ಬ್ರೇಕಿಂಗ್ ನ್ಯೂಸ್
24-02-24 12:18 pm Mangalore Correspondent ಕರಾವಳಿ
ಪುತ್ತೂರು, ಫೆ.24 : ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ-2 ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಇದರ ನಡುವೆ, ಕಾಂತಾರ ಸಿನಿಮಾದಲ್ಲಿ ರಾಜನ ಪಾತ್ರದಲ್ಲಿ ಮಿಂಚಿದ್ದ ನಟ ವಿನಯ್ ಬಿದ್ದಪ್ಪ ಪುತ್ತೂರಿಗೆ ಬಂದಿದ್ದು ಕಲ್ಲುರ್ಟಿ ದೈವದ ಆಶೀರ್ವಾದ ಪಡೆದಿದ್ದಾರೆ.
ಕಾಂತಾರ-೨ರಲ್ಲಿ ಪ್ರಮುಖ ಪಾತ್ರ ವಹಿಸಲಿರುವ ವಿನಯ್ ಬಿದ್ದಪ್ಪ ಪುತ್ತೂರಿನ ಪನಡ್ಕದಲ್ಲಿ ನಡೆದ ದೈವದ ನೇಮದಲ್ಲಿ ಕಲ್ಲುರ್ಟಿ ದೈವದ ಬಳಿ ಸಿನಿಮಾ ಶೂಟಿಂಗ್ ಬಗ್ಗೆ ಬೇಡಿಕೊಂಡಿದ್ದಾರೆ. ಆಗ ಧರ್ಮಕ್ಕೆ ಅಪಚಾರ ಆಗದ ರೀತಿ ಸಿನಿಮಾ ಮಾಡಿ, ನಿಮಗೆ ಯಶಸ್ಸಾಗ್ತದೆ ಎಂದು ದೈವ ಅಭಯ ನೀಡಿದೆ ಎಂದು ತಿಳಿದುಬಂದಿದೆ.
ಬಿಝಿ ನಟರಾಗಿರುವ ವಿನಯ್ ಬಿದ್ದಪ್ಪ ಕೆಜಿಎಫ್ ನಂತಹ ಸಿನಿಮಾದಲ್ಲಿ ನಟಿಸಿದ್ದಾರೆ. ಎಲ್ಲಾ ಸಿನಿಮಾಗಳನ್ನು ತ್ಯಾಗ ಮಾಡಿ ಎರಡು ವರ್ಷಗಳ ಕಾಲ್ ಶೀಟನ್ನು ರಿಷಬ್ ಶೆಟ್ಟಿ ಪಡೆದಿದ್ದಾರೆ ಎನ್ನಲಾಗಿದೆ. ಕಾಂತಾರ-2 ಶೂಟಿಂಗ್ ಉದ್ದೇಶಕ್ಕೆ ವಿನಯ್ ಬಿದ್ದಪ್ಪ, ರಿಷಬ್ ಜೊತೆಗಿದ್ದಾರೆ.
ಈಗಾಗಲೇ ದೈವಾರಾಧನೆ ಸಿನಿಮಾದಲ್ಲಿ ಬಳಸಬಾರದೆಂದು ಪ್ರಬಲ ವಿರೋಧ ಎದುರಾಗಿರುವಾಗಲೇ ಕಾಂತಾರ-2 ಶೂಟಿಂಗ್ ನಡೆಯುತ್ತಿದೆ. ಸಿನಿಮಾದಲ್ಲಿ ದೈವದ ಪಾತ್ರ ಇಲ್ಲ ಎನ್ನಲಾಗುತ್ತಿದ್ದರೂ, ಮೊದಲ ಭಾಗದಲ್ಲಿ ಪಂಜುರ್ಲಿ ದೈವದ ಕಾರಣಿಕ ತೋರಿಸುವ ಚಿತ್ರಣವೇ ಮುಖ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಮುಖ ಪಾತ್ರಧಾರಿ ವಿನಯ್ ಬಿದ್ದಪ್ಪ ಇದೀಗ ಕಲ್ಲುರ್ಟಿ ದೈವದ ಮೊರೆ ಹೋಗಿದ್ದಾರೆ.
Puttur Vinay Bidappa offers prayers with Daiva for the movie shooting of Kantara 2.
13-01-26 03:04 pm
Bangalore Correspondent
ಉಪನ್ಯಾಸಕರ ಟಾರ್ಚರ್ ಎಂದು ಡೆಂಟಲ್ ವಿದ್ಯಾರ್ಥಿನಿ ಆತ...
13-01-26 12:57 pm
Gadag Lakkundi, Gold: ಲಕ್ಕುಂಡಿ ನಿಧಿ ಪತ್ತೆ ಜಾಗ...
12-01-26 08:20 pm
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
13-01-26 06:39 pm
HK News Desk
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
13-01-26 05:28 pm
HK News Desk
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm