ಬ್ರೇಕಿಂಗ್ ನ್ಯೂಸ್
23-02-24 09:40 pm Mangalore Correspondent ಕರಾವಳಿ
ಉಳ್ಳಾಲ, ಫೆ.23: ಕೋಟಿ- ಚೆನ್ನಯ, ನಾರಾಯಣ ಗುರುಗಳು ಸಮಾಜದಲ್ಲಿ ತುಳಿಯಲ್ಪಟ್ಟು ಸವಾಲುಗಳನ್ನ ಎದುರಿಸಿಯೇ ದಾರ್ಶನಿಕರಾದರೆಂದು ಸಮಾಜಕ್ಕೆ ತಿಳಿಸಲೆಂದೇ ಡಿವೈಎಫ್ ಐ ರಾಜ್ಯ ಸಮ್ಮೇಳನದ ಪ್ರಚಾರಾರ್ಥ ಫ್ಲೆಕ್ಸ್ ಗಳಲ್ಲಿ ಅವರುಗಳ ಚಿತ್ರಗಳನ್ನ ಬಳಸಲಾಗಿದೆ. ಆರ್ ಎಸ್ಎಸ್, ಬಿಜೆಪಿ ಅದನ್ನೇ ದಾಳವಾಗಿಸಿ ರಾಜಕೀಯ ಬೇಳೆ ಬೇಯಿಸುತ್ತಿದೆ ಎಂದು ಡಿವೈಎಫ್ ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಹೇಳಿದ್ದಾರೆ.
ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್ ಕ್ಲಬ್‍ನಲ್ಲಿ ಆಯೋಜಿಸಲಾದ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಡಿವೈಎಫ್ಐನ 12ನೇ ರಾಜ್ಯ ಸಮ್ಮೇಳನ ಫೆ.25, 26, 27 ರಂದು ಉಳ್ಳಾಲದ ಕಲ್ಲಾಪು ಬಳಿಯ ಯುನಿಟಿ ಸಭಾಂಗಣದಲ್ಲಿ ಜರಗಲಿದೆ ಎಂದು ಹೇಳಿದರು.
ಕೋಟಿ, ಚೆನ್ನಯರು ಸಮಾಜದಲ್ಲಿ ಬೇರೂರಿದ್ದ ಊಳಿಗಮಾನ್ಯ ಪದ್ಧತಿ, ಅಸಮಾನತೆಯ ವಿರುದ್ಧ ಧ್ವನಿಯಾಗಿ ಹೋರಾಡಿ ದೈವತ್ವ ಪಡೆದಿದ್ದಾರೆ. ನಾರಾಯಣ ಗುರುಗಳು, ಸ್ವಾಮಿ ವಿವೇಕಾನಂದರಂತಹ ದಾರ್ಶನಿಕರ ಜೀವನದ ಧ್ಯೇಯಗಳನ್ನ ಸಮಾಜಕ್ಕೆ ತಿಳಿಸುವ ದೃಷ್ಟಿಯಿಂದ ಅವರುಗಳ ಭಾವಚಿತ್ರಗಳನ್ನ ಸಮಾವೇಶದ ಫ್ಲೆಕ್ಸ್ ಗಳಲ್ಲಿ ಬಳಸಲಾಗಿದೆ ಹೊರತು ರಾಜಕೀಯ ಉದ್ದೇಶದಿಂದಲ್ಲ. ನಾವು ಜನರ ಮನಸನ್ನ ಮುಟ್ಟುತ್ತಿದ್ದೇವೆ, ಇದರಿಂದ ಬಿಜೆಪಿಯವರಿಗೆ ಸಮಸ್ಯೆ ಆಗಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯದ ವ್ಯಾಪಾರೀಕರಣ ಎದುರಾಗಿ, ಉದ್ಯೋಗ ಮತ್ತು ಆರೋಗ್ಯದ ಹಕ್ಕುಗಳಿಗಾಗಿ, ಕುಡಿಯುವ ನೀರಿನ ಖಾಸಗೀಕರಣದ ವಿರುದ್ಧ ದ.ಕ ಜಿಲ್ಲೆಯ ಬೃಹತ್ ಕೈಗಾರಿಕೆಗಳು ಇಲ್ಲಿನ ಪರಿಸರವನ್ನು ಮಾಲಿನ್ಯಗೊಳಿಸುವುದರ ವಿರುದ್ಧ, ಸುರತ್ಕಲ್ ಅಕ್ರಮ ಟೋಲ್ ಗೇಟಿನ ತೆರವಿಗಾಗಿ ಡಿವೈಎಫ್ ಐ ಅನೇಕ ಹೋರಾಟಗಳನ್ನು ನಡೆಸಿದೆ. ಫೆ.25 ರಂದು ಬೆಳಗ್ಗೆ 10 ಗಂಟೆಗೆ ಯುನಿಟಿ ಸಭಾಂಗಣದಲ್ಲಿ ಸಮಾವೇಶ ನಡೆಯಲಿದ್ದು, ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಫೆ.27 ರ ಸಮಾರೋಪದ ದಿನದ ಸಂಜೆ 3 ಗಂಟೆಗೆ ಕುತ್ತಾರು ಜಂಕ್ಷನ್ ನಿಂದ ಯುನಿಟಿ ಸಭಾಂಗಣದ ವರೆಗೆ ಯುವಜನರ ವರ್ಣರಂಜಿತ ಪಥ ಸಂಚಲನ ಮೆರವಣಿಗೆ ನಡೆಯಲಿದೆ. ಸಮ್ಮೇಳನದ ಬಹಿರಂಗ ಸಭೆಯಲ್ಲಿ ಸಿಪಿಐಎಂ ಕೇಂದ್ರ ಸಮಿತಿಯ ಸೀತಾರಾಮ ಯೆಚೂರಿ, ಬಹುಭಾಷಾ ಚಲನಚಿತ್ರ ನಟ ಪ್ರಕಾಶ್ ರೈ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಿವೈಎಫ್ ಐ ಪ್ರಮುಖರಾದ ಸಂತೋಷ್ ಬಜಾಲ್, ರಾಮಚಂದ್ರ ಬಬ್ಬುಕಟ್ಟೆ, ರಿಝ್ವಾನ್ ಹರೇಕಳ, ರಝಾಕ್ ಮುಡಿಪು, ಮಹಾಬಲ ಟಿ. ದೆಪ್ಪೆಲಿಮಾರ್ ಭಾಗವಹಿಸಿದ್ದರು.
The pictures of Koti-Chennayya and Narayana Guru have been used in the flexes to promote the DYFI state conference to tell the society that they were oppressed in the society and became philosophers in the face of challenges. DYFI district president B K Imtiyaz said the RSS and the BJP were using it as a pawn and cooking up political dal.
06-08-25 10:51 pm
Bangalore Correspondent
ಅಶೋಕನ ಕಾಲದ ಮೌರ್ಯರ ರಾಜಧಾನಿ ರಾಯಚೂರಿನ ಮಸ್ಕಿ ಆಗಿತ...
05-08-25 01:45 pm
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
06-08-25 12:15 pm
HK News Desk
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
06-08-25 11:11 pm
Mangalore Correspondent
Dharmasthala News, Banglegudde: ಬಂಗ್ಲೆಗುಡ್ಡೆ...
06-08-25 07:37 pm
Sharjah NRI dream college: ಕಾನೂನು ಉಲ್ಲಂಘಿಸಿ ವ...
06-08-25 06:00 pm
ಬೆಂಗಳೂರು ಹೋಗುತ್ತೇನೆಂದು ತೆರಳಿದ್ದ ದೇರಳಕಟ್ಟೆ ಯುವ...
06-08-25 03:45 pm
Looking for a Reliable Nurse, Nanny, or House...
06-08-25 01:06 pm
06-08-25 08:02 pm
Mangalore Correspondent
Bangalore Kidnap, Nischith Murder: ಬೆಂಗಳೂರು ನ...
06-08-25 05:43 pm
Cybercrime, New Fraud, Mobile Hacking: ಅಪರಿಚಿ...
06-08-25 11:23 am
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm