ಬ್ರೇಕಿಂಗ್ ನ್ಯೂಸ್
10-02-24 04:21 pm Mangalore Correspondent ಕರಾವಳಿ
ಮಂಗಳೂರು, ಫೆ.10: ಶಾಲಾ ಶಿಕ್ಷಕಿಯೊಬ್ಬರು ಮಕ್ಕಳಿಗೆ ಹಿಂದು ಧರ್ಮದ ಬಗ್ಗೆ ನಿಂದನೆಯ ಮಾತುಗಳನ್ನಾಡಿದ್ದಲ್ಲದೆ, ಅಯೋಧ್ಯೆ ರಾಮಮಂದಿರ, ಪ್ರಧಾನಿ ಮೋದಿ ಬಗ್ಗೆ ಅವಹೇಳನ ರೀತಿಯಲ್ಲಿ ಶಾಲಾ ತರಗತಿಯಲ್ಲಿ ಬೋಧನೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಪೋಷಕರೊಬ್ಬರ ಆಡಿಯೋ ವೈರಲ್ ಆಗಿದ್ದು, ಇದರ ಹಿನ್ನೆಲೆಯಲ್ಲಿ ಹಿಂದು ಸಂಘಟನೆ ಕಾರ್ಯಕರ್ತರು ಶಾಲೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ನಗರದ ವೆಲೆನ್ಸಿಯಾದಲ್ಲಿರುವ ಸಂತ ಜೆರೋಸಾ ಪ್ರಾಥಮಿಕ ಶಾಲೆಯ ಏಳನೇ ತರಗತಿ ಮಕ್ಕಳಿಗೆ ವರ್ಕ್ ಈಸ್ ವರ್ಶಿಪ್ ಎನ್ನುವ ಪಠ್ಯವಿದ್ದು, ಅದರ ನೆಪದಲ್ಲಿ ಹಿಂದು ಧರ್ಮವನ್ನು ನಿಂದಿಸಿ ತರಗತಿಯಲ್ಲಿ ಬೋಧನೆ ಮಾಡಿದ್ದಾರೆ. ಹಿಂದುಗಳಿಗೆ ಅಸ್ತಿತ್ವ ಇಲ್ಲ. ಭಾರತದಲ್ಲಿ ಮಾತ್ರ ಹಿಂದುಗಳಿದ್ದಾರೆ. ಹಿಂದುಗಳ ಹುಟ್ಟು ಎಲ್ಲಿಂದಲೇ ಇವರಿಗೆ ತಿಳಿದಿಲ್ಲ. ಅಯೋಧ್ಯೆಯಲ್ಲಿ ಕಲ್ಲಿನ ಮೂರ್ತಿ ಮಾಡಿ ಇಟ್ಟ ಕೂಡಲೇ ಅಲ್ಲಿಗೆ ರಾಮ ಬರುತ್ತಾನೆಯೇ..? ಮಸೀದಿಯನ್ನು ಒಡೆದು ಡೆಕೋರೇಶನ್ ಮಾಡಿ ಮಂದಿರ ಕಟ್ಟಬೇಕಿತ್ತೇ.? ರಾಮಾಯಣ, ರಾಮ ಎಲ್ಲ ಕಾಲ್ಪನಿಕ. ಅದನ್ನು ಹೇಗೆ ನಂಬುತ್ತೀರಿ ಇತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟು ಮಕ್ಕಳಲ್ಲಿ ಹಿಂದು ಧರ್ಮದ ಬಗ್ಗೆ ಅಪನಂಬಿಕೆ ಬರುವ ರೀತಿ ಮಾಡಿದ್ದಾರೆಂದು ಆಡಿಯೋದಲ್ಲಿ ತನ್ನ ಮಗಳಿಗಾದ ಅನುಭವದ ಬಗ್ಗೆ ಪೋಷಕರೊಬ್ಬರು ಆಡಿಯೋ ಬಿಟ್ಟಿದ್ದಾರೆ.
ಆಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಹಿಂದು ಸಂಘಟನೆ ಕಾರ್ಯಕರ್ತರು ಶಾಲೆಯ ಆವರಣಕ್ಕೆ ಬಂದು ಧಿಕ್ಕಾರ ಕೂಗಿದ್ದಾರೆ. ಅಲ್ಲದೆ, ಶಾಲೆಯ ಆಡಳಿತ ಮಂಡಳಿ ಜೊತೆಗೂ ಮಾತನಾಡಿದ್ದು, ಶಿಕ್ಷಕಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇದೇ ವೇಳೆ, ಮಾಜಿ ಎಂಎಲ್ಸಿ ಐವಾನ್ ಡಿಸೋಜ ಶಾಲೆಗೆ ಭೇಟಿ ನೀಡಿದ್ದು, ಸಂಘಟನೆ ಕಾರ್ಯಕರ್ತರು ಧಿಕ್ಕಾರ ಕೂಗಿದ್ದಾರೆ. ಮಾಧ್ಯಮಕ್ಕೆ ಪ್ರತಿಕ್ರಿಯೆ ಬಯಸಿದಾಗ, ಕೆಲವು ಪೋಷಕರು ನನ್ನಲ್ಲಿ ಹಿಂದು ಧರ್ಮದ ದೇವರ ಅವಹೇಳನದ ಬಗ್ಗೆ ಹೇಳಿದ್ದಾರೆ. ಶಾಲಾಡಳಿತ ಜೊತೆಗೆ ಮಾತನಾಡಿದ್ದೇನೆ. ತನಿಖೆ ಮಾಡಿ, ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದಿದ್ದಾರೆ.
ಆನಂತರ, ಒಂದಷ್ಟು ಮಹಿಳಾ ಪೋಷಕರು ಶಾಲೆಯ ಆವರಣಕ್ಕೆ ಬಂದಿದ್ದು, ಶಿಕ್ಷಕಿಯ ಬಗ್ಗೆ ಆರೋಪಗಳನ್ನು ಮಾಡಿದ್ದಾರೆ, ಸಿಸ್ಟರ್ ಪ್ರಭಾ ಎಂಬ ಶಿಕ್ಷಕಿ ಈ ಹಿಂದೆಯೂ ಏಳನೇ ತರಗತಿ ಮಕ್ಕಳಿಗೆ ಹಿಂದು ದೇವರ ನಿಂದನೆಗಳನ್ನು ಮಾಡಿ ಮಾತನಾಡಿದ್ದರು. ನನ್ನ ಮಗಳಿಗೆ ಒಂದು ತಿಂಗಳ ಹಿಂದೆಯೇ ರಾಮ ಮತ್ತು ಅಯೋಧ್ಯೆ ಬಗ್ಗೆ ನಿಂದಿಸಿ ಹೇಳಿದ್ದರು. ಅದರ ಬಗ್ಗೆ ಮಗಳು ಬಂದು ನನ್ನಲ್ಲಿ ಹೇಳಿಕೊಂಡಿದ್ದಳು. ರಾಮ ಇದ್ದಾನೆ ಅಂದರೆ ಆಕೆಗೆ ತಕ್ಕ ಶಾಸ್ತಿ ಆದೀತು ಎಂದುಕೊಂಡಿದ್ದೆ. ಈಗ ಜನರೇ ಆಕೆಯ ವಿರುದ್ಧ ಎದ್ದು ನಿಂತಿದ್ದಾರೆ. ಆ ಶಿಕ್ಷಕಿಗೆ ಶಾಲೆಯಲ್ಲಿ ಪಾಠ ಹೇಳುವುದು ಬಿಟ್ಟು ರಾಜಕೀಯ ಯಾಕೆ ಎಂದು ಪ್ರಶ್ನಿಸಿದರು.
Mangalore St Gerosa English school at jeepu in trouble after Christian teacher talks wrong about Hindu Gods, parents hindu outfits gherao school.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm