗವಾಗಿದ್ದ ಸ್ಕೂಟರ್ ನೇರವಾಗಿ ರಸ್ತೆ ಬದಿಯ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ಹೆಲ್ಮೆಟ್ ಹಾಕಿಲ್ಲದ ಕಾರಣ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು.
ಕೂಡಲೇ ಸ್ಥಳೀಯರು ಹುಡುಗನನ್ನು ಎಜೆ ಆಸ್ಪತ್ರೆಗೆ ಒಯ್ದಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಟ್ಟು ನುರಿತ ವೈದ್ಯರು ಲಭ್ಯರಿಲ್ಲ ಎಂದು ಬೇರೆ ಕಡೆಗೆ ಒಯ್ಯಲು ತಿಳಿಸಿದ್ದಾರೆ. ಬಳಿಕ ಕೆಎಂಸಿ ಆಸ್ಪತ್ರೆಗೆ ಕರೆದೊಯ್ದಿದ್ದು ಅಷ್ಟರಲ್ಲಿ ತೀವ್ರ ರಕ್ತಸ್ರಾವದಿಂದ ತಡರಾತ್ರಿ 1.30 ಗಂಟೆ ವೇಳೆಗೆ ಯುವಕ ಮೃತಪಟ್ಟಿದ್ದಾನೆ.
ಟೆರ್ರೆನ್ಸ್ ಡಿಸೋಜ ವಾಮಂಜೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಇತರೇ ಚಟುವಟಿಕೆಗಳಲ್ಲಿಯೂ ಸಕ್ರಿಯನಾಗಿದ್ದ. ನಿನ್ನೆ ರಾತ್ರಿ ಕೋರ್ಡೆಲ್ ಚರ್ಚ್ ನಲ್ಲಿ ಕಾರ್ಯಕ್ರಮ ನಡೆದಿದ್ದು ಅದರಲ್ಲಿ ತಂದೆ, ತಾಯಿಯೂ ಪಾಲ್ಗೊಂಡಿದ್ದರು. ಅಪಘಾತದಲ್ಲಿ ಟೆರ್ರೆನ್ಸ್ ಸಾವಿಗೀಡಾಗಿರುವುದು ಸ್ನೇಹಿತ ವಲಯದಲ್ಲಿ ಶಾಕ್ ಮೂಡಿಸಿದೆ. ಬಿಕರ್ನಕಟ್ಟೆಯಲ್ಲಿ ರಸ್ತೆ ಬದಿ ನಾಯಿಗಳಿಗೆ ಊಟ ಹಾಕುವುದರಿಂದ ಬೀದಿ ನಾಯಿಗಳ ಉಪಟಳ ಹೆಚ್ಚಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
Terrence D'Souza, a Mangalore St Josephs college Engineer student, was killed when his two-wheeler slammed into an iron pole after a dog unexpectedly appeared in the center of the road. The victim, identified as Terrence D'Souza (21), son of Stanley and Sunitha D'Souza from Kulshekar,
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
17-09-25 09:44 pm
HK News Desk
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm