ಬ್ರೇಕಿಂಗ್ ನ್ಯೂಸ್
14-02-24 11:07 pm Mangalore Correspondent ಕರಾವಳಿ
ಉಳ್ಳಾಲ, ಫೆ.14: ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಮಾರ್ಗದರ್ಶನದಲ್ಲಿ ಮಲೆನಾಡು ಗಿಡ್ಡ ತಳಿ ಗೋವುಗಳ ಅಭಿವೃದ್ಧಿ ಜೊತೆಗೆ ಕೈರಂಗಳದ ಪುಣ್ಯಕೋಟಿ ನಗರದ ಅಮೃತಧಾರಾ ಗೋಶಾಲೆಯಲ್ಲಿ ಕಳೆದ ಜ.14ರಿಂದ ನಡೆದುಬಂದ ಒಂದು ತಿಂಗಳ ಗೋಸೇವಾ ಮಾಸಾಚರಣೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಫೆ.13ರ ಮಂಗಳವಾರ ದೀಪೋತ್ಸವದ ಮೂಲಕ ಸಂಪನ್ನಗೊಂಡಿತು.
ಮಕರ ಸಂಕ್ರಮಣದಂದು ಆರಂಭಗೊಂಡಿದ್ದ ಗೋಸೇವಾ ಮಾಸಾಚರಣೆ ಕುಂಭ ಮಾಸದಂದು ಸಮಾಪನಗೊಂಡಿದೆ. ಮಕರ ಮಾಸದಲ್ಲಿ ಗೋದರ್ಶನ ಮಾಡಿದವರ ಜನ್ಮ ಪಾವನವಾಗುತ್ತದೆ ಎಂದು ನಂಬಿಕೆಯಿದೆ. ಹೀಗಾಗಿ ಭಕ್ತರು ನಿತ್ಯವೂ ಭಜನೆ, ಶ್ರೀಮದ್ ರಾಮಾಯಣ, ಭಗವದ್ಗೀತೆ ಪಾರಾಯಣದ ಸವಿಯನ್ನು ಅನುಭವಿಸಿದರು.




ಗೋಸೇವಾ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಗೋಸೇವೆ ನಿತ್ಯವೂ ನಡೆಯಿತು. ಪ್ರತಿನಿತ್ಯ ಸಂಜೆ ವಿವಿಧ ಭಜನಾ ಮಂಡಳಿಗಳ ಆಶ್ರಯದಲ್ಲಿ ಸಂದ್ಯಾ ಭಜನೆ ನಡೆಯಿತು. ಗೋಸೇವಾ ಮಾಸಾಚರಣೆಯ ಕೊನೆಯ ದಿನವಾದ ಸೋಮವಾರ ಭಜನಾ ಮಂಗಳೋತ್ಸವ ಹಾಗೂ ದೀಪೋತ್ಸವ ಮೂಲಕ ಗೋಸೇವಾ ಮಾಸಾಚರಣೆ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಗೋಶಾಲಾ ಸಂಚಾಲಕ ಟಿ.ಜಿ ರಾಜಾರಾಮ್ ಭಟ್ ಮಾತನಾಡಿ, ಗೋಸೇವೆಯ ಮಾಸಾಚರಣೆಯಲ್ಲಿ ತೊಡಗಿಸಿಕೊಂಡ ಎಲ್ಲರಿಗೂ ಆ ಗೋಮಾತೆಯ ಆಶೀರ್ವಾದವಿರಲಿ ಹಾಗೂ ಗೋಸೇವೆ ನಿತ್ಯ ನಿರಂತರವಾಗಿ ನಡೆಯಲಿದ್ದು, ಎಲ್ಲರಿಗೂ ಭಾಗವಹಿಸಲು ಅವಕಾಶವಿದೆ. ಹಣದಿಂದ ಭೋಗ ಮತ್ತು ದಾನ ಎರಡನ್ನು ಹೊರತು ಬೇರೆ ಏನೂ ಮಾಡಲು ಸಾಧ್ಯವಿಲ್ಲ. ರಕ್ತ ಮತ್ತು ಹಣ ಒಂದೇ ಕಡೆ ಉಳಿಯಬಾರದು, ಹರಿಯುತ್ತಿರಬೇಕು. ಅದಕ್ಕಾಗಿ ದಾನ ಮಾಡಿ ಎಂದರು.
ಬೆಂಗಳೂರಿನ ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು ಉಪಸ್ಥಿತರಿದ್ದರು.
The month-long 'Goseva Maasa' celebrations, which began on January 14 at Amritadhara Goshala in Punyakoti town of Kairangala, with the development of Malnad short breed cows under the guidance of Sri Raghaveshwara Bharathi Swamiji, concluded with deepotsava on Tuesday, Feb. 13, with various religious and cultural programmes.
01-10-26 10:50 pm
HK News Staffer
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
02-10-26 05:28 pm
HK News Staffer
ಇಸ್ರೇಲ್ ತೆರಳುತ್ತಿದ್ದ ವಿಮಾನ ಹೈಜಾಕ್ ಯತ್ನ ? ಒಮಾ...
02-10-26 10:23 am
ವಿಮಾನ ಅಪಘಾತದ ತನಿಖಾ ವರದಿಗಳೇ ನೆರವಾಯ್ತು..! ದುಬೈ...
01-10-26 11:46 am
ಯುಪಿಐ ನೆಪದಲ್ಲಿ ವ್ಯಾಪಾರಸ್ಥರಿಗೆ ಶುಲ್ಕ ; ಸಚಿವೆ ನ...
01-10-26 11:20 am
Smith Machar, Indian pilot: ದುಬೈನಲ್ಲಿ ವಿಮಾನ ಪ...
01-10-26 11:05 am
02-10-26 05:20 pm
HK News Staffer
Sowjanya case, Lokesh Jagalsar: ಸೌಜನ್ಯ ಪ್ರಕರಣ...
02-10-26 10:25 am
Madoor Yusuf Murder Case: ಜೈಲಿನಲ್ಲಿ ಮಾಡೂರು ಯೂ...
01-10-26 10:45 pm
ಏಶ್ಯನ್ ಗೇಮ್ಸ್ ನಲ್ಲಿ ಪೂವಮ್ಮಗೆ ಚಿನ್ನ ; ರಾಜ್ಯ ಸರ...
01-10-26 08:10 pm
Manish Karkada, MRPL: ಎಂಆರ್ ಪಿಎಲ್ ಅಗ್ನಿ ಅವಘಡ...
01-10-26 06:19 pm
02-10-26 10:19 pm
HK News Staffer
ಕೊಲ್ಲೂರು ; ಬೀಡಾಡಿ ದನವನ್ನು ಕಾರಿನಲ್ಲಿ ತುಂಬಿಸಿಕೊ...
02-10-26 05:24 pm
113 ಕೆಜಿ ಚಿನ್ನ ಕಳ್ಳಸಾಗಣೆ ಕೇಸ್ ; ರನ್ಯಾ ರಾವ್ಗೆ...
01-10-26 02:31 pm
Mangalore Police News: ಪೊಲೀಸ್ ಕಾನ್ಸ್ ಟೇಬಲ್ ನೇ...
01-10-26 11:10 am
Mrpl Fire, Mangalore: ಎಂಆರ್ ಪಿಎಲ್ ಘಟಕದಲ್ಲಿ ದು...
30-09-26 08:59 pm