ಬ್ರೇಕಿಂಗ್ ನ್ಯೂಸ್
23-02-24 10:14 pm Mangalore Correspondent ಕರಾವಳಿ
ಮಂಗಳೂರ, ಫೆ.23: ವಿಶ್ವದ ಅತಿದೊಡ್ಡ ಕರಾವಳಿ ಕಾವಲು ಪಡೆಗಳಲ್ಲಿ ಒಂದಾಗಿರುವ ಭಾರತೀಯ ಕೋಸ್ಟ್ ಗಾರ್ಡ್ ತನ್ನ 48ನೇ ವರ್ಷದ ಸ್ಥಾಪನಾ ದಿನಾಚರಣೆ ಅಂಗವಾಗಿ ರೈಸಿಂಗ್ ಡೇ ಹಮ್ಮಿಕೊಳ್ಳಲಾಗಿತ್ತು. ಮಂಗಳೂರಿನ ಬಳಿಯ ಅರಬ್ಬೀ ಸಮುದ್ರ ಮಧ್ಯೆ ಕೋಸ್ಟ್ ಗಾರ್ಡ್ ಸಾಮರ್ಥ್ಯ ಎಷ್ಟರ ಮಟ್ಟಿಗಿದೆ, ಶತ್ರುಗಳನ್ನು ಹಿಮ್ಮೆಟ್ಟಿಸಲು ಎಷ್ಟು ಸಮರ್ಥವಾಗಿದೆ ಎಂಬುದನ್ನು ಕೋಸ್ಟ್ ಗಾರ್ಡ್ ಅಣಕು ಕಾರ್ಯಾಚರಣೆ ಮೂಲಕ ತೋರಿಸಿಕೊಟ್ಟಿದೆ.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮುಖ್ಯ ಅತಿಥಿಯಾಗಿದ್ದರು. ರೈಸಿಂಗೇ ಡೇ ಆಚರಣೆ ಅಂಗವಾಗಿ ವಿವಿಧ ಕವಾಯತುಗಳನ್ನು ಮತ್ತು ಅಣಕು ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಅಣಕು ಪ್ರದರ್ಶನದಲ್ಲಿ ಕೋಸ್ಟ್ ಗಾರ್ಡ್ ದೈತ್ಯ ಹಡಗು ಐಸಿಜಿ ವಿಕ್ರಮ, ಐಸಿಜಿ ಅಮರ್ತ್ಯ, ಐಸಿಜಿ ಕಸ್ತೂರ್ಬಾ ಗಾಂಧಿ, ಐಸಿಜಿ ಸಾವಿತ್ರಿಬಾಯಿ ಫುಲೆ, ಎರಡು ಇಂಟರ್ ಸೆಪ್ಟ್ ಬೋಟುಗಳು, ಎರಡು ಡೊಮಿನಿಯರ್ ಏರ್ ಕ್ರಾಫ್ಟ್ ಹೆಲಿಕಾಪ್ಟರ್ ಭಾಗವಹಿಸಿದ್ದವು.
ನುಸುಳುಕೋರರು ಬೋಟಿನಲ್ಲಿ ಸಮುದ್ರ ಮುಖೇನ ಒಳಹೊಕ್ಕಾಗ ಡೊಮಿನಿಯರ್ ಹೆಲಿಕಾಪ್ಟರ್ ನಲ್ಲಿ ಅದನ್ನು ಹಿಮ್ಮೆಟ್ಟಿಸುವುದನ್ನು ತೋರಿಸಲಾಯಿತು. ಅಲ್ಲದೆ, ಸ್ಪೀಡ್ ಬೋಟ್ ಗಳಿಂದ ಅವನ್ನು ಸುತ್ತುವರಿದು ಆಗಂತುಕರನ್ನು ಸೆರೆಹಿಡಿಯುವ ಸನ್ನಿವೇಶವನ್ನು ನಿಜವೋ ಅನ್ನುವಂತೆ ಕೋಸ್ಟ್ ಗಾರ್ಡ್ ಯೋಧರು ಪ್ರಸ್ತುತ ಪಡಿಸಿದರು. ಅಲ್ಲದೆ, ಸಮುದ್ರ ಮಾರ್ಗದಲ್ಲಿ ನುಸುಳಿ ಬರುವ ಉಗ್ರರನ್ನು 51 ಎಂಎಂ ಮೊರಾಟ್ ಫೈಟರ್ ಮೂಲಕ ಫೈರ್ ಮಾಡಿ ಹಿಮ್ಮೆಟ್ಟಿಸುವ ಮೈ ಜುಮ್ಮೆನಿಸುವ ಕಾರ್ಯಾಚರಣೆ, ಆಳ ಸಮುದ್ರದಲ್ಲಿ ಬೆಂಕಿ ಹತ್ತಿಕೊಂಡ ಬೋಟ್ ಒಂದನ್ನು ನೀರು ಹಾಯಿಸಿ ಅಪಾಯದಿಂದ ಪಾರು ಮಾಡುವ ಸನ್ನಿವೇಶ, ಬೋಟಿನಿಂದ ಸಮುದ್ರಕ್ಕೆ ಬಿದ್ದವರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸುವ ಕಾರ್ಯಾಚರಣೆ ಮಾಡಲಾಯಿತು. ಇದಲ್ಲದೆ, ಕೋಸ್ಟ್ ಗಾರ್ಡ್ ಯುದ್ಧಕ್ಕೂ ಸೈ, ಆಪತ್ಕಾಲದ ಕಾರ್ಯಾಚರಣೆಗೂ ಸೈ ಎನ್ನುವುದನ್ನು ಪ್ರದರ್ಶನ ಮಾಡಲಾಯಿತು.
ಭಾರತದ ಸುದೀರ್ಘ ಕಡಲ ತೀರವನ್ನು ಕಣ್ಗಾವಲು ಮತ್ತು ರಕ್ಷಣೆಯ ಹೊಣೆ ಹೊತ್ತಿರುವ ಕೋಸ್ಟ್ ಗಾರ್ಡ್ ಯಾವುದೇ ಕಠಿಣ ಪರಿಸ್ಥಿತಿಯನ್ನೂ ನಿಭಾಯಿಸುವುದಕ್ಕೆ ಸರ್ವ ಸನ್ನದ್ಧ ಇದೆಯೆನ್ನುವುದನ್ನು ರೈಸಿಂಗ್ ಡೇ ಮೂಲಕ ಸಾಬೀತುಪಡಿಸಿದೆ.
Governor of Karnataka, Thaawar Chand Gehlot visited the New Mangalore Port on 23rd February 2024, on its 50th year in the service of the Nation. The Governor arrived in Mangalore on February 22 for the 48th Indian Coast Guard Raising Day after which he visited the Port on its completion of 50 years of service since the first cargo vessel “MV SATSU MARU” arrived on 10 June 1974.
26-11-24 06:56 pm
Bangalore Correspondent
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
ಜೆಡಿಎಸ್ ನಲ್ಲಿ ಭವಿಷ್ಯ ಇಲ್ಲ, ದೇವೇಗೌಡರಿಗೆ ಜನ ಗೌರ...
25-11-24 05:51 pm
ಮನೆಯೊಂದು ಮೂರು ಬಾಗಿಲು, ಗೆಲುವು ಕಸಿದ ಬಿಜೆಪಿ ಒಳಜಗ...
25-11-24 03:28 pm
26-11-24 07:32 pm
HK News Desk
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
26-11-24 08:23 pm
Udupi Correspondent
Mangalore, Police Anupam Agarwal IPS, DYFI; ಸ...
26-11-24 05:37 pm
Mangalore Astra Group, lucky draw: ಕಾರು, ಫ್ಲಾ...
25-11-24 11:14 pm
Vithoba Rukumai temple case, Mangalore: ವಿಠೋಬ...
25-11-24 10:39 pm
Ullal Dargah, Mangalore: ಎಪ್ರಿಲ್ 24 ರಿಂದ ಮೇ...
25-11-24 02:44 pm
26-11-24 03:10 pm
Mangalore Correspondent
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm